ಹುಟ್ಟುಹಬ್ಬದಂದು ಶ್ರೀಲೀಲಾಗೆ ಭಾರಿ ಸರ್ಪ್ರೈಸ್, ಅಲ್ಲು ಅರ್ಜುನ್ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಕನ್ನಡದ ಬ್ಯೂಟಿ…!

ಸದ್ಯ ಸೌತ್ ಸಿನಿರಂಗದಲ್ಲಿ ಕನ್ನಡ ಸಿನಿರಂಗದ ನಟಿ ಶ್ರೀಲೀಲಾ ಹವಾ ಜೋರಾಗಿಯೇ ಇದೆ. ಸೌತ್ ನ ಸ್ಟಾರ್‍ ನಟಿಯರಿಗೆ ಶ್ರೀಲೀಲಾ ದೊಡ್ಡ ಪೈಪೋಟಿ ನೀಡುತ್ತಿದ್ದಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಸದ್ಯ ತೆಲುಗು ಸಿನಿರಂಗದಲ್ಲಿ ಶ್ರೀಲೀಲಾ ಪುಲ್ ಬ್ಯುಸಿಯಾಗಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಮುನ್ನುಗ್ಗುತ್ತಿದ್ದಾರೆ. ಇಂದು (ಜೂ.14) ಅವರ ಹುಟ್ಟುಹಬ್ಬವಾಗಿದ್ದು, ಅದನ್ನು ಮತಷ್ಟು ವಿಶೇಷವಾಗಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದಂದು ಹೊಸ ಪ್ರಾಜೆಕ್ಟ್ ಸಹ ಅನೌನ್ಸ್ ಮಾಡಲಾಗಿದೆ.

ನಟಿ ಶ್ರೀಲೀಲಾ ಸದ್ಯ ಟಾಲಿವುಡ್ ನಲ್ಲಿ ಭಾರಿ ಸಕ್ಸಸ್ ಕಂಡುಕೊಂಡ ನಟಿಯಾಗಿದ್ದಾರೆ. ಆಕೆ ಊಹಿಸದ ರೀತಿಯಲ್ಲಿ ಸಕ್ಸಸ್ ಕಂಡುಕೊಂಡು ಸ್ಟಾರ್‍ ಹಿರೋಗಳ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದ್ಬುತವಾದ ನಟನೆ, ಎನರ್ಜೆಟಿಕ್ ಡ್ಯಾನ್ಸ್, ಚಾಲಾಕಿತನದ ಮೂಲಕ ಮಾತ್ರವಲ್ಲದೇ ಗ್ಲಾಮರ್‍ ಪರವಾಗಿ ಸಹ ಆಕೆ ಎಲ್ಲರನ್ನೂ ಫಿದಾ ಮಾಡುತ್ತಿದ್ದಾರೆ. ಇಂದು ಆಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನೂ ಆಕೆಯ ಹುಟ್ಟುಹಬ್ಬದ ಅಂಗವಾಗಿ ಆಕೆ ನಟಿಸುತ್ತಿರುವ ಸಿನೆಮಾಗಳ ಹೊಸ ಪೋಸ್ಟರ್‍ ಗಳ ಮೂಲಕ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇದರ ಜೊತೆಗೆ ಹೊಸ ಪ್ರಾಜೆಕ್ಟ್ ಗಳು ಸಹ ಘೋಷಣೆ ಯಾಗಿದೆ. ಈಗಾಗಲೇ ತೆಲುಗು ಸಿನಿರಂಗದ ಟಾಪ್ ನಟರಾದ ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣ ರವರ ಸಿನೆಮಾಗಳಲ್ಲಿ ನಟಿಸುತ್ತಿರುವ ಈಕೆ ಇದೀಗ ಮತ್ತೋರ್ವ ಸ್ಟಾರ್‍ ನಟನ ಜೊತೆಗೆ ನಟಿಸಲಿದ್ದಾರಂತೆ.

ಯಂಗ್ ಬ್ಯೂಟಿ ಶ್ರೀಲೀಲಾ ಇದೀಗ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಆಹಾ ಒಟಿಟಿ ಸಂಸ್ಥೆ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಡೈರೆಕ್ಟ್ ಮಾಡಲಿರುವ ಪ್ರಾಜೆಕ್ಟ್ ಒಂದರಲ್ಲಿ ಆಕೆ ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರಂತೆ. ಈ ಸಂಬಂಧ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‍ ನಲ್ಲಿ ಅಲ್ಲು ಅರ್ಜುನ್ ಕಂಕಳಲ್ಲಿ ಶ್ರೀಲೀಲಾ ಕುಳಿತಿದ್ದಾರೆ. ಈ ಪೋಸ್ಟರ್‍ ಇದೀಗ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಇನ್ನೂ ಇದು ಸಿನೆಮೆನಾ, ವೆಬ್ ಸಿರೀಸ್ ಇರಬಹುದಾ ಅಥವಾ ಒಟಿಟಿ ಸಿನೆಮಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾ ಆಹಾ ಒರಿಜಿನಲ್ಸ್ ಅನ್ನು ಅಲ್ಲು ಅರ್ಜುನ್ ಲಾಂಚ್ ಮಾಡಲಿದ್ದು, ಅದರ ಜಾಹಿರಾತು ಶೂಟ್ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಆಹಾ ಒರಿಜಿನಲ್ಸ್ ಮೂಲಕ ವೆಬ್ ಸಿರೀಸ್, ವೆಬ್ ಸಿನೆಮಾಗಳನ್ನು ಸಹ ನಿರ್ಮಾಣ ಮಾಡಲಾಗುತ್ತದೆ ಎಂದೂ ಸಹ ತಿಳಿದು ಬಂದಿದೆ.

ಇನ್ನೂ ಶ್ರೀಲೀಲಾ ಹುಟ್ಟುಹಬ್ಬದ ಅಂಗವಾಗಿ ಮಹೇಶ್ ಬಾಬು ಜತೆಗೆ ನಟಿಸುತ್ತಿರುವ ಗುಂಟೂರು ಕಾರಂ ನಿಂದ ಸಹ ಪೋಸ್ಟರ್‍ ಒಂದನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಆಕೆಯ ಕೈಯಲ್ಲಿ ಒಟ್ಟು ಎಂಟು ಸಿನೆಮಾಗಳಿವೆ. ಉಸ್ತಾದ್ ಭಗತ್ ಸಿಂಗ್, ಭಗವಂತ್ ಕೇಸರಿ, ಗುಂಟೂರು ಕಾರಂ, ಆದಿಕೇಶವ ಸೇರಿದಂತೆ ತೆಲುಗು ಹಾಗೂ ಕನ್ನಡ ಸಿನೆಮಾಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ.