Film News

ಸ್ಟಾರ್ ನಟ ವಿಜಯ್ ತನ್ನ ಪತ್ನಿಯೊಂದಿಗೆ ಬೇರೆಯಾಗಲಿದ್ದಾರೆ ಎಂಬ ರೂಮರ್ ವೈರಲ್, ಕ್ಲಾರಿಟಿ ಕೊಟ್ಟ ವಿಜಯ್ ಟೀಂ…!

ಸೌತ್ ಸಿನಿರಂಗದ ಖ್ಯಾತ ನಟ ದಳಪತಿ ವಿಜಯ್ ಇಡೀ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಕೆಲವು ದಿನಗಳಲ್ಲೇ ಆತ ವಾರಿಸು ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದೆ. ವಿಜಯ್ ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವಾಗ ಅವರ ವೈಯುಕ್ತಿಕ ಜೀವನದ ಕುರಿತು ದೊಡ್ಡ ರೂಮರ್‍ ಒಂದು ಬಿರುಗಾಳಿಯಂತೆ ಹರಿದಾಡಿದ್ದು, ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಆತ ತನ್ನ ಪತ್ನಿಯೊಂದಿಗೆ ಬೇರೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಅದಕ್ಕೆ ವಿಜಯ್ ಸಹ ಕ್ಲಾರಿಟಿ ಕೊಟ್ಟಿದ್ದಾರೆ.

ಕಾಲಿವುಡ್ ಸ್ಟಾರ್‍ ನಟ ಇಲಯ ದಳಪತಿ ವಿಜಯ್ ಅಭಿನಯದ ವಾರಿಸು ಸಿನೆಮಾ ಜ.11 ರಂದು ಅದ್ದೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ಈ ಸಿನೆಮಾದ ಟ್ರೈಲರ್‍ ಸಹ ಇತ್ತಿಚಿಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಟ್ರೈಲರ್‍ ಟ್ರೆಂಡಿಂಗ್ ಆಗಿದೆ. ವಿಜಯ್ ತನ್ನ ಸಿನೆಮಾ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೇ ತಮಿಳು ಸಿನಿರಂಗ ಸೇರಿದಂತೆ ಸೌತ್ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗುವಂತಹ  ಸುದ್ದಿಯೊಂದು ಹರಿದಾಡ ತೊಡಗಿದೆ. ನಟ ವಿಜಯ್ ತನ್ನ ಪತ್ನಿ ಸಂಗೀತ ರವರೊಂದಿಗೆ ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ಪ್ರಚಾರ ಜೋರಾಗಿಯೇ ಹರಿದಾಡಿದೆ. ಕಾಡ್ಗಿಚ್ಚಿನಂತೆ ಕಡಿಮೆ ಸಮಯದಲ್ಲೇ ಈ ರೂಮರ್‍ ಹರಿದಾಡಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ವಿಜಯ್ ಅಭಿಮಾನಿಗಳು ಶಾಕ್ ಆಗುವುದರ ಜೊತೆಗೆ ಆತಂಕಕ್ಕೂ ಗುರಿಯಾಗಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ಚೆನೈನಲ್ಲಿ ವಾರಸುಡು ಸಿನೆಮಾದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಪತ್ನಿ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಜೊತೆಗೆ ನಿರ್ದೇಶಕ ಅಟ್ಲಿ ಪತ್ನಿಯ ಸೀಮಂತ ಕಾರ್ಯಕ್ರಮದಲ್ಲೂ ಸಹ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಈ ಕಾರಣದಿಂದಲೇ ಅವರಿಬ್ಬರ ನಡುವೆ ವಿಬೇಧಗಳು ಶುರುವಾಗಿದೆ. ಇಬ್ಬರೂ ದೂರವಾಗಿದ್ದಾರೆ ಎಂಬ ಪ್ರಚಾರ ಜೋರಾಗಿಯೇ ನಡೆದು, ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿತ್ತು. ಇನ್ನೂ ಈ ರೂಮರ್‍ ಜೋರಾದ ಕೂಡಲೇ ನಟ ವಿಜಯ್ ಟೀಂ ಕ್ಲಾರಿಟಿ ಕೊಟ್ಟಿದ್ದಾರೆ. ಇದೆಲ್ಲಾ ಫೇಕ್ ನ್ಯೂಸ್ ಯಾರು ನಂಬಬೇಡಿ. ಇಂತಹ ರೂಮರ್‍ ಗಳು ಅದು ಹೇಗೆ ಶುರುವಾಗುತ್ತದೆಯೋ ತಿಳಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ವಿಜಯ್ ಪತ್ನಿ ಸಂಗೀತಾ ತನ್ನ ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಈ ಕಾರಣದಿಂದಲೇ ಆಕೆ ವಾರಿಸು ಸಿನೆಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳ ಕುರಿತು ಇಂತಹ ರೂಮರ್‍ ಗಳು ಹುಟ್ಟಿಕೊಳ್ಳುತ್ತಿರುತ್ತವೆ. ಅದು ಸತ್ಯ ಆಗಿರಲಿ ಅಥವಾ ಸುಳ್ಳಾಗಿರಲಿ ಕ್ಷಣದಲ್ಲೇ ಎಲ್ಲಾ ಕಡೆ ವೈರಲ್ ಆಗಿಬಿಡುತ್ತವೆ.

Most Popular

To Top