Film News

ವರ್ಮಾ ಸರ್ ನೀವು ಕೈ ಹಾಕಿದ್ದು ಎಲ್ಲಿ ಸಾರ್, ಅಮೇರಿಕಾ ಹುಡುಗಿ ಖಾಸಗಿ ಅಂಗದ ಮೇಲೆ ಕೈ ಹಾಕಿದ ವರ್ಮಾ…..!

ತೆಲುಗು ಸಿನಿರಂಗದಲ್ಲಿ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಾಂಟ್ರವರ್ಸಿ ನಿರ್ದೇಶಕ ಎಂದೇ ಖ್ಯಾತಿ ಪಡೆದುಕೊಂಡ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಾವುದೇ ವಿಚಾರವಿರಲಿ ನೇರವಾಗಿ ಹೇಳುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಕಾರ್ಯಕ್ರಮವೊಂದರ ನಿಮಿತ್ತ ಅಮೇರಿಕಾಗೆ ಹೋದ ವರ್ಮಾ ಅಲ್ಲಿನ ಯುವತಿಯ ಜೊತೆಗೆ ತುಂಬಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ವರ್ಮಾ ಆಕೆಯ ಖಾಸಗಿ ಭಾಗದ ಮೇಲೆ ಕೈ ಹಾಕಿದ್ದು ಸಂಚಲನ ಸೃಷ್ಟಿಸಿದೆ. ಇನ್ನೂ ಇಲ್ಲೊಂದು ಇಂಟ್ರಸ್ಟಿಂಗ್ ಟ್ವಿಸ್ಟ್ ಸಹ ಇದೆ.

ನಿರ್ದೇಶಕ ವರ್ಮಾ ಏನೇ ಮಾಡಿದರು ವಿಭಿನ್ನವಾಗಿಯೇ ಮಾಡುತ್ತಾರೆ. ನಾರ್ತ್ ಅಮೇರಿಕಾ ತೆಲುಗು ಅಸೋಸಿಯೇಷನ್ (ನಾಟಾ) ಸಂಸ್ಥೆಯ ಕಾರ್ಯಕ್ರಮದಲ್ಲಿ ವರ್ಮಾ ಗೂ ಸಹ ಆಹ್ವಾನ ದೊರೆತಿದ್ದು, ಅದಕ್ಕಾಗಿ ಅವರು ಅಮೇರಿಕಾಗೆ ಹೋಗಿದ್ದಾರೆ. ಅಲ್ಲಿನ ಸಂಭ್ರಮದಲ್ಲಿ ಭಾಗಿಯಾಗಿ, ಅಲ್ಲಿನ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದಾರೆ. ಜೊತೆಗೆ ಅಲ್ಲಿನ ಅಮೇರಿಕನ್ ಯುವತಿಯ ಜೊತೆಗೆ ತುಂಬಾ ಹತ್ತಿರವಾಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯನ್ನು ಧರಿಸಿದ್ದಂತಹ ಆ ಯುವತಿ ವರ್ಮಾ ಜೊತೆಗೆ ಕ್ಲೋಜ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ದೇಹವನ್ನು ಮುಟ್ಟುತ್ತಾ ವರ್ಮಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಕೆಲವೊಂದು ಪೊಟೋಗಳೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ವರ್ಮಾ ಅಮೇರಿಕನ್ ಯುವತಿಯನ್ನು ಮುಟ್ಟುತ್ತಾ, ಈಕೆ ಯುವತಿಯೇ ಅಥವಾ ಬೊಂಬೆಯೇ ಎಂದು ಟೆಸ್ಟ್ ಮಾಡುತ್ತಿದ್ದೇನೆ ಎಂದು ಕಾಮೆಂಟ್ ಸಹ ಮಾಡಿದ್ದಾರೆ. ಆದರೆ ನಿಜಕ್ಕೂ ಆ ಯುವತಿ ಪ್ರಾಣವಿರುವ ಯುವತಿಯಲ್ಲ. ಬದಲಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ಕ್ರಿಯೇಟ್ ಮಾಡಿದಂತಹ ಯುವತಿ ಬೊಂಬೆಯಾಗಿದೆ ಎಂದು ವರ್ಮಾ ಕಾಮೆಂಟ್ ಮಾಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ವರ್ಮಾ ಅಮೇರಿಕಾ ನನ್ನನ್ನು ಪ್ರೀತಿಸುತ್ತದೆ ಎಂದು ಮತ್ತೊಂದು ಪೊಟೋಗೆ ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಟ್ರಿಪ್ ತುಂಬಾ ಸಂತೋಷದಿಂದ ಸಾಗಿದ್ದು, ಅದಕ್ಕೆ ಕಾರಣಕರ್ತರಾದ ನಾಟಾ ಗೆ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ. ಆದರೆ ವರ್ಮಾ ಆ ಬೊಂಬೆಯ ಯುವತಿಯೊಂದಿಗೆ ರೊಮ್ಯಾನ್ಸ್ ಮಾಡಿದ್ದ ಪೊಟೋಗಳಿಗೆ ಮಾತ್ರ ಇಂಟರ್‍ ನೆಟ್ ನಲ್ಲಿ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ವರ್ಮಾ ವ್ಯೂಹಂ ಎಂಬ ಟೈಟಲ್ ನಡಿ ವೈ.ಎಸ್.ಜಗನ್ ಬಯೋಪಿಕ್ ಅನ್ನು ಸಿನೆಮಾ ರೂಪದಲ್ಲಿ ಹೊರತರಲಿದ್ದಾರೆ. ಈಗಾಗಲೇ ಈ ಸಿನೆಮಾದ ಟೀಸರ್‍ ಬಿಡುಗಡೆಯಾಗಿದ್ದು ಸಖತ್ ಸದ್ದು ಮಾಡುತ್ತಿದೆ. ಇನ್ನೂ ಈ ಸಿನೆಮಾದ ಮೂಲಕ ವರ್ಮಾ ಅನೇಕರು ಟಾರ್ಗೆಟ್ ಸಹ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಿನೆಮಾದ ಶೂಟೀಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ.

Most Popular

To Top