Film News

ಸ್ಯಾಮ್ ಈಸ್ ಬ್ಯಾಕ್, ಮೇಕಪ್ ಲೆಸ್ ಆಗಿ ಶಾಕಿಂಗ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ಸಮಂತಾ, ವೈರಲ್ ಆದ ಪೊಟೋಸ್…!

ನಟಿ ಸಮಂತಾ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಯೋಸೈಟೀಸ್ ಎಂಬ ಕಾಯಿಲೆ ವಿರುದ್ದ ಸುಮಾರು ದಿನಗಳಿಂದ ಹೋರಾಟ ನಡೆಸಿದು, ಇದೀಗ ಕೊಂಚ ಚೇತರಿಸಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಸಮಂತಾ ಆಕೆ ಅಭಿನಯದ ಶಾಕುಂತಲಂ ಸಿನೆಮಾದ ಡಬ್ಬಿಂಗ್ ಸಹ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಯಶೋದ ಪ್ರಮೋಷನ್ ನಲ್ಲೂ ಸಹ ಸಮಂತಾ ಭಾಗಿಯಾಗಿದ್ದರು. ಆ ವೇಳೆ ಸಮಂತಾ ತುಂಬಾ ವೀಕ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಸಮಂತಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿನ ಕೆಲವೊಂದು ಪೊಟೋಗಳು ವೈರಲ್ ಆಗಿದೆ.

ಇನ್ನೂ ಸಮಂತಾ ಯಶೋಧ ಸಿನೆಮಾದ ಟ್ರೈಲರ್‍ ಯಶಸ್ವಿಗೊಳಿಸಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ ತಾನು ಎದುರಿಸುತ್ತಿರುವ ಕಾಯಿಲೆಯ ಬಗ್ಗೆ ಸಹ ತಿಳಿಸಿದ್ದರು. ಇನ್ನೂ ಈ ಸುದ್ದಿ ಹೊರಬರುತ್ತಿದ್ದಂತೆ ಸಮಂತಾ ಅಭಿಮಾನಿಗಳೂ ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳೂ ಸಹ ಆಕೆ ಬೇಗ ಗುಣಮುಖರಾಗಲಿ ಎಂದು ಹಾರೈಸಿದರು. ಅನೇಕ ಸ್ಟಾರ್‍ ನಟ-ನಟಿಯರೂ ತಮ್ಮ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಸಮಂತಾಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದರು. ಇನ್ನೂ ಆಕೆಯ ಆರೋಗ್ಯದ ಕುರಿತಂತೆ ಅನೇಕ ರೂಮರ್‍ ಗಳು ಎದುರಾಗಿದ್ದವು. ಇತ್ತಿಚಿಗಷ್ಟೆ ಆಕೆ ಟೀಂ ಸಹ ಈ ರೂಮರ್‍ ಗಳಿಗೆ ಕ್ಲಾರಿಟಿ ಕೊಟ್ಟಿದ್ದರು. ಅದರಂತೆ ಆಕೆ ಶೀಘ್ರದಲ್ಲೇ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗುವುದಾಗಿ ತಿಳಿಸಿದ್ದರು. ಅದರಂತೆ ಆಕೆ ತಾನು ಅಭಿನಯಿಸಿರುವ ಶಾಕುಂತಲಂ ಸಿನೆಮಾದ ಡಬ್ಬಿಂಗ್ ಸಹ ಪೂರ್ಣಗೊಳಿಸಿದ್ದಾರೆ.

ಇನ್ನೂ ಸಮಂತಾ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವೈಟ್ ಕಲರ್‍ ಡ್ರೆಸ್ ನಲ್ಲಿ ಆಕೆ ಮುಂಬೈ ಏರ್‍ ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಕೆ ಮೊದಲಿನಂತಲೇ ಆಕೆ ತುಂಬಾ ಆಕ್ಟೀವ್ ಆಗಿದ್ದಾರೆ. ಇನ್ನೂ ಮೇಕಪ್ ಇಲ್ಲದೇ ಆಕೆ ಎಲ್ಲರನ್ನೂ ಆಶ್ಚರ್ಯಪಡಿಸಿದ್ದಾರೆ. ಮೇಕಪ್ ಲೆಸ್ ಆಗದೇ ಇದ್ದರೂ ಸಹ ಆಕೆ ಸ್ಟೈಲ್ ನಲ್ಲಿ ಮಾತ್ರ ಕಾಂಪ್ರಮೈಸ್ ಆಗಿಲ್ಲ. ಬ್ಲಾಕ್ ಕಲರ್‍ ಗ್ಲಾಸಸ್ ಧರಿಸಿ ವೈಟ್ ಅಂಡ್ ವೈಟ್ ನಲ್ಲಿ ಲೇಡಿ ಬಾಸ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸುಮಾರು ದಿನಗಳ ಬಳಿಕ ಸಮಂತಾ ರನ್ನು ನೋಡಿದ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಅಷ್ಟೇಅಲ್ಲದೇ ಸಮಂತಾ ತಮ್ಮ ಅಭಿಮಾನಿಗಳ ಜೊತೆಗೆ ಸೆಲ್ಫಿಗಳಿಗೆ ಸಹ ಪೋಸ್ ನೀಡಿದ್ದಾರೆ. ಈ ಕಾರಣದಿಂದ ಸಮಂತಾ ಸಿನಿಮಾ ಶೂಟಿಂಗ್ ಗಳಿಗೆ ಕಮ್ ಬ್ಯಾಕ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾ ಸಹ ಭಾರಿ ನಿರೀಕ್ಷೆಯನ್ನು ಮೂಡಿಸಿದೆ. ಈ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾ ಫೆ.17 ರಂದು ವಿವಿಧ ಭಾಷೆಗಳಲ್ಲಿ ಗ್ರಾಂಡ್ ಆಗಿ ರಿಲೀಸ್ ಆಗಲಿದೆ. ಇನ್ನೂ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾ ಶೂಟಿಂಗ್ ನಲ್ಲೂ ಸಹ ಭಾಗಿಯಾಗಲಿದ್ದಾರಂತೆ. ಜೊತೆಗೆ ಹಿಂದಿಯಲ್ಲಿ ಸಿಡಾಟೆಲ್ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ.

Most Popular

To Top