Film News

ಎಮೋಷನಲ್ ಪೋಸ್ಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ, ಬ್ರೇಕಪ್ ಬಗ್ಗೆ ಹಿಂಟ್ ಕೊಟ್ರಾ, ನ್ಯಾಷನಲ್ ಕ್ರಷ್….!

ಸಾಮಾನ್ಯವಾಗಿ ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ ವಿಚ್ಚೇದನಗಳು ಸರ್ವೆ ಸಾಮಾನ್ಯ ಎಂದು ಹೇಳಬಹುದಾಗಿದೆ. ಸುಮಾರು ದಿನಗಳಿಂದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಕೆಲವು ದಿನಗಳ ಹಿಂದೆ ಸಹ ವಿಜಯ್ ದೇವರಕೊಂಡ ಕುಟುಂಬದ ಜೊತೆಗೆ ಡಿನ್ನರ್‍ ಗೆ ಹೋಗಿದ್ದರು. ಇನ್ನೂ ಅವರ ಲವ್ ಬಗ್ಗೆ ಅಧಿಕೃತವಾಗಿ ಹೇಳುವುದಕ್ಕೂ ಮುಂಚೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ.

ಸುಮಾರು ವರ್ಷಗಳ ಹಿಂದೆ ರಶ್ಮಿಕಾ ಹಾಗೂ ನಟ ರಕ್ಷಿತ್ ಶೆಟ್ಟಿ ರವರಿಗೆ ನಿಶ್ಚಿತಾರ್ಥ ನೆರವೇರಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಎಂಗೇಜ್ ಮೆಂಟ್ ಮುರಿದು ಬಿತ್ತು. ಬಳಿಕ ರಶ್ಮಿಕಾ ಟಾಲಿವುಡ್ ನತ್ತ ಹಾರಿದರು. ಅಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾದರು. ಅದೇ ಸಮಯದಲ್ಲಿ ತೆಲುಗು ಸ್ಟಾರ್‍ ನಟ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಗಳೂ ಸಹ ಶುರುವಾದವು. ಇಂದಿಗೂ ಸಹ ಆ ರೂಮರ್‍ ಗಳು ಹರಿದಾಡುತ್ತಲೇ ಇದೆ. ಆದರೆ ಎಲ್ಲೂ ಈ ಡೇಟಿಂಗ್ ಬಗ್ಗೆ ಒಪೆನ್ ಆಗಿಲ್ಲ. ಅನೇಕ ಬಾರಿ ರಶ್ಮಿಕಾ ಈ ಬಗ್ಗೆ ರಿಯಾಕ್ಟ್ ಆಗಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು. ಆದರೆ ರೂಮರ್‍ ಮಾತ್ರ ನಿಂತಿಲ್ಲ. ಇದೀಗ ಮತ್ತೊಂದು ರೂಮರ್‍ ಕೇಳಿಬರುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕಾ ಮಂದಣ್ಣ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿರುವಮತೆ ಜೀವನದಲ್ಲಿ ನಮ್ಮನ್ನು ಯಾರಾದರೂ ಬಿಟ್ಟು ಹೋದರೇ ಅದರ ಬಗ್ಗೆ ಜಾಸ್ತಿ ಚಿಂತೆ ಮಾಡಬಾರದು. ಅದಕ್ಕೆ ಒಂದು ಅರ್ಥ ಸಹ ಇರುತ್ತದೆ. ಕಾಲ ಕಳೆದಂತೆ ಎಲ್ಲಾ ನೋವುಗಳು ಮಾಯವಾಗುತ್ತದೆ. ಹೊಸ ಜೀವನ ದೊರೆಯುತ್ತದೆ ಎಂಬ ಅರ್ಥ ಬರುವಂತೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇನ್ನೂ ಈ ಸ್ಟೋರಿ ನೋಡಿದ ಅನೇಕರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ವಿಬೇದಗಳೇನಾದರೂ ಹುಟ್ಟಿಕೊಂಡಿವೆಯೇ, ಬ್ರೇಕಪ್ ಗೆ ಮುಂದಾಗಿದ್ದಾರೆಯೇ, ಈ ನಿಟ್ಟಿನಲ್ಲೇ ಈ ವಿಡಿಯೋ ಹಂಚಿಕೊಂಡಿದ್ದಾರೆಯೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಲವ್ ಬಗ್ಗೆ ಅಧಿಕೃತವಾಗಿ ಹೇಳಿಯೇ ಇಲ್ಲ ಆಗಲೇ ಬ್ರೇಕಪ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ.

ಇನ್ನೂ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲೂ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಪುಷ್ಪಾ-2 ಹಾಗೂ ಯಾನಿಮಲ್ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕೇಳಿಬರುತ್ತಿರುವ ಬ್ರೇಕಪ್ ರೂಮರ್‍ ಬಗ್ಗೆ ರಶ್ಮಿಕಾ ಯಾವ ರೀತಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top