News

ಭಾರತದಲ್ಲಿ ಪತ್ತೆಯಾದ ಕರೋನಾ ರೂಪಾಂತರಿ ಜಿ.ಎನ್-1, ಕೇರಳದಲ್ಲಿ ಪತ್ತೆ, ಕರ್ನಾಟಕದಲ್ಲಿ ತುರ್ತುಸಭೆ….!

ಎರಡು ವರ್ಷಗಳ ಹಿಂದೆಯಷ್ಟೆ ಇಡೀ ವಿಶ್ವವವನ್ನೇ ತಲ್ಲಣಗೊಳಿಸಿದಂತಹ ಕರೋನಾ ವೈರಸ್ ಧಾಳಿಯಿಂದ ಈಗಲೂ ಸಹ ಅನೇಕರು ಹೊರಬಂದಿಲ್ಲ. ಇದೀಗ ಮತ್ತೆ ಕೋವಿಡ್ ರೂಪಾಂತರಿ ವೈರಸ್ ಒಂದು ಭಾರತದ ಕೇರಳದಲ್ಲಿ ಪತ್ತೆಯಾಗಿದ್ದು, ದೇಶದಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳದಲ್ಲಿ ಕೋವಿಡ್ ಪಾಸಿಟೀವ್ ಸಂಖ್ಯೆ ಹೆಚ್ಚಾದ ಕಾರಣದಿಂದ ಕರ್ನಾಟಕದಲ್ಲಿ ಸಹ ಆತಂಕ ಶುರುವಾಗಿದೆ. ಕರ್ನಾಟಕದಲ್ಲಿ ಆರೋಗ್ಯ ಸಚಿವರು ತುರ್ತು ಸಭೆ ಸಹ ನಡೆಸಿದ್ದಾರೆ ಎನ್ನಲಾಗಿದೆ.

ಮತ್ತೊಮ್ಮೆ ಮಹಾಮಾರಿ ಕೋವಿಡ್ ವಿಶ್ವದಾಧ್ಯಂತ ದಾಳಿ ಮಾಡಲಿದೆ ಎನ್ನಲಾಗಿದೆ. ದಿನೇ ದಿನೇ ಕೋವಿಡ್ ಪಾಸಿಟೀವ್ ಕೇಸ್ ಗಳು ಹೆಚ್ಚಾಗುತ್ತಿವೆ. ಈಗಾಗಲೇ ಅಮೇರಿಕಾ, ಚೀನಾ, ಫ್ರಾನ್ಸ್, ಬ್ರಿಟನ್ ದೇಶಗಳಲ್ಲಿ ಕೋವಿಡ್ ರೂಪಾಂತರಿ ಜಿ.ಎನ್-1 ಭಾರತದಲ್ಲೂ ಸಹ ಕಂಡುಬಂದಿದೆ. ಕೇರಳದಲ್ಲಿ ಈ ರೂಪಾಂತರಿಯ ಮೊದಲ ಕೇಸ್ ಪತ್ತೆಯಾಗಿದೆ. ಜಿ.ಎನ್-1 ಒಮಿಕ್ರಾನ್ ಉಪ ತಳಿ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಇದನ್ನು ಪಿರೋಲಾ ಎಂದೂ ಸಹ ಕರೆಯಲಾಗುತ್ತದೆ. ಇದು ಅಷ್ಟೊಂದು ಅಪಾಯಕಾರಿನಾ ಅಲ್ಲವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಹರಡುವಿಕೆಯಲ್ಲಿ ಮಾತ್ರ ತುಂಬಾನೆ ಜೋರಾಗಿದೆ ಎನ್ನಬಹುದಾಗಿದೆ. ಇತ್ತೀಚಿಗಷ್ಟೆ ಕೇರಳದ ಕಣ್ಣೂರಿನ 80 ವರ್ಷದ ವೃದ್ದರೊಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಕೇರಳದಲ್ಲಿ ಕೋವಿಡ್ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದು, ಇದರಿಂದ ನೆರೆಯ ಕರ್ನಾಟಕದಲ್ಲೂ ಸಹ ಆತಂಕ ಹೆಚ್ಚಾಗಿದೆ. ಕೇರಳದಲ್ಲಿ ಕೋವಿಡ್ ಪಾಸಿಟೀವ್ ಕೇಸ್ ಗಳು ಹೆಚ್ಚಾಗುತ್ತಿರುವ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳ ಮೇಲೆಯೂ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ. ಇದೀಗ ಕರ್ನಾಟಕದಲ್ಲೂ ಸಹ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ತುರ್ತು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಜನರು ಆತಂಕ ಪಡುವ ಅವಶ್ಯಕತೆಯಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಿ ಎಂದು ತಜ್ಞರು ಸಲಹೆಗಳನ್ನು ನೀಡಿದ್ದಾರೆ.

Most Popular

To Top