Film News

ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿರುವ ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಫಿಟ್ ನೆಸ್ ವಿಡಿಯೋ…!

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಅಲ್ಲು ಸ್ನೇಹಾರೆಡ್ಡಿ ಸಹ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಿಗಿಮತ ಕಡಿಮೆಯಿಲ್ಲ ಎಂಬಂತೆ ಭಾರಿ ಫಾಲೋಯಿಂಗ್ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಫಿಟ್ ನೆಸ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿದೆ. ಈ ವಿಡಿಯೋ ಕಂಡ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಗಳ ಮೂಲಕ ವಿಡಿಯೋ ವೈರಲ್ ಮಡುತ್ತಿದ್ದಾರೆ.

ಸ್ಟಾರ್‍ ನಟರಂತೆ ಅವರ ಪತ್ನಿಯರೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುತ್ತಾರೆ. ಐಕಾನ್ ಸ್ಟಾರ್‍ ಸ್ನೇಹಾರೆಡ್ಡಿ ಅವರಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ಅದರಲ್ಲೂ ಆಕೆ ಫಿಟ್ ನೆಸ್ ಬಗ್ಗೆ ತೆಗೆದುಕೊಳ್ಳುವಂತಹ ಅನೇಕ ಕ್ರಮಗಳು ಅನೇಕರಿಗೆ ಸ್ಪೂರ್ತಿಯಾಗಿದೆ. ಸಾಮಾನ್ಯವಾಗಿ ಮಕ್ಕಳಾದ ಬಳಿಕ ಮಹಿಳೆಯರು ದೇಹದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಾರೆ. ತುಂಬಾ ದಪ್ಪ ಸಹ ಆಗುತ್ತಾರೆ. ಆದರೆ ಕೆಲವೊಂದು ಫಿಟ್ ನೆಸ್ ಸೂತ್ರಗಳಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದಾಗಿದೆ. ಅದನ್ನು ಸ್ನೇಹಾರೆಡ್ಡಿ ಪಾಲನೆ ಮಾಡುತ್ತಾರೆ. ಮಕ್ಕಳ ಪಾಲನೆಯೊಂದಿಗೆ ಫರ್ಪೆಕ್ಟ್ ಬಾಡಿಯನ್ನು ಸಹ ಆಕೆ ಹೊಂದಿದ್ದಾರೆ.

ಅಲ್ಲು ಸ್ನೇಹಾರೆಡ್ಡಿ ಆರೋಗ್ಯದ ಮೇಲೆ ತುಂಬಾನೆ ಕಾಳಜಿ ಹೊಂದಿದ್ದಾರೆ. 2023ರ ತನ್ನ ಫಿಟ್ ನೆಸ್ ಗೋಲ್ಸ್ ಗಳನ್ನು ಸಹ ಬದಲಿಸಿದ್ದಾರೆ. ಇನ್ನೂ ತನ್ನ ಗುರಿ ಇದೆ ಎಂದು ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತೂಕ ಕಡಿಮೆಯಾಗುವುದರ ಜೊತೆಗೆ ಬಲವಾಗಿರಬೇಕೆಂದು ಬಯಸುತ್ತಿದ್ದಾರಂತೆ. ಭೌತಿಕ ಆರೋಗ್ಯದ ಬದಲಿಗೆ ಆಧ್ಯಾತ್ಮಿಕ ಆರೋಗ್ಯವನ್ನು ಪಡೆದುಕೊಳ್ಳಬೇಕೆಂದು ಅಂದುಕೊಂಡಿದ್ದಾರಂತೆ. ಕೇವಲ ಕಡಿಮೆ ಆಹಾರ ಸೇವೆನೆ ಮಾಡುವುದು ಮಾತ್ರವಲ್ಲದೇ ಸರಿಯಾದ ಆಹಾರ ಸೇವನೆ ಮಾಡುವುದು ಮುಖ್ಯ ಎಂದು, ಒಂದೇ ಬಾರಿ ಕಠಿಣವಾದ ಕಸರತ್ತುಗಳನ್ನು ಮಾಡದೇ ಕ್ರಮ ತಪ್ಪದೇ ಮಾಡಬೇಕೆಂದು, ಸಣ್ಣ ಆಗುವುದರ ಜೊತೆಗೆ ಬಲವಾಗಿ ಸಿದ್ದವಾಗಬೇಕೆಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿಯವರದ್ದು ಪ್ರೇಮ ವಿವಾಹ. ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ತಿಳಿಸಿ ಅವರ ಒಪ್ಪಿಗೆ ಪಡೆದು ಮದುವೆಯಾದರು. ಇನ್ನೂ ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಅನೇಕ ಜೋಡಿಗಳಿಗೆ ಮಾದರಿಯಾಗಿದ್ದಾರೆ. ಇನ್ನೂ ಅಲ್ಲು ಅರ್ಜುನ್ ಬಿಡುವಿನ ಸಮಯದಲ್ಲಿ ಕುಟುಂಬದೊಂದಿಗೆ ವೆಕೇಷನ್ ಗಳಿಗೂ ಸಹ ಹೋಗುತ್ತಿರುತ್ತಾರೆ. ಸ್ನೇಹಾರೆಡ್ಡಿ ಹಂಚಿಕೊಳ್ಳುವ ಪೋಸ್ಟ್ ಗಳು ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತಿರುತ್ತವೆ.

Most Popular

To Top