Film News

ವಿಶೇಷ ಪೂಜೆಯನ್ನು ಸಲ್ಲಿಸುತ್ತಾ ಕಾಣಿಸಿಕೊಂಡ ಸಮಂತಾ, ಮದುಮಗಳಂತೆ ಸಿಂಗಾರವಾದ ಸಮಂತಾ ವಿಡಿಯೋ ವೈರಲ್….!

ಸ್ಟಾರ್‍ ನಟಿ ಸಮಂತಾ ಸಿನೆಮಾ ಕೆರಿಯರ್‍ ಚೆನ್ನಾಗಿಯೇ ನಡೆಯುತ್ತಿದ್ದರೂ ಆಕೆಯ ವೈಯುಕ್ತಿಕ ಜೀವನ ಮಾತ್ರ ಅಷ್ಟೊಂದು ಚೆನ್ನಾಗಿಲ್ಲ ಎಂದೇ ಹೇಳಬಹುದಾಗಿದೆ. ಆಕೆಯ ಕೈಯಲ್ಲಿ ಒಳ್ಳೆಯ ಪ್ರಾಜೆಕ್ಟ್ ಗಳಿವೆ. ಸದ್ಯ ಖುಷಿ ಹಾಗೂ ಸಿಟಾಡೆಲ್ ಎಂಬ ಪ್ರಾಜೆಕ್ಟ್ ಗಳಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಇದೀಗ ಸಮಂತಾ ದೇವಾಲಯವೊಂದರಲ್ಲಿ ಮದುಮಗಳಂತೆ ಸಿಂಗಾರಗೊಂಡ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಹಾಗೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ಡಿಪ್ರೆಷನ್ ಗೆ ಗುರಿಯಾಗಿದ್ದರು. ಬಳಿಕ ಸಿನೆಮಾಗಳ ಮೇಲೆ ಪೋಕಸ್ ಇಟ್ಟು ಅದರಿಂದ ಹೊರಬಂದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೆ ಗುರಿಯಾದರು. ಬಯಂಕರವಾದ ಈ ವ್ಯಾಧಿಯಿಂದ ಆಕೆ ಹೊರಬಂದು ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಆಕೆಗೆ ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಈ ವ್ಯಾದಿಯಿಂದ ಹೊರಬಂದ ಸಮಂತಾ ಶಾಕುಂತಲಂ ಹಾಗೂ ಯಶೋಧ ಸಿನೆಮಾಗಳನ್ನು ಪೂರ್ಣಗೊಳಿಸಿದರು. ಅದರಲ್ಲಿ ಯಶೋಧ ಸಕ್ಸಸ್ ಕಂಡರೂ ಶಾಕುಂತಲಂ ಸಿನೆಮಾ ಮಾತ್ರ  ಆಲ್ ಟೈಂ ಡಿಜಾಸ್ಟರ್‍ ಆಗಿತ್ತು.

ಇನ್ನೂ ಸದ್ಯ ಶಿವ ನಿರ್ವಾಣ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಶೂಟಿಂಗ್ ಸಹ ಕೊನೆಯ ಹಂತಕ್ಕೆ ಬಂದಿದೆ. ಸಮಂತಾ ಆರೊಗ್ಯ ಸಮಸ್ಯೆಯ ಕಾರಣದಿಂದ ಈ ಸಿನೆಮಾದ ಶೂಟಿಂಗ್ ತಡವಾಗಿತ್ತು. ಇದೀಗ ಶೂಟಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ನಿಂದ ಒಂದು ವಿಡಿಯೋ ಲೀಕ್ ಆಗಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಸಂಪ್ರದಾಯಬದ್ದವಾದ ವಸ್ತ್ರಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ದೇವಾಲಯವೊಂದರಲ್ಲಿ ಪೂಜೆ ನಡೆಯುತ್ತಿದ್ದು, ಎಲ್ಲವನ್ನೂ ನೋಡಿದರೇ ಮದುವೆ ಸೆಟಪ್ ಆಗಿರಬಹುದು ಎನ್ನಲಾಗಿದೆ. ಇನ್ನೂ ಸಮಂತಾ ರೆಡ್ ಸೀರೆಯಲ್ಲಿ ತುಂಬಾನೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಇನ್ನೂ ತನ್ನ ಆರೋಗ್ಯದ ಕಾರಣದಿಂದ ಸಮಂತಾ ಸಿನೆಮಾಗಳಿಂದ ದೀರ್ಘ ಕಾಲದ ವರೆಗೆ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಆಕೆ ಒಂದು ವರ್ಷದ ಕಾಲ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಜೊತೆಗೆ ಕೆಲವು ಸಿನೆಮಾಗಳಿಗಾಗಿ ತೆಗೆದುಕೊಂಡ ಅಡ್ವಾನ್ಸ್ ಸಹ ವಾಪಸ್ಸು ನೀಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top