Film News

ಪ್ರೀತಿ ರಾತ್ರಿಯಂತೆ ಕತ್ತಲಾಗಿದೆ ಎಂದ ನಟಿ ಆಂಡ್ರಿಯಾ, ಬ್ಲಾಕ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಬ್ಯೂಟಿ…!

ಸೌತ್ ಸಿನಿರಂಗದ ನಟಿ ಆಂಡ್ರಿಯಾ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಸೆಕೆಂಡ್ ಹಿರೋಯಿನ್ ಆಗಿ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ. ಇನ್ನೂ ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ವಿವಾದಗಳೂ ಸಹ ಮನೆ ಮಾಡಿದೆ.  ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುವ ಈಕೆ ನೀಡುವ ಕಾಮೆಂಟ್ ಗಳ ಕಾರಣದಿಂದ ಅನೇಕ ವಿವಾದಗಳೂ ಸಹ ಸೃಷ್ಟಿಯಾಗಿದೆ. ಸದ್ಯ ನಟಿಯಾಗಿ ಸಿಂಗರ್‍ ಆಗಿ ಆಂಡ್ರಿಯಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ನಟಿ ಕಂ ಗಾಯಕಿ ಆಂಡ್ರಿಯಾ ಜೆರೆಮಿಯಾ ಸಿನೆಮಾಗಳ ಜೊತೆ ಜೊತೆಗೆ ಕೆಲವೊಂದು ವಿಚಾರಗಳನ್ನು ನೇರವಾಗಿಯೇ ಮಾತನಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿರಂಗದಲ್ಲಿ ಸಂಚಲನಾತ್ಮಕ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಇನ್ನೂ ಆಕೆಯನ್ನು ಸೋಷಿಯಲ್ ಮಿಡಿಯಾದಲ್ಲಿ ಈ ಹಿಂದೆ ತುಂಬಾನೆ ಟ್ರೋಲ್ ಸಹ ಮಾಡಿದ್ದರು. ಅದಕ್ಕೆ ಕಾರಣ ತನ್ನ ಪ್ರೀತಿ ಹಾಗೂ ರಿಲೇಷನ್ ಶಿಪ್ ಕುರಿತು ಆಂಡ್ರಿಯಾ ಮಾಡಿದ ಬೋಲ್ಡ್ ಕಾಮೆಂಟ್ ಗಳು ಎಂದೇ ಹೇಳಬಹುದು. ಆದರೆ ಆಂಡ್ರಿಯಾ ಮಾತ್ರ ಅಂತಹ ಯಾವುದೇ ಕಾಮೆಂಟ್ ಗಳಿಗೆ ಕಿವಿಗೊಡುವುದಿಲ್ಲ. ತನ್ನ ಕೆಲಸ ತನ್ನದು ಎಂದು ಸಿನೆಮಾಗಳಲ್ಲಿ ಮುನ್ನುಗ್ಗುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟಿವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ.

ಇನ್ನೂ ಆಂಡ್ರಿಯಾ ಪ್ರೇಮಿಗಳ ದಿನದ ಅಂಗವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನು ತನ್ನ ಹಳೇಯ ಪ್ರೀತಿಯ ನೆನಪುಗಳನ್ನು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಪ್ರೀತಿ ರಾತ್ರಿಯಂತೆ ಕತ್ತಲಾಗಿದೆ ಎಂದು ಬ್ಲಾಕ್ ಹಾರ್ಟ್ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಸಿಂಬಾಲಿಕ್ ಆಗಿ ಬ್ಲಾಕ್ ಬ್ರಾ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳೂ ಸಹ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ನಟಿ ಆಂಡ್ರಿಯಾಗೆ ಎರಡು ಬಾರಿ ಬ್ರೇಕಪ್ ಆಗಿದೆ. ಮ್ಯೂಜಿಕ್ ಡೈರೆಕ್ಟರ್‍ ಅನಿರುದ್ ಜೊತೆಗೆ ಸುಮಾರು ದಿನಗಳ ಕಾಲ ಡೇಟಿಂಗ್ ನಡೆಸಿದ್ದರು. ಇದು ಸುಚಿಲೀಕ್ಸ್ ಸಮಯದಲ್ಲಿ ಅವರಿಬ್ಬರ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗಿತ್ತು.

ಇನ್ನೂ ಅನಿರುದ್ ಆಂಡ್ರಿಯಾಗಿಂತ ಚಿಕ್ಕವನು ಪ್ರೀತಿಯಲ್ಲಿ ಮೆಚ್ಯುರಿಟಿ ಇಲ್ಲ ಎಂದು ಆತನಿಂದ ಬೇರೆಯಾಗಿದ್ದಾಗಿ ಆಂಡ್ರಿಯಾ ಹೇಳಿದ್ದರು. ಬಳಿಕ ಮದುವೆಯಾದ ವ್ಯಕ್ತಿಯೊಬ್ಬನನ್ನು ವಿವಾಹವಾದರು. ಆತನಿಂದಲೂ ಸಹ ಆಕೆ ಬೇರೆಯಾದರು. ಆತ ಮೋಸ ಮಾಡಿದ್ದಾನೆ ಎಂದು ಬೋಲ್ಡ್ ಕಾಮೆಂಟ್ ಗಳನ್ನು ಸಹ ಈ ಹಿಂದೆ ಮಾಡಿದ್ದರು. ಇದೀಗ ಆಂಡ್ರಿಯಾ ಪ್ರೇಮಿಗಳ ದಿನದಂದು ಆಂಡ್ರಿಯಾ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top