Film News

ನಾನು ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ ಎಂದ ಕಮಲ್ ಹಾಸನ್, ವೈರಲ್ ಆದ ಕಾಮೆಂಟ್ಸ್…..!

ದೇಶದ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ನಟರಲ್ಲಿ ಕಮಲ್ ಹಾಸನ್ ಒಬ್ಬರಾಗಿದ್ದಾರೆ.  ವಯಸ್ಸಾದರೂ ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿರಂಗದ ಕಲಾವಿದರು ತಮ್ಮ ಜೀವನದಲ್ಲಾದ ಕೆಲವೊಂದು ಕಹಿ ಘಟನೆಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಕಮಲ್ ಹಾಸನ್ ರವರೂ ಸಹ ತಾವು ಈ ಹಿಂದೆ ಕೆಲವೊಂದು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚನೆ ಮಾಡಿದ್ದಾಗಿ ಹೇಳಿದ್ದು, ಅವರ ಕಾಮೆಂಟ್ ಗಳು ವೈರಲ್ ಆಗುತ್ತಿದೆ. ಅಷ್ಟಕ್ಕೂ ಕಮಲ್ ಹಾಸನ್ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದು ಯಾಕೆ ಎಂಬ ವಿಚಾರಕ್ಕೆ ಬಂದರೇ,

ಇತ್ತೀಚಿಗೆ ಚೆನೈನಲ್ಲಿ ನಡೆದ ಈವೆಂಟ್ ಒಂದರಲ್ಲಿ ಕಮಲ್ ಹಾಸನ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದಾರೆ. ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಕಮಲ್ ಹಾಸನ್ ರವರಿಗೆ 20 ವರ್ಷ ವಯಸ್ಸಿದ್ದಾಗ ಮೊದಲ ಬಾರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದರಂತೆ. ಸಿನಿರಂಗದಲ್ಲಿ ಒಳ್ಳೆಯ ಹೆಸರು ಬರಲಿಲ್ಲ ಎಂದು ನೋವುಪಟ್ಟರಂತೆ. ಆದರೆ ನಾನು ಸತ್ತರೇ ಪ್ರತಿಭಾವಂತ ಕಲಾವಿದನನ್ನು ಸಿನಿರಂಗ ಕಳೆದುಕೊಂಡು ದುಃಖಿಸುತ್ತದೆ ಎಂದು ಭಾವಿಸಿದೆ. ಇದೇ ವಿಚಾರವನ್ನು ತನ್ನ ಗುರುವಾದ ಹೇಳಿದ್ದರಂತೆ. ಅವರು ನಿನ್ನ ಕೆಲಸ ನೀನು ಮಾಡಿಕೊಂಡು ಹೋಗು. ಸರಿಯಾದ ಸಮಯ ಬಂದಾಗ ಖ್ಯಾತಿ ಬರುತ್ತದೆ ಎಂದು ಹೇಳಿದ್ದರು. ಅದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಾದ ನಿರ್ಧಾರವಲ್ಲ ಎಂದು, ಕೊಲೆ ಎಷ್ಟು ಅಪರಾಧವೋ, ಆತ್ಮಹತ್ಯೆ ಸಹ ಅಷ್ಟೇ ಅಪರಾಧ ಎಂದುಕೊಂಡರಂತೆ.

ಕತ್ತಲು ಎಂಬುದು ಎಲ್ಲರಲ್ಲೂ ಬರುತ್ತದೆ, ಆದರೆ ಅದು ಶಾಶ್ವತವಲ್ಲ, ಅದೇ ರೀತಿ ಬೆಳಕು ಸಹ ಅಷ್ಟೆ. ಎರಡನ್ನೂ ಬ್ಯಾಲೆನ್ಸ್ ಮಾಡಬೇಕು ಅದೇ ಜೀವನ. ನಿದ್ದೆ ಮಾಡುವಾಗ ಬರೊದು ಕನಸು, ನಿದ್ದೆಯಿಲ್ಲದೇ ಮಾಡುವಂತಹುದೇ ನಿಜವಾದ ಕನಸು. ಜೀವನದಲ್ಲಿ ಸಾವು ಎಂಬುದು ಒಂದು ಭಾಗ. ಅದಕ್ಕಾಗಿ ನಾವು ಎದುರು ನೋಡಬಾರದು. ದಿನನಿತ್ಯ ನಾವು ಮಲಗುವ ಮುಂಚೆ ನಮ್ಮ ಗುರಿಯನ್ನು ನೆನಪಿಸಿಕೊಳ್ಳಬೇಕು. ಅದು ಈಡೇರುತ್ತಾ ಇಲ್ಲವೇ ಎಂಬುದು ಮುಂದಿನ ಸಂಗತಿ, ಅದಕ್ಕಾಗಿ ನೀನು ಎಷ್ಟರ ಮಟ್ಟಿಗೆ ಕೆಲಸ ಮಾಡಬೇಕು ಎಂಬುದನ್ನು ಆಲೋಚನೆ ಮಾಡಬೇಕು ಎಂದು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಇನ್ನೂ ಕಮಲ್ ಹಾಸನ್ ರವರ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕೊನೆಯದಾಗಿ ಕಮಲ್ ಹಾಸನ್ ವಿಕ್ರಂ ಎಂಬ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಕಂಡುಕೊಂಡರು. ಸದ್ಯ ಕಮಲ್ ಹಾಸನ್ ಭಾರಿ ನಿರೀಕ್ಷೆ ಹುಟ್ಟಿಸಿರುವ ಇಂಡಿಯನ್-2 ಸಿನೆಮಾದಲ್ಲಿ ನಟಿಸುತ್ತಿದ್ದು, ಸಿನೆಮಾ ಶೀಘ್ರದಲ್ಲೆ ತೆರೆಕಾಣಲಿದೆ.

Most Popular

To Top