Film News

ಯಾರ ಜೊತೆಯಾದರು ಡೇಟ್ ಮಾಡಿ ಎಂಬ ಅಭಿಮಾನಿ, ಹಾರ್ಟ್ ಟಚ್ಚಿಂಗ್ ರಿಪ್ಲೆ ಕೊಟ್ಟ ಸಮಂತಾ, ವೈರಲ್ ಆದ ಪೊಸ್ಟ್…!

ಕಳೆದ ಎರಡು ವರ್ಷಗಳು ಸಮಂತಾ ವೈಯುಕ್ತಿಕ ಜೀವನ ತುಂಬಾನೆ ದುಃಖದಲ್ಲಿತ್ತು ಎನ್ನಬಹುದಾಗಿದೆ. ಸಮಂತಾ ಹಾಗೂ ನಾಗಚೈತನ್ಯ ಜೊತೆಗೆ ವಿಚ್ಚೇದನದ ಪಡೆದ ಬಳಿಕ ಸಮಂತಾ ಡಿಪ್ರೆಷನ್ ಗೆ ಹೋಗಿದ್ದು, ಮಾನಸಿಕ ಹಿಂಸೆಯನ್ನು ಅನುಭವಿಸಿದ್ದರು. ಅದರಿಂದ ಹೊರಬಂದು ಹೊಸ ಜೀವನ ಸಹ ಶುರು ಮಾಡಿದರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾದರು. ಸುಮಾರು ತಿಂಗಳುಗಳ ಕಾಲ ಅಜ್ಞಾತದಲ್ಲಿದ್ದ ಸಮಂತಾ ಯಶೋದ ಸಿನೆಮಾದ ಬಳಿಕ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾರಕವಾದ ಮಯೋಸೈಟಿಸ್ ಎಂಬ ವ್ಯಾದಿಯಿಂದಾಗಿ ಸುಮಾರು ತಿಂಗಳುಗಳ ಕಾಲ ಸಮಂತಾ ಸಾರ್ವಜನಿಕವಾಗಲಿ, ಸೋಷಿಯಲ್ ಮಿಡಿಯಾದಲ್ಲಾಗಲಿ ಅಥವಾ ಶೂಟಿಂಗ್ ನಲ್ಲಾಗಲಿ ಕಾಣಿಸಿಕೊಂಡಿರಲಿಲ್ಲ. ಅದರಿಂದ ಆಕೆಯ ಆರೋಗ್ಯದ ಬಗ್ಗೆ ಅನೇಕ ಸುದ್ದಿಗಳು ಹರಿದಾಡಿದ್ದವು. ಬಳಿಕ ಸಮಂತಾ ಯಶೋಧ ಸಿನೆಮಾದ ಸಮಯದಲ್ಲಿ ಆಕೆ ಮಯೋಸೈಟೀಸ್ ಬಗ್ಗೆ ಹೇಳಿದ್ದರು. ಆಕೆಗೆ ಸಿನೆಮಾ ಸ್ಟಾರ್‍ ಗಳು ಹಾಗೂ ಅಭಿಮಾನಿಗಳು ಆಕೆಗೆ ಧೈರ್ಯತುಂಬುವ ಕೆಲಸ ಮಾಡಿದರು. ಇನ್ನೂ ಮಯೋಸೈಟೀಸ್ ವ್ಯಾದಿಯಿಂದ ಹೊರಬಂದು ಇದೀಗ ಆರೋಗ್ಯಕರವಾಗಿ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅನೇಕ ಇಂಟ್ರಸ್ಟಿಂಗ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಸಮಂತಾ ಜೀವನದಲ್ಲಿ ಎದುರಾದ ವಿಚ್ಚೇದನ ಹಾಗೂ ಮಯೋಸೈಟಿಸ್ ಕಾರಣದಿಂದಾಗಿ ಆಕೆ ಮತಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಸಾಮಾನ್ಯ ಪ್ರೇಕ್ಷಕರ ಹೃದಯವನ್ನು ಸಹ ಗೆದ್ದಿದ್ದಾರೆ. ಇನ್ನೂ ಆಕೆ ಅನೇಕ ಮಂದಿ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.  ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ಒಬ್ಬ ಮಹಿಳಾ ಅಭಿಮಾನಿ ಸಮಂತಾ ಬಗ್ಗೆ ಮಾಡಿದ ಪೋಸ್ಟ್ ವೈರಲ್ ಆಗಿದೆ. ಈ ಟ್ವೀಟ್ ನಲ್ಲಿ ಆಕೆ ನೀವು ಯಾರ ಜೊತೆಯಾದರೂ ಡೇಟಿಂಗ್ ಮಾಡಿ ಎಂದು ಹೇಳಿದ್ದರು. ಇನ್ನೂ ಅದಕ್ಕೆ ಸಮಂತಾ ನೀಡಿದ ಹೇಳಿಕೆ ಹಾರ್ಟ್ ಟಚ್ಚಿಂಗ್ ಆಗಿದೆ. ಇನ್ನೂ ಅಭಿಮಾನಿಯ ಪ್ರಶ್ನೆಗೆ ಸಮಂತಾ ಏನು ರಿಯಾಕ್ಷನ್ ಕೊಟ್ಟಿದ್ದಾರೆ ಎಂಬುದನ್ನು ಮುಂದೆ ಓದಿ.

ಇನ್ನೂ ಸಮಂತಾ ಅಭಿಮಾನಿಯ ಟ್ವೀಟ್ ನಲ್ಲಿ ಇದು ನನ್ನ ಸ್ಥಳ ಅಲ್ಲ ಎಂದು ನನಗೆ ಗೊತ್ತು. ಆದರೆ ಪ್ಲೀಜ್ ಯಾರ ಜೊತೆಗಾದರೂ ಡೇಟಿಂಗ್ ಮಾಡಿ ಎಂದು ಶಾಕುಂತಲಂ ಪ್ರಮೋಷನ್ ಭಾಗದಲ್ಲಿ ಮಾತನಾಡಿದ ವಿಡಿಯೋ ಕ್ಲಿಪ್ ಜೊತೆಗೆ ಶೇರ್‍ ಮಾಡಿದ್ದರು. ಜೊತೆಗೆ ಸಮಂತಾ ರವರನ್ನು ಸಹ ಟ್ಯಾಗ್ ಮಾಡಲಾಗಿತ್ತು. ಇದಕ್ಕೆ ಸಮಂತಾ ಸಹ ರಿಪ್ಲೆ ಕೊಟ್ಟಿದ್ದಾರೆ. ನಿಮ್ಮಂತೆ ನನ್ನನ್ನು ಯಾರೂ ಪ್ರೀತಿಸುತ್ತಾರೆ ಎಂದು ಹಾರ್ಟ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಮಂತಾ ರಿಯಾಕ್ಷನ್ ಗೆ ಅಭಿಮಾನಿಗಳು ನಾವು ನಿಮ್ಮೊಂದಿಗೆ ಇದ್ದೀವಿ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top