Film News

ಶೂಟಿಂಗ್ ನಲ್ಲಿ ಭಾಗಿಯಾದ ಸಮಂತಾ, ಅನಾರೋಗ್ಯದ ಬಳಿಕ ಹಿಂದಿ ವೆಬ್ ಸಿರೀಸ್ ಶೂಟಿಂಗ್ ನಲ್ಲಿ ಎಂಟ್ರಿ ಕೊಟ್ಟ ನಟಿ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇತ್ತೀಚಿಗಷ್ಟೆ ಮಯೋಸೈಟೀಸ್ ವ್ಯಾದಿಗೆ ತುತ್ತಾಗಿರುವ ವಿಚಾರ ತಿಳಿದೇ ಇದೆ. ಆಕೆ ಮಯೋಸೈಟೀಸ್ ಕಾರಣದಿಂದ ಸಿನೆಮಾಗಳ ಶೂಟಿಂಗ್ ನಿಂದ ದೂರವೇ ಉಳಿದಿದ್ದರು. ಜೊತೆಗೆ ಆಕೆ ಈ ಕಾರಣದಿಂದ ಅನೇಕ ಪ್ರಾಜೆಕ್ಟ್ ಗಳಿಂದಲೂ ಹೊರ ಬಂದಿದ್ದಾರೆ ಎಂದೂ ಸಹ ರೂಮರ್‍ ಗಳು ಹಬ್ಬಿದ್ದವು. ಇದೀಗ ಆಕೆ ಹಿಂದಿ ವೆಬ್ ಸೀರಿಸ್ ಒಂದರಲ್ಲಿ ನಟಿಸುತ್ತಿದ್ದು, ಈ ಸೀರಿಸ್ ನ ಶೂಟೀಂಗ್ ನಲ್ಲಿ ಸಮಂತಾ ಭಾಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಟಿ ಸಮಂತಾ ಅನಾರೋಗ್ಯದ ಬಳಿಕ ಇದೀಗ ಸಿನೆಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಅಭಿನಯದ ಶಾಕುಂತಲಂ ಸಿನೆಮಾದ ಡಬ್ಬಿಂಗ್ ಸಹ ಮಾಡಿದ್ದಾರೆ. ಜೊತೆಗೆ ಟ್ರೈಲರ್‍ ರಿಲೀಸ್ ಈವೆಂಟ್ ನಲ್ಲೂ ಸಹ ಸಮಂತಾ ಕಾಣಿಸಿಕೊಂಡಿದ್ದಾರೆ. ಆಕೆ ಅನಾರೋಗ್ಯದ ಬಳಿಕ ಕಾಣಿಸಿಕೊಂಡ ಕಾರ್ಯಕ್ರಮ ಸಹ ಇದಾಗಿದೆ.  ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಮಂತಾ ರವರನ್ನು ಈ ಕಾರ್ಯಕ್ರಮದಲ್ಲಿ ನೋಡಿ ಅಭಿಮಾನಿಗಳು ಪುಲ್ ಖುಷಿಯಾಗಿದ್ದರು. ಜೊತೆಗೆ ಕೆಲವರು ಆಕೆಯನ್ನು ಟ್ರೋಲ್ ಸಹ ಮಾಡಿದ್ದರು. ಸಮಂತಾ ಮೊದಲಿನಂತಿಲ್ಲ. ತುಂಬಾ ಡಲ್ ಆಗಿದ್ದಾರೆ ಎಂಬೆಲ್ಲಾ ಟ್ರೋಲ್ ಗಳು ಕೇಳಿಬಂದವು. ಇವುಗಳಿಗೆ ಸಮಂತಾ ಸಹ ಸ್ಟ್ರಾಂಗ್ ಕೌಂಟರ್‍ ಸಹ ನೀಡಿದ್ದರು. ಇದೀಗ ಆಕೆ ಶೂಟೀಂಗ್ ಗೆ ಕಮ್ ಬ್ಯಾಕ್ ಆಗಿದ್ದು ಆಕೆಯ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಟಿ ಸಮಂತಾ ಹಿಂದಿ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಈ ಸೀರಿಸ್ ಶೂಟಿಂಗ್ ನಲ್ಲಿ ಸಮಂತಾ ಭಾಗಿಯಾಗಿದ್ದಾರೆ. ಸೈನ್ಸ್ ಫಿಕ್ಷನ್ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ಸ್ಯಾಮ್ ನಟಿಸುತ್ತಿದ್ದಾರೆ. ಈ ಸಿರೀಸ್ ನಲ್ಲಿ ಸಮಂತಾ ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಶೂಟಿಂಗ್ ಗಾಗಿ ಸಮಂತಾ ಮುಂಬೈಗೆ ಬಂದಿದ್ದು ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಮಾಹಿತಿಗಳ ಪ್ರಕಾರ ಈ ಶೂಟಿಂಗ್ ಮುಂಬೈನಲ್ಲಿ ಎರಡು ವಾರಗಳ ಕಾಲ ನಡೆಯಲಿದೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ ಚಿತ್ರತಂಡ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇನ್ನೂ ಸಿಟಾಡೆಲ್ ವೆಬ್ ಸೀರಿಸ್ ಅಮೇರಿಕಾ ಮೂಲದ ವೆಬ್ ಸಿರೀಸ್ ಆಗಿದೆ. ಈ ಸೀರಿಸ್ ನಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ. ಈ ಇಂಗ್ಲೀಷ್ ಸಿರೀಸ್ ನ ಡಬ್ಬಿಂಗ್ ನಲ್ಲಿ ವರುಣ್ ಧವನ್ ಹಾಗೂ ಸಮಂತಾ ನಟಿಸುತ್ತಿದ್ದಾರೆ. ಈ ಸಿರೀಸ್ ಗೆ ಫ್ಯಾಮಿಲಿ ಮೆನ್ ವೆಬ್ ಸಿರೀಸ್ ಖ್ಯಾತಿಯ ರಾಜ್ ಅಂಡ್ ಡಿಕೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಸಮಂತಾ ಕೈಯಲ್ಲಿ ಅನೇಕ ಸಿನೆಮಾಗಳಿದ್ದು ಹಂತ ಹಂತವಾಗಿ ಸಿನೆಮಾಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top