Film News

ವಿಚ್ಚೇದನ ರೂಮರ್ ಸಮಯದಲ್ಲಿ ಆ ಡೈರೆಕ್ಟರ್ ಗಾಗಿ ಇಂಟ್ರಸ್ಟಿಂಗ್ ಪೊಟೋ ಶೇರ್ ಮಾಡಿದ ಮೆಗಾ ಡಾಟರ್ ನಿಹಾರಿಕಾ….!

ತೆಲುಗು ಸಿನಿರಂಗದಲ್ಲಿ ಕೆಲವು ದಿನಗಳಿಂದ ಮೆಗಾ ಕುಟುಂಬದ ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯ ನಡುವೆ ವಿಬೇದಗಳು ಉಂಟಾಗಿದ್ದು ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿವೆ. ನಿಹಾರಿಕಾ ಪತಿ ಚೈತನ್ಯ ಜೊನ್ನಲಗಡ್ಡ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ನಿಹಾರಿಕಾ ಜೊತೆಗಿರುವ ಎಲ್ಲಾ ಪೊಟೋಗಳನ್ನು ಡಿಲೀಟ್ ಮಾಡಿದ್ದರು. ಅವರ ವಿಚ್ಚೇದನದ ಸುದ್ದಿ ಹಾಟ್ ಟಾಪಿಕ್ ಆಗಿದೆ. ಈ ಸಮಯದಲ್ಲಿ ನಿಹಾರಿಕಾ ಆ ನಿರ್ದೇಶಕನ ಹುಟ್ಟುಹಬ್ಬಕ್ಕೆ ಸ್ಪೇಷಲ್ ವಿಶ್ ಮಾಡಿದ್ದಾರೆ. ಸದ್ಯ ಆಕೆ ಪೊಸ್ಟ್ ಸಖತ್ ವೈರಲ್ ಆಗಿದೆ.

ನಟಿ ಕಂಡ ನಿರ್ಮಾಪಕಿ ನಿಹಾರಿಕಾ ಕೊಣಿದೆಲಾ ನಟಿಯಾಗಿ ಕ್ರೇಜ್ ಪಡೆದುಕೊಳ್ಳಲು ತುಂಬಾನೆ ಪ್ರಯತ್ನ ಮಾಡಿದ್ದರು. ಆದರೆ ಆಕೆ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಬಳಿಕ ಆಕೆ ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದಾರೆ. ಜೊತೆಗೆ ಸಿನೆಮಾಗಳಲ್ಲಿ ಆಫರ್‍ ಗಳಿಗಾಗಿಯೂ ಸಹ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇನ್ನೂ ನಿಹಾರಿಕಾ ಇತ್ತೀಚಿಗೆ ಹೆಚ್ಚು ವೈಯುಕ್ತಿಕ ವಿಚಾರಗಳ ಕಾರಣದಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಪಬ್ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದರು. ಇನ್ನೂ ಕಳೆದ 2020 ರಲ್ಲಿ ಚೈತನ್ಯ ಜೊನ್ನಗಡ್ಡ ಎಂಬಾತನೊಂದಿಗೆ ಪೋಷಕರ ನಿರ್ಣಯದ ಮೇರೆಗೆ ನಿಹಾರಿಕಾ ಮದುವೆಯಾದರು. ಕೆಲವು ದಿನಗಳಿಂದ ನಿಹಾರಿಕಾ ಹಾಗೂ ಚೈತನ್ಯ ನಡುವೆ ಮನಃಸ್ಥಾಪಗಳು ಹುಟ್ಟಿಕೊಂಡಿದ್ದು, ಇಬ್ಬರೂ ವಿಚ್ಚೇದನ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬ ರೂಮರ್‍ ಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ವಿಚ್ಚೇದನದ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿರುವಾಗಲೇ ನಿಹಾರಿಕಾ ತನ್ನ ಇನ್ಸ್ಟಾ ಖಾತೆಯಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಡೆಬ್ಯೂ ಡೈರೆಕ್ಟರ್‍ ಸೋರವ್  ನ್ಯಾಚುರಲ್ ಸ್ಟಾರ್‍ ನಾನಿ ರವರ NANI30 ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾ ಮೆಗಾಸ್ಟಾರ್‍ ಚಿರಂಜೀವಿ ಲಾಂಚ್ ಮಾಡಿದ್ದರು. ಇನ್ನೂ ಇತ್ತೀಚಿಗಷ್ಟೆ ಈ ನಿದೇರ್ಶಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇನ್ನೂ ನಿಹಾರಿಕಾ ಆತನಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ. ಇಂಟ್ರಸ್ಟಿಂಗ್ ಪೊಟೋಸ್ ಹಂಚಿಕೊಂಡಿದ್ದಾರೆ. ಆಕೆಯ ಪೋಸ್ಟ್ ನಲ್ಲಿರುವಂತೆ ಹ್ಯಾಪಿ ಬರ್ತ್‌ಡೇ ಸೋರವ್  ರವರೇ, ಈ ವರ್ಷ ನಿಮ್ಮದೇ, ನಿಮ್ಮ ನಿರ್ದೇಶಕತ್ವದ ಪ್ರತಿಭೆ ನಮ್ಮನ್ನು ಆಶ್ಚರ್ಯಪಡಿಸುವುದು ಖಚಿತ ಎಂದು, ಶೂಟಿಂಗ್ ಲೊಕೇಷನ್ ನಿಂದ ಒಂದು ಪೊಟೋ ಶೇರ್‍ ಮಾಡಿದ್ದಾರೆ.

ಇನ್ನೂ ನಾನಿ ರವರ 30 ನೇ ಸಿನೆಮಾದಲ್ಲಿ ನಿಹಾರಿಕಾ ಸಹ ನಟಿಸಲಿದ್ದಾರಂತೆ. ಈ ಸಿನೆಮಾ ಲಾಂಚ್ ಕಾರ್ಯಕ್ರಮದಲ್ಲೂ ಸಹ ನಿಹಾರಿಕಾ ಭಾಗಿಯಾಗಿದ್ದರು. ಇದೀಗ ನಿಹಾರಿಕಾ ವಿಚ್ಚೇದನದ ರೂಮರ್‍ ಗಳ ನಡುವೆ ಈ ಪೋಸ್ಟ್ ಹಂಚಿಕೊಂಡಿದ್ದು,  ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಇನ್ನೂ ಆಕೆ ಯಾವುದೇ ಪೋಸ್ಟ್ ಹಂಚಿಕೊಂಡರೂ ಸಹ ಅದು ವೈರಲ್ ಆಗುತ್ತಿದೆ. ವಿಚ್ಚೇದನದ ಬಗ್ಗೆ ಇಷ್ಟೆಲ್ಲಾ ರದ್ದಾಂತ ನಡೆಯುತ್ತಿರದ್ದರೂ ಸಹ ಈ ಬಗ್ಗೆ ನಿಹಾರಿಕಾ ಆಗಲಿ ಅಥವಾ ಮೆಗಾ ಕುಟುಂಬದಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ.

Most Popular

To Top