ಶಾಕುಂತಲಂ ಸಿನೆಮಾಗೆ ಡಬ್ಬಿಂಗ್ ಪೂರ್ಣಗೊಳಿಸಿದ ಸಮಂತಾ, ಪೊಟೋ ಜೊತೆಗೆ ಎಮೋಷನಲ್ ಪೋಸ್ಟ್ ಹಂಚಿಕೊಂಡ ಸಮಂತಾ…!

Follow Us :

ಸ್ಟಾರ್‍ ನಟಿ ಸಮಂತಾ ಮಯೋಸೈಟೀಸ್ ಎಂಬ ಕಾಯಿಲೆಗೆ ಗುರಿಯಾದ ವಿಚಾರ ತಿಳಿದೇ ಇದೆ. ಈ ವಿಚಾರವನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಕಳೆದ ವರ್ಷದ ಅಕ್ಟೋಬರ್‍ ಮಾಹೆಯಲ್ಲಿ ತಿಳಿಸಿದ್ದರು. ಈ ಸುದ್ದಿ ಹೊರಬಂದ ಕೂಡಲೇ ಆಕೆಯ ಅಭಿಮಾನಿಗಳೂ ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳೂ ಸಹ ಶಾಕ್ ಆಗಿದ್ದು, ಆಕೆ ಶೀಘ್ರ ಗುಣಮುಖರಾಗಲಿ ಎಂದು ಕೋರಿದ್ದರು. ಕಳೆದೆರಡು ದಿನಗಳ ಹಿಂದೆಯಷ್ಟೆ ಸಮಂತಾ ಟೀಂ ಸಹ ಆಕೆ ಚೇತರಿಕೆಯಾಗುತ್ತಿರುವುದಾಗಿ ವಿಚಾರ ತಿಳಿಸಿದ್ದರು. ಇದೀಗ ಆಕೆ ಶಾಕುಂತಲಂ ಸಿನೆಮಾದ ಡಬ್ಬಿಂಗ್ ಪೂರ್ಣ ಗೊಳಿಸಿ ಎಮೋಷನಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸಮಂತಾ ಆರೋಗ್ಯದ ಬಗ್ಗೆ ಅನೇಕ ರೂಮರ್‍ ಗಳು ಹುಟ್ಟಿಕೊಂಡಿದ್ದವು. ಆಕೆ ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಸಮಂತಾ ಹತ್ತಿರದ ವರ್ಗದವರು ಆಕೆ ಗುಣಮುಖರಾಗುತ್ತಿದ್ದಾರೆ ಶೀಘ್ರದಲ್ಲೇ ಸಿನೆಮಾ ಶೂಟಿಂಗ್ ಗಳಲ್ಲೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಅದರಂತೆ ಸಮಂತಾ ಇದೀಗ ಸಿನೆಮಾ ಕೆಲಸಗಳಿಗೆ ಕಮ್ ಬ್ಯಾಕ್ ಆಗಿದ್ದಾರೆ. ಖ್ಯಾತ ನಿರ್ದೇಶಕ ಗುಣಶೇಖರ್‍ ಸಾರಥ್ಯದಲ್ಲಿ ಮೂಡಿಬರುತ್ತಿರುವ ಶಾಕುಂತಲಂ ಸಿನೆಮಾದಲ್ಲಿ ಸಮಂತಾ ಮೈನ್ ಲೀಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾ ಜ.17 ರಂದು ಬಿಡುಗಡೆಯಾಗಲಿದೆ. ಸದ್ಯ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇದೀಗ ಸಮಂತಾ ಸಹ ತನ್ನ ಪಾತ್ರದ ಡಬ್ಬಿಂಗ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಈ ಸಂಬಂಧ ಪೊಟೋ  ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಎಮೋಷನಲ್ ಕೋಟ್ ಹಾಕಿದ್ದಾರೆ.

ಆಕೆ ಹಂಚಿಕೊಂಡ ಪೋಸ್ಟ್ ನಲ್ಲಿರುವಂತೆ ನನ್ನ ಹುಚ್ಚಿಗೆ, ದುಃಖಕ್ಕೆ, ನಾನು ಕಳೆದುಕೊಂಡವುದಕ್ಕೆ ಕಲೆಯೆ ಅದಕ್ಕೆ ಮದ್ದಾಗಿದೆ. ಅದರ ಸಹಾಯದಿಂದಲೇ ನಾನು ನನ್ನ ಗುರಿಯನ್ನು ತಲುಪುತ್ತೇನೆ ಎಂದು ಖ್ಯಾತ ಲೇಖಕ ನಿಕ್ಕಿ ರೋ ಬರೆದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಸಾಲುಗಳು ಆಕೆಯ ಜೀವನಕ್ಕೆ ಸರಿಹೋಗಲಿದೆ ಎಂಬ ಭಾವನೆಯನ್ನು ಸಮಂತಾ ಹೊಂದಿದ್ದಾರೆ. ನಟನೆ ಎಂದರೇ ಆಕೆಗೆ ತುಂಬಾ ಇಷ್ಟವಾಗಿದ್ದು, ಅದರ ಮೂಲಕ ತನ್ನ ಎಲ್ಲ ನೋವುಗಳನ್ನು ಮರೆಯುವುದಾಗಿ ಸಮಂತಾ ತನ್ನ ಪೋಸ್ಟ್ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ. ಸದ್ಯ ಸಮಂತಾ ಈ ಪೋಸ್ಟ್ ವೈರಲ್ ಆಗುತ್ತಿದೆ.

ಸಮಂತಾ ಅನಾರೋಗ್ಯಕ್ಕೆ ತುತ್ತಾದರೂ ಸಹ ಯಶೋಧ ಸಿನೆಮಾಗೆ ಆಕೆಯೇ ಸ್ವತಃ ಡಬ್ಬಿಂಗ್ ಹೇಳಿದ್ದಾರೆ. ಇದೀಗ ಶಾಕುಂತಲಂ ಸಿನೆಮಾಗೂ ಸಹ ಆಕೆಯೆ ಡಬ್ಬಿಂಗ್ ಹೇಳಿದ್ದಾರೆ. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ಸಮಂತಾ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ನಲ್ಲೂ ಸಹ ಶೀಘ್ರದಲ್ಲೇ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.