Film News

ದರ್ಶನ್, ಸುದೀಪ್, ಶಿವಣ್ಣ ಹಾಗೂ ಯಶ್ ಮಾತ್ರ ಕಾಣಿಸುತ್ತಾರಾ ಎಂದ ದರ್ಶನ್, ಏಕೆ ಗೊತ್ತಾ?

ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ಸಿನೆಮಾ ನಟರು ಬೆಂಬಲ ನೀಡುತ್ತಿಲ್ಲ ಎಂದು ರೈತರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರುಗಳೂ ದೊಡ್ಡ ಮಟ್ಟದಲ್ಲಿ ಆಕ್ರೋಷ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೆ ಕೆಲವು ಸಿನೆಮಾ ನಟರು ಬೆಂಬಲ ಸೂಚಿಸಿದರು. ಇದೀಗ ದರ್ಶನ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡುತ್ತಾ ಕಾವೇರಿ ಹೋರಾಟದ ಮೌನ ಮುರಿದಿದ್ದಾರೆ. ಈ ವೇಳೆ ನಿಮಗೆ ದರ್ಶನ್, ಸುದೀಪ್, ಶಿವಣ್ಣ ಹಾಗೂ ಯಶ್ ಮಾತ್ರ ಕಾಣಿಸುತ್ತಾರಾ ಎಂದು ಗರಂ ಆಗಿದ್ದಾರೆ.

ಕರ್ನಾಟಕ ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಾವೇರಿ ಹೋರಾಟದ ಬಗ್ಗೆ ಮಾತನಾಡುತ್ತಾ ಮೌನ ಮುರಿದಿದ್ದಾರೆ. ದರ್ಶನ್ ಮಾತನಾಡುತ್ತಾ ಕೆಲವು ದಿನಗಳಿಂದ ಸಿನೆಮಾ ಕಲಾವಿದರು ಹೋರಾಟಕ್ಕೆ ಬರುತ್ತಿಲ್ಲ ಅಂತಾ ಹೇಳ್ತಾ ಇದ್ದೀರಾ, ಕಳೆದೆರಡು ದಿನಗಳ ಹಿಂದೆಯಷ್ಟೆ ತಮಿಳು ಸಿನೆಮಾ ಸಹ ರಿಲೀಸ್ ಆಯ್ತು ಅಲ್ವಾ, ಅದನ್ನು ವಿತರಕರೊಬ್ಬರು ಆರು ಕೋಟಿಗೆ ಖರೀದಿ ಮಾಡಿದ್ರು, ಆ ಸಿನೆಮಾದಿಂದ 36 ಕೋಟಿ ಆದಾಯ ಸಹ ಕರ್ನಾಟಕದಲ್ಲಿ ಗಳಿಸಿದ್ದಾರೆ. ಆ ಸಿನೆಮಾ ನೋಡಿದ್ದು, ಕನ್ನಡಿಗರೇ ತಾನೇ, ಏನಾದರೂ ಮಾಡಿ ಬೇರೆ ಭಾಷೆಯ ಸಿನೆಮಾಗಳಿಗೆ ಕೋಟಿ ಕೋಟಿ ಆದಾಯ ಕೊಡುತ್ತೀರಾ, ಅದೇ ರೀತಿ ಕನ್ನಡ ಸಿನೆಮಾಗೆ ಏಕೆ ಕೊಡುವುದಿಲ್ಲ. ನೀವು ಕನ್ನಡ ಸಿನೆಮಾಗೆ ಕೊಟ್ಟರೆ ಮಾತ್ರ ಕಲಾವಿದರು ಹೋರಾಟಕ್ಕೆ ಬರುತ್ತಾರೆ ಸ್ವಾಮಿ ಎಂದು ಖಾರವಾಗಿಯೇ ಮಾತನಾಡಿದ್ದಾರೆ.

ಒಂದು ತಮಿಳು ಸಿನೆಮಾ ಅಥವಾ ಬೇರೆ ಭಾಷೆಯ ಸಿನೆಮಾಗಳನ್ನು ವೀಕ್ಷಣೆ ಮಾಡುವುದು ದೊಡ್ಡತನ ಎಂದುಕೊಳ್ಳೊಣ ಆದರೆ ಹೋರಾಟಕ್ಕೆ ಬರಲಿಲ್ಲವೆಂದು ಹೇಳಿದಾಗ ಮಾಆತ್ರ ಯಾಕೇ ನೀವು ಅವರ ಬಾಯಿ ಬಂದ್ ಮಾಡಲ್ಲ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮತ್ತೊಬ್ರು, ಇನ್ನೊಬ್ರು ಅಷ್ಟೇನಾ ಕಾಣಿಸೋದಾ? ಯಾಕೆ ನೀವು 36 ಕೋಟಿ ಕೋಟ್ರಲ್ವಾ ಅವರು ಯಾರು ಕಾಣಿಸೊಲ್ವಾ? ಅವರನ್ನು ಹೋರಾಟಕ್ಕೆ ಕರೆಯೊಲ್ವಾ ಎಂದು ಗುಡುಗಿದರು. ನೋಡಿದ್ರಾ ಎಲ್ಲರೂ ಸುಮ್ಮನಾಗಿಬಿಟ್ರಿ, ನಾನು ಮಾತನಾಡಿದ್ರೆ ಕೆಟ್ಟದಾಗಿರುತ್ತದೆ ಎಂದಿದ್ದಾರೆ. ಈ ಬಗ್ಗೆ ದರ್ಶನ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Most Popular

To Top