ನನ್ನ ಮಗು ಉಳಿಯುತ್ತೇ ಎಂದುಕೊಂಡಿರಲಿಲ್ಲ ಎಂದ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ….!

Follow Us :

ಕಳೆದ ವರ್ಷವಷ್ಟೆ ಗ್ಲೋಬಲ್ ಬ್ಯೂಟಿ, ಬಾಲಿವುಡ್ ಸ್ಟಾರ್‍ ನಟಿ ಪ್ರಿಯಾಂಕಾ ಚೋಪ್ರಾ ಸೆರಗೋಸಿ ಪದ್ದತಿಯ ಮೂಲಕ ಹೆಣ್ಣುಮಗುವಿಗೆ ಜನ್ಮ ಕೊಟ್ಟರು. ಸುಮಾರು ನೂರು ದಿನಗಳ ಕಾಲ ಆಕೆಯ ಮಗು ಐಸಿಯುನಲ್ಲಿತ್ತು ಎಂದು ಪ್ರಿಯಾಂಕಾ ಚೋಪ್ರಾ ರವರೇ ತಿಳಿಸಿದ್ದರು. ಇದೀಗ ಪ್ರಿಯಾಂಕಾ ತಾನು ಸೆರಗೋಸಿ ಪದ್ದತಿಯ ಮೂಲಕ ಮಗುವನ್ನು ಪಡೆದುಕೊಂಡಿದ್ದು ಯಾಕೆ ಎಂಬ ವಿಚಾರ ಸೇರಿದಂತೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ನಟಿ ಪ್ರಿಯಾಂಕಾ ಚೋಪ್ರಾ ತನಗಿಂತ ಚಿಕ್ಕ ವಯಸ್ಸಿನ ವಿದೇಶಿ ಮೂಲದ ಪಾಪ್ ಸಿಂಗರ್‍ ನಿಕ್ ಜೋನಸ್ ಎಂಬಾತನ್ನು ಪ್ರೀತಿಸಿ ವಿವಾಹವಾದರು. 2018 ರಲ್ಲಿ ಮದುವೆಯಾದ ಈ ಜೋಡಿ ಕಳೆದ 2021 ರಂದು ತಂದೆ ತಾಯಿಯಾಗಿ ಪ್ರಮೋಷನ್ ಸಹ ಪಡೆದುಕೊಂಡರು. ಸದ್ಯ ಈ ಜೋಡಿ ತಮ್ಮ ಮುದ್ದಿನ ಮಗಳೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ತನ್ನ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂಬ ಹೆಸರನ್ನೂ ಸಹ ಇಟ್ಟಿದ್ದಾರೆ. ಈ ಮಗುವನ್ನು ತಾವು ಸೆರಗೋಸಿ ಪದ್ದತಿಯ ಮೂಲಕ ಪಡೆದುಕೊಂಡರು. ಇನ್ನೂ ಈ ಬಗ್ಗೆ ಅನೇಕ ವಿಮರ್ಶೆಗಳು ಸಹ ಎದುರಾಗಿದ್ದವು. ಇದೀಗ ಆಕೆ ತಾನು ಸೆರಗೋಸಿ ಮೂಲಕ ಮಗುವನ್ನು ಪಡೆದುಕೊಂಡಿದ್ದು ಏಕೆ ಎಂಬೆಲ್ಲಾ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಾನೂ ಸೆರಗೋಸಿ ಪದ್ದತಿಯ ಮೂಲಕ ಮಗುವನ್ನು ಪಡೆದ ಬಗ್ಗೆ ವಿವರಣೆ ನೀಡಿದ್ದಾರೆ. ಮಾಲ್ತಿ ಜನಿಸಿದಾಗ ನಾನು ಆಪರೇಷನ್ ಥಿಯೇಟರ್‍ ನಲ್ಲೆ ಇದ್ದೆ, ಆಕೆ ತನ್ನ ಕೈಗಿಂತ ತುಂಬಾ ಚಿಕ್ಕವಳಾಗಿದ್ದಳಂತೆ. ಮಗುವಿನ ಆರೋಗ್ಯದ ನಿಮಿತ್ತ ಕೆಲವು ದಿನಗಳ ಕಾಲ ವೈದ್ಯರ ಪರಿವೀಕ್ಷಣೆಯಲ್ಲಿ ಇಡಲಾಗಿತ್ತು. ಈ ವೇಳೆ ನನ್ನ ಮಗಳನ್ನು ನೋಡಿ ನಾನು ಹಾಗೂ ನಿಕ್ ತುಂಬಾನೆ ನೋವು ಪಡುತ್ತಿದ್ದೇವು. ಈ ಕಾರಣಕ್ಕಾಗಿ ನಾವು ಅನೇಕ ವೈದ್ಯರನ್ನು ಸಹ ಭೇಟಿಯಾಗಿದ್ದೇವು. ನಮ್ಮ ಮಗಳು ನಮಗೆ ಉಳಿಯುತ್ತಾಳೆ ಎಂದು ಅಂದುಕೊಂಡಿರಲಿಲ್ಲ. ಆದರೆ ವೈದ್ಯರೆಲ್ಲಾ ಸೇರಿ ದೇವರಂತೆ ನನ್ನ ಮಗಳನ್ನು ಉಳಿಸಿಕೊಟ್ಟರು. ನನಗೂ ಆರೋಗ್ಯ ಸಮಸ್ಯೆಯ ಕಾರಣದಿಂದ ಸೆರಗೋಸಿ ಪದ್ದತಿಯ ಮೂಲಕ ಮಗುವನ್ನು ಪಡೆದುಕೊಳ್ಳಲು ತೀರ್ಮಾನಿಸಿದ್ದೆ ಎಂದಿದ್ದಾರೆ.

ಇನ್ನೂ ನಾನು ನನ್ನ ವೈಯುಕ್ತಿಕ ಆರೋಗ್ಯ ಸಮಸ್ಯೆಯಿಂದ ಸೆರಗೋಸಿಯನ್ನು ಆಯ್ಕೆ ಮಾಡಿಕೊಂಡೆ ಆದರೆ ಈ ಬಗ್ಗೆ ಅನೇಕ ವಿಮರ್ಶೆಗಳು ಎದುರಾದವು. ಸೌಂದರ್ಯ ಹೋಗುತ್ತದೆ ಎಂದು ಸೆರಗೋಸಿ ಆಯ್ಕೆ ಮಾಡಿಕೊಂಡೆ ಎಂದು ಅನೇಕರು ವಿಮರ್ಶೆ ಮಾಡಿದರು. ಆ ವಿಮರ್ಶೆಗಳು ನನಗೆ ತುಂಬಾನೆ ನೋವು ಕೊಟ್ಟವು ಎಂದು ಮೊದಲ ಬಾರಿಗೆ ತಾನು ಸೆರಗೋಸಿ ಪದ್ದತಿ ಆಯ್ಕೆಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಸದ್ಯ ಪ್ರಿಯಾಂಕಾ ಹಾಲಿವುಡ್ ನ ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.