ಸಿನಿರಂಗದಲ್ಲಿ ತಾನು ಎದುರಿಸಿದ ಕಷ್ಟಗಳನ್ನು ಹಂಚಿಕೊಂಡ ರಕುಲ್ ಪ್ರೀತ್, ಕೆಲವೊಮ್ಮೆ ಕಾರಿನಲ್ಲೆ ಬಟ್ಟೆ ಬದಲಿಸುತ್ತಿದ್ದೆ ಎಂದ ನಟಿ…!

Follow Us :

ಅತೀ ಕಡಿಮೆ ಸಮಯದಲ್ಲೇ ತನ್ನದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇತ್ತೀಚಿಗೆ ಬಾಲಿವುಡ್ ಸಿನಿರಂಗದ ಮೇಲೆ ಹೆಚ್ಚು ಪೋಕಸ್ ಇಟ್ಟಿರುವ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಇದೀಗ ಆಕೆ ತಾನು ಸಿನಿರಂಗದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಕುಲ್ ಪ್ರೀತ್ ಸಿಂಗ್ ಕಡಿಮೆ ಸಮಯದಲ್ಲೇ ಸೌತ್ ನಲ್ಲಿ ಕ್ರೇಜಿ ನಟಿಯಾಗಿ ಖ್ಯಾತಿ ಪಡೆದುಕೊಂಡರು. ತೆಲುಗು ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಇತ್ತೀಚಿಗೆ ಆಕೆಗೆ ಸೌತ್ ನಲ್ಲಿ ಆಫರ್‍ ಗಳು ಕಡಿಮೆಯಾದರೂ ಸಹ ಅಭಿಮಾನಿಗಳಲ್ಲಿ ಮಾತ್ರ ಆಕೆಯ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಇನ್ನೂ ಆಕೆಯ ಖಾತೆಯಲ್ಲಿ ಅನೇಕ ಹಿಟ್ ಸಿನೆಮಾಗಳಿವೆ. ಇನ್ನೂ ಆಕೆ ಸಿನಿರಂಗದಲ್ಲಿ ಎಂಟ್ರಿ ಕೊಟ್ಟಾಗ ಎದುರಿಸಿದಂತಹ ಸಮಸ್ಯೆಗಳು, ತೊಂದರೆಗಳ ಬಗ್ಗೆ ಕೆಲವೊಂದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿರಂಗದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ತಾನು ಅನುಭವಿಸಿದ ಅನೇಕ ಸಮಸ್ಯೆಗಳ ಬಗ್ಗೆ ಆಕೆ ಹೇಳಿದ್ದು ಆಕೆಯ ಕಾಮೆಂಟ್ ಗಳು ಇದೀಗ ವೈರಲ್ ಆಗುತ್ತಿವೆ.

ಇನ್ನೂ ನಟಿ ರಕುಲ್ ಇತ್ತೀಚಿಗೆ ಸಂದರ್ಶಣವೊಂದರಲ್ಲಿ ತಾನು ಎದುರಿಸಿದ ಸಿನೆಮಾ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ನನಗೆ ಯಾವುದೇ ರೀತಿಯ ಬ್ಯಾಕ್ ಗ್ರೌಂಡ್ ಇಲ್ಲ. ನನ್ನ ಟ್ರೈನರ್‍ ಜೊತೆಗೆ ಬಾಂದ್ರಾದಲ್ಲಿನ ಕೆಫೆ ಒಂದರಲ್ಲಿ ಕುಳಿತಿರುತ್ತಿದ್ದೆ. ಆಡಿಷನ್ ಇದ್ದರೇ ಶೀಘ್ರವಾಗಿ ಹೋಗಲು ಅಲ್ಲಿ ಇರುತ್ತಿದೆ. ಕೆಲವೊಮ್ಮೆ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೆ. ಕಾರಿನಲ್ಲೇ ಕುಳಿತು ಬಟ್ಟೆಗಳನ್ನು ಬದಲಾಯಿಸಿಕೊಳ್ಳುತ್ತಿದೆ. ಕೆಲವೊಮ್ಮೆ ಆಫರ್‍ ಗಳು ಬರುತ್ತಿದ್ದವು. ಬಳಿಕ ಆಫರ್‍ ಗಳು ಕೈ ಜಾರುತ್ತಿತ್ತು. ಅದರಲ್ಲೂ ಕೆಲವೊಮ್ಮೆ ಶೂಟಿಂಗ್ ಆದ ಬಳಿಕವೂ ನನ್ನ ಬದಲಿಗೆ ಬೇರೆ ನಟಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನನಗೆ ತುಂಬಾ ನೋವಾಗುತ್ತಿತ್ತು. ಆದರೂ ಸಹ ಆತ್ಮವಿಶ್ವಾಸ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದು ಈ ಮಟ್ಟಕ್ಕೆ ತಲುಪಿದ್ದೇನೆ ಎಂದು ತನ್ನ ಸಿನೆಮಾ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನೂ ರಕುಲ್ ಪ್ರೀತ್ ಸಿಂಗ್ ನಟ ಜಾಕಿ ಭಗ್ನಾನಿ ಜೊತೆಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ, ಶೀಘ್ರದಲ್ಲೇ ಈ ಜೋಡಿ ಮದುವೆ ಸಹ ಆಗಲಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ರಕುಲ್ ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನ ಇಂಡಿಯನ್-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ರಕುಲ್ ಹಂಚಿಕೊಂಡ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವರ್ಷವಾದರೂ ಸಹ ಆಕೆ ಸಕ್ಸಸ್ ಕಂಡುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.