Film News

ರೂಮರ್ ಗಳ ನಡುವೆಯೇ ಪ್ರಭಾಸ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಕೃತಿ ಸನನ್….!

ಆದಿಪುರುಷ್ ಸಿನೆಮಾ ಆರಂಭವಾದಾಗಿನಿಂದ ಸ್ಟಾರ್‍ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನನ್ ಬಗ್ಗೆ ಡೇಟಿಂಗ್ ನಲ್ಲಿದ್ದಾರೆಂಬ ರೂಮರ್‍ ಕೇಳಿಬರುತ್ತಲೇ ಇದೆ. ಆದಿಪುರುಷ್ ಸಿನೆಮಾದ ಟ್ರೈಲರ್‍ ಬಿಡುಗಡೆ ಸಮಾರಂಭದಲ್ಲೂ ಸಹ ಅವರು ಕೊಂಚ ಪ್ರೀತಿಯಿಂದ ಕಾಣಿಸಿಕೊಂಡಿದ್ದು. ಈ ರೂಮರ್‍ ಗೆ ಮತಷ್ಟು ಬಲ ತಂದಿತ್ತು. ಇನ್ನೂ ಈ ರೂಮರ್‍ ಗಳು ಹರಿದಾಡುತ್ತಲೇ ಇದೆ. ರೂಮರ್‍ ಗಳು ಹರಿದಾಡುತ್ತಿರುವ ಸಮಯದಲ್ಲೇ ಕೃತಿ ಸನನ್ ಮತ್ತೊಮ್ಮೆ ಪ್ರಭಾಸ್ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಖ್ಯಾತ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ರಾಮಾಯಣದ ಕಥೆಯನ್ನು ಆಧರಿಸಿ ಈ ಸಿನೆಮಾ ಏಕಕಾಲದಲ್ಲಿ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಸಿನೆಮಾದಲ್ಲಿ ಶ್ರೀರಾಮ ಪಾತ್ರದಲ್ಲಿ ಪ್ರಭಾಸ್, ಸೀತೆಯ ಪಾತ್ರದಲ್ಲಿ ಕೃತಿ ಸನನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಜೂನ್ 16 ರಂದು ಬಿಡುಗಡೆಯಾಗಲಿದೆ. ಇನ್ನೂ ಇತ್ತೀಚಿಗೆ ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಎಲ್ಲರನ್ನೂ ಆಕರ್ಷಣೆ ಮಾಡಿತ್ತು. ಈ ನಡುವೆ ಕೃತಿ ಹಾಗೂ ಪ್ರಭಾಸ್ ನಡುವೆ ಅಫೈರ್‍ ನಡೆಯುತ್ತಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಯುತ್ತಿದೆ. ಈ ಹಿಂದೆ ಕ್ರಿಟಿಕ್ ಉಮೈರ್‍ ಸಂಧು ಸಹ ಈ ಬಗ್ಗೆ ಕೆಲವೊಂದು ಟ್ವೀಟ್ ಗಳನ್ನು ಮಾಡಿದ್ದರು. ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಸಹ ಕೆಲವೊಂದು ಕಾಮೆಂಟ್ಸ್ ಮಾಡಿದ್ದರು. ಇದರಿಂದ ಅವರ ನಡುವೆ ಅಫೈರ್‍ ಇದೆ ಎಂಬ ರೂಮರ್‍ ಜೋರಾಗಿಯೇ ಕೇಳಿಬಂತು.

ಕಳೆದ ವರ್ಷ ವರುಣ್ ಧವನ್ ಬೆಡಿಯಾ ಎಂಬ ಸಿನೆಮಾದ ಪ್ರಮೋಷನ್ ಗಾಗಿ ಬಾಲಿವುಡ್ ಶೋ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಂಕರ್‍ ಕರಣ್ ಜೋಹರ್‍ ವರುಣ್ ಗೆ ಪ್ರಶ್ನೆಯೊಂದನ್ನು ಕೇಳಿದ್ದರು. ವರುಣ್ ಧವನ್ ನಿನ್ನ ಹೃದಯದಲ್ಲಿ ಕೃತಿ ಸನನ್ ಹೆಸರನ್ನು ಇಟ್ಟುಕೊಂಡು ಇಲ್ಲ ಎಂದು ಏಕೆ ಹೇಳುತ್ತೀಯಾ ಎಂದಿದ್ದರು. ಅದರಕ್ಕೆ ಕೃತಿ ಹೆಸರು ಬೇರೋಬ್ಬರ ಹೃದಯಲ್ಲಿದೆ, ಆತ ಮುಂಬೈನಲ್ಲಿ ಇಲ್ಲ, ಬೇರೆ ಕಡೆ ದೀಪಿಕಾ ಪಡುಕೋಣೆ ಜೊತೆಗೆ ಶೂಟಿಂಗ್ ನಲ್ಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದರು. ಆ ಮೂಲಕ ಕೃತಿ ಪ್ರಭಾಸ್ ಪ್ರೀತಿಯಲ್ಲಿದ್ದಾರೆ ಎಂಬುದಾಗಿ ಅವರು ಹೇಳಿದ್ದರು. ಇನ್ನೂ ಈ ರೂಮರ್‍ ಗಳು ಹರಿದಾಡುತ್ತಿರುವಾಗಲೇ ಕೃತಿ ಸನನ್ ಪ್ರಭಾಸ್ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಪ್ರಭಾಸ್ ರವರನ್ನು ಕೃತಿ ಸನನ್ ತುಂಬಾನೆ ಹೊಗಳಿದ್ದಾರೆ. ಪ್ರಭಾಸ್ ತುಂಬಾ ಪ್ರಶಾಂತವಾಗಿರುತ್ತಾರೆ. ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ಮೊದಲಿಗೆ ತುಂಬಾ ಕಡಿಮೆ ಮಾತನಾಡುತ್ತಿದ್ದರು. ನಮಗೆ ಬಾರದ ಭಾಷೆಯಲ್ಲಿ ನಟಿಸುವುದು ಕೊಂಚ ಕಷ್ಟ. ಈ ವಿಚಾರ ನನಗೆ ತಡವಾಗಿ ಅರ್ಥವಾಯ್ತು. ನಾನು ಸಾಮಾನ್ಯವಾಗಿಯೇ ಮಾತನಾಡುತ್ತಿದ್ದೆ. ಆದರೆ ಪ್ರಭಾಸ್ ಮಾತ್ರ ಒಪೆನ್ ಆಗಿಯೇ ಮಾತನಾಡುತ್ತಿದ್ದಾರೆ. ತನ್ನ ಕೆಲಸ ತಾನು ಮಾಡಿಕೊಂಡು ಸೈಲೆಂಟ್ ಆಗಿ ಹೋಗುತ್ತಾರೆ.  ಪ್ರಭಾಸ್ ರವರನ್ನು ಬಿಟ್ಟು ಬೇರೆ ಯಾರನ್ನೂ ರಾಮನ ಪಾತ್ರದಲ್ಲಿ ಊಹಿಸಿಕೊಳ್ಳಲಾರೆ ಎಂದು ಹೇಳಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top