Film News

ಏಳು ದಿನಗಳ ಶೂಟಿಂಗ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ತೆಗೆದುಕೊಂಡ ಸಂಭಾವನೆ ಬಗ್ಗೆ ಕೇಳಿದ್ರೆ ಶಾಕ್ ಆಗುತ್ತೀರಾ…!

ದೇಶದ ಸ್ಟಾರ್‍ ಸಿನಿ ನಟರಲ್ಲಿ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಸಹ ಒಬ್ಬರಾಗಿದ್ದಾರೆ. ವಯಸ್ಸಿನೊಂದಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ರೇಸ್ ಕುದುರೆಯಂತೆ ಸಾಗುತ್ತಿದ್ದಾರೆ. ಇನ್ನೂ ಆತನ ಸಂಭಾವನೆಯನ್ನು ಸಹ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದಾಗಿ ಈ ಹಿಂದೆ ಸುದ್ದಿಗಳು ಕೇಳಿಬಂದಿದ್ದವು. ಇದೀಗ ಏಳು ದಿನಗಳ ಶೂಟೀಂಗ್ ಕಾಲ್ ಶೀಟ್ ಗಾಗಿ ಭಾರಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಭಾರತದ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ನಟರಲ್ಲೊಬ್ಬರಾದ ಸೂಪರ್‍ ಸ್ಟಾರ್‍ ರಜನಿ ಕಾಂತ್ ಸಿನೆಮಾ ರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಅವರ ಸಿನೆಮಾಗಳ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಕಾಲಿವುಡ್ ನಲ್ಲಿ ಅವರನ್ನು ಪ್ರತೀಯಿಂದ ತಲೈವಾ ಎಂತಲೇ ಕರೆಯುತ್ತಾರೆ. ಕಾಲಿವುಡ್ ನಲ್ಲಿ ಅನೇಕ ಏಳುಬೀಳುಗಳ ನಡುವೆ ದೊಡ್ಡ ಸ್ಟಾರ್‍ ಆಗಿ ರಜನಿಕಾಂತ್ ಬೆಳೆದು ನಿಂತಿದ್ದಾರೆ. ರಜನಿಕಾಂತ್ ರವರಿಗೆ 70 ವರ್ಷ ತುಂಬಿದ್ದರೂ ಯಂಗ್ ನಟರನ್ನೂ ಸಹ ಮೀರಿಸುವಂತೆ ಉತ್ಸಾಹದಿಂದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಸಹ ವಿಶ್ರಾಂತಿ ಪಡೆದುಕೊಂಡು ತನ್ನ ಸಿನೆಮಾಗಳನ್ನು ಕಂಪ್ಲೀಟ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆತನ ಮಾದರಿಯಲ್ಲಿ ಕ್ರೇಜ್ ಪಡೆದುಕೊಳ್ಳುವಲ್ಲಿ ಅನೇಕ ನಟರು ಇನ್ನೂ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ ಎನ್ನಲಾಗುತ್ತಿದೆ.

ಇನ್ನೂ ನಟ ರಜನಿಕಾಂತ್ ಸಂಭಾವನೆಯ ವಿಚಾರದಲ್ಲೂ ಸಹ ಕಡಿಮೆಯಿಲ್ಲ ಎನ್ನಬಹುದಾಗಿದೆ. ಒಂದು ಸಿನೆಮಾಗೆ ನೂರು ಕೋಟಿಗೂ ಅಧಿಕ ಮೊತ್ತ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ. ಇನ್ನೂ ಸಿನೆಮಾ ಒಂದರಲ್ಲಿ ಅತಿಥಿ ಪಾತ್ರವೊಂದಕ್ಕೆ ರಜನಿಕಾಂತ್ ಭಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಈ ಸಿನೆಮಾವನ್ನು ರಜನಿ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನೆಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಅತಿಥಿ ಪಾತ್ರಗಳ ಮೇಲೆ ಹೆಚ್ಚು ಆಸಕ್ತಿ ತೋರದ ರಜನಿಕಾಂತ್ ತನ್ನ ಮಗಳ ಸಿನೆಮಾ ಆದ ಕಾರಣ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ನಟಿಸಲು ರಜನಿಕಾಂತ್ ಭಾರಿ ಮೊತ್ತ ಡಿಮ್ಯಾಂಡ್ ಮಾಡಿದ್ದಾರಂತೆ. ಈ ಸಿನೆಮಾದಲ್ಲಿ ಏಳು ದಿನಗಳ ಕಾಲ್ ಶೀಟ್ ಗಾಗಿ ಬರೊಬ್ಬರಿ 25 ಕೋಟಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್‍ ನಿರ್ದೇಶನದಲ್ಲಿ ಜೈಲರ್‍ ಸಿನೆಮಾ ಸಹ ಸೆಟ್ಟೇರಿದ್ದು, ಈ ಸಿನೆಮಾಗಾಗಿ ರಜನಿಕಾಂತ್ 140 ಕೋಟಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ರಜನಿಕಾಂತ್ ರೆನ್ಯುಮರೇಷನ್ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿ ವೈರಲ್ ಆಗುತ್ತಿದೆ.

Most Popular

To Top