Film News

ದಯೆಯಿಂದ ಬದುಕುವುದನ್ನು ಕಲಿಯಿರಿ ಎಂದ ಸಮಂತಾ, ವೈರಲ್ ಆದ ಲೇಟೆಸ್ಟ್ ಪೋಸ್ಟ್…!

ಕೆಲವು ತಿಂಗಳ ಹಿಂದೆ ಸೌತ್ ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿರುವುದಾಗಿ ಸೋಷಿಯಲ್ ಮಿಡಿಯಾ ಮೂಲಕ ಹೊರಹಾಕಿದ್ದರು. ಸಮಂತಾ ತಾನು ಬಳಲುತ್ತಿರುವ ವ್ಯಾದಿಯಿಂದ ಶೀಘ್ರ ಗುಣಮುಖರಾಗಲು ತುಂಬಾನೆ ಸಾಹಸ ಮಾಡಿದ್ದಾರೆ. ಇದೀಗ ಆಕೆ ಗುಣಮುಖರಾಗಿದ್ದು, ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ಆಕೆ ಬಾಲಿವುಡ್ ನ ನಿರ್ದೇಶಕರಾದ ರಾಜ್ ಅಂಡ್ ಡಿಕೆ ಸಾರಥ್ಯದಲ್ಲಿ ಮೂಡಿಬರಲಿರುವ ಸಿಟಾಡೆಲ್ ಇಂಡಿಯನ್ ವರ್ಷನ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕೆ ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ.

ನಟಿ ಸಮಂತಾ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದು, ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಮಯೋಸೈಟೀಸ್ ವ್ಯಾಧಿಯಿಂದ ತುಂಬಾ ಬಲಹೀನರಾಗಿದ್ದರು. ಇದೀಗ ಆಕೆ ಮೊದಲಿನಂತೆ ಬಲಿಷ್ಟವಾಗಲು ತುಂಬಾನೆ ಶ್ರಮಿಸುತ್ತಿದ್ದಾರೆ.  ಜಿಮ್ ನಲ್ಲಿ ಕಠಿಣವಾಗಿ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನೂ ಆಕೆ ವರ್ಕೌಟ್ ಮಾಡುವಂತಹ ವಿಡಿಯೋಗಳು ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಇತ್ತೀಚಿಗೆ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ದಯೆ ತೋರಿಸಿ ಎಂದು ಪೋಸ್ಟ್ ಮಾಡಿದ್ದು ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇನ್ಸ್ಟಾ ಸ್ಟೋರಿಯಲ್ಲಿ ಪೊಟೊ ಒಂದನ್ನು ಹಂಚಿಕೊಂಡು ಯಾರು ಯಾವ ಸಮಸ್ಯೆಯೊಂದಿಗೆ ಹೋರಾಟ ಮಾಡುತ್ತಿರುತ್ತಾರೆ ಎಂಬುದು ತಿಳಿದಿರುವುದಿಲ್ಲ. ಆದ್ದರಿಂದ ಎಲ್ಲರಿಗೂ ನಾವು ದಯೆ ತೋರಿಸಬೇಕು ಎಂದು ಪೊಟೋಗೆ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಸ್ಯಾಮ್ ಅಭಿಮಾನಿಗಳೂ ಸಹ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿಮ್ಮಂತೆ ನಿಮ್ಮ ಮನಸು ಸಹ ಸುಂದರವಾಗಿದೆ ಎಂದು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಅಪ್ಡೇಟ್ ನೀಡುತ್ತಿದ್ದಾರೆ. ಅದರಲ್ಲೂ ಸಮಂತಾ ಮಯೋಸೈಟೀಸ್ ವ್ಯಾದಿಗೆ ಗುರಿಯಾದ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹೊರಬಂದ ಬಳಿಕ ಸಿನಿರಂಗದ ಸ್ಟಾರ್‍ ನಟರು, ನಟಿಯರೂ ಸಹ ಆಕೆಗೆ ಧೈರ್ಯ ತುಂಬುವಂತಹ ಸಂದೇಶಗಳನ್ನು ಹಂಚಿಕೊಂಡಿದ್ದರು. ಸದ್ಯ ಭಯಂಕರವಾದ ಮಯೋಸೈಟೀಸ್ ವ್ಯಾದಿಯಿಂದ ಗುಣಮುಖರಾಗಿದ್ದು, ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಮೂಲದ ಸಿಟಾಡೆಲ್ ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಸಿನೆಮಾದ ಜೊತೆಗೆ ಆಕೆ ಶೀಘ್ರದಲ್ಲೇ ಖುಷಿ ಸಿನೆಮಾದ ಶೂಟಿಂಗ್ ನಲ್ಲೂ ಭಾಗಿಯಾಗಲಿದ್ದಾರೆ.

Most Popular

To Top