Film News

ತಾಯಿ ಪಾತ್ರಕ್ಕೆ ಭಾರಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದಾರೆ ನಟಿ ವರಲಕ್ಷ್ಮೀ, ದಿನಕ್ಕೆ 3 ಲಕ್ಷ ಪಡೆದುಕೊಳ್ಳುತ್ತಿದ್ದಾರಂತೆ..!

ಸೌತ್ ಸಿನಿರಂಗದಲ್ಲಿ ತಮ್ಮದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಹಿರಿಯ ನಟ ಶರತ್ ಕುಮಾರ್‍ ರವರ ಪುತ್ರಿ ವರಲಕ್ಷ್ಮೀ ಸಹ ಒಬ್ಬರಾಗಿದ್ದಾರೆ. ಅನೇಕ ನೆಗೆಟೀವ್ ಪಾತ್ರಗಳಲ್ಲೂ ಸಹ ಆಕೆ ಕಾಣಿಸಿಕೊಂಡಿದ್ದಾರೆ. ಆಕೆ ಕಾಣಿಸಿಕೊಂಡ ಬಹುತೇಕ ಎಲ್ಲಾ ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಆಕೆ ಹೆಚ್ಚಾಗಿ ನೆಗೆಟೀವ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ತಾಯಿಯ ಪಾತ್ರ ಪೋಷಿಸಲು ದಿನಕ್ಕೆ ಮೂರು ಲಕ್ಷ ಪಡೆದುಕೊಳ್ಳುತ್ತಿರುವುದಾಗಿ ಸುದ್ದಿ ಕೇಳಿಬರುತ್ತಿದೆ.

ಬಹುಬೇಡಿಕೆ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಕಾಲಿವುಡ್ ಹಿರಿಯ ನಟ ಶರತ್ ಕುಮಾರ್‍ ಪುತ್ರಿ. ಸ್ಟಾರ್‍ ಕಿಡ್ ಆಗಿ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಆಕೆ ಮೊದಲಲ್ಲಿ ನಟಿಯಾಗಿ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಆಕೆ ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಆಕೆ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕಾಣಿಸಿಕೊಂಡರು. ಪಂದೆಂಕೋಡಿ-2, ಸರ್ಕಾರ್‍ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ವರಲಕ್ಷ್ಮೀ ಶರತ್ ಕುಮಾರ್‍ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಸಹ ಆಕೆಗೆ ಅಷ್ಟೊಂದು ಸಕ್ಸಸ್ ಸಿಗಲಿಲ್ಲ. ಆದರೆ ತೆಲುಗಿನ ಕ್ರಾಕ್ ಸಿನೆಮಾ ಆಕೆಗೆ ಒಳ್ಳೆಯ ಕ್ರೇಜ್ ತಂದುಕೊಟ್ಟಿತ್ತು. ಬಳಿಕ ಅಲ್ಲರಿ ನರೇಶ್ ನಟಿಸಿದ ನಾಂದಿ ಸಿನೆಮಾ ಸಹ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಈ ಸಿನೆಮಾದಲ್ಲಿ ಆಕೆ ವಕೀಲೆಯಾಗಿ ಕಾಣಿಸಿಕೊಂಡರು.

ಬಳಿಕ ಆಕೆಗೆ ತೆಲುಗಿನಲ್ಲಿ ಒಳ್ಳೆಯ ಆಫರ್‍ ಗಳು ಹರಿದುಬಂತು. ಈ ಹಾದಿಯಲ್ಲೇ ಆಕೆ ಕಳೆದ ವರ್ಷ ಸಮಂತಾ ಅಭಿನಯದ ಯಶೋಧ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಆಕೆಯ ಪಾತ್ರ ಸಹ ಹೈಲೈಟ್ ಆಗಿದೆ ಎನ್ನಬಹುದಾಗಿದೆ. ಇದೀಗ ನಂದಮೂರಿ ಬಾಲಕೃಷ್ಣ ಅಭಿನಯದ ವೀರಾಸಿಂಹರೆಡ್ಡಿ ಸಿನೆಮಾದಲ್ಲೂ ಸಹ ವರಲಕ್ಷ್ಮೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿನ ಆಕೆಯ ಪಾತ್ರ ಸಹ ಹೈಲೈಟ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಈ ಸಿನೆಮಾದ ಮೇಲೆ ವರಲಕ್ಷ್ಮೀ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರಂತೆ.

ಇನ್ನೂ ನಟಿ ವರಲಕ್ಷ್ಮೀ ತೆಲುಗಿನಲ್ಲಿ ಹನುಮಾನ್ ಹಾಗೂ ಶಬರಿ ಎಂಬ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಶಬರಿ ಸಿನೆಮಾದಲ್ಲಿ ಆಕೆ ಒಂದು ಮಗುವಿಗೆ ತಾಯಿಯಾಗಿ ನಟಿಸಬೇಕಂತೆ. ಈ ಪಾತ್ರಕ್ಕಾಗಿ ಆಕೆ ಒಂದು ಕಾಲ್ ಶೀಟ್ ಗೆ ಮೂರು ಲಕ್ಷ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರಂತೆ.60 ದಿನಗಳ ಕಾಲ್ ಶೀಟ್ ನೀಡಿದ್ದು, ಅರವತ್ತು ಲಕ್ಷದ ವರೆಗೂ ಆಕೆ ಶಬರಿ ಸಿನೆಮಾಗೆ ತೆಗೆದುಕೊಳ್ಳುತ್ತಿದ್ದಾರೆಂತೆ.

Most Popular

To Top