ವಿವಾದದ ಬಗ್ಗೆ ಮೌನ ಮುರಿದ ರಶ್ಮಿಕಾ, ನನ್ನ ಕೈ ಸನ್ನೆ ಕೆಲವರಿಗೆ ಇಷ್ಟವಾಗಲ್ಲ ಎಂದ ರಶ್…!

Follow Us :

ಕನ್ನಡದ ಸಿನೆಮಾದ ಮೂಲಕ ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ದೊಡ್ಡ ಸ್ಥಾನ ಪಡೆದುಕೊಂಡ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಅನೇಕ ವಿವಾದಗಳ ಮೂಲಕ ಸದಾ ಸುದ್ದಿಯಾಗುತ್ತಿದ್ದಾರೆ. ಇತ್ತಿಚಿಗಷ್ಟೆ ಕಾಂತಾರ ಸಿನೆಮಾ ನೋಡಿಲ್ಲ ಎಂದು ಕನ್ನಡಿಗರ ಆಕ್ರೋಷಕ್ಕೆ ಕಾರಣರಾಗಿದ್ದರು. ಬಳಿಕ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರು ಹೇಳದೇ ಸನ್ನೇ ಮೂಲಕ ಹೇಳಿದ್ದ ಕಾರಣ ಮತಷ್ಟು ಟೀಕೆಗೆ ಗುರಿಯಾಗಿದ್ದರು. ಆಕೆಯನ್ನು ಬ್ಯಾನ್ ಮಾಡಬೇಕೆಂದು ಸಹ ಅಭಿಯಾನ ಸಹ ಶುರುವಾಗಿತ್ತು. ಆಕೆಯ ವಿರುದ್ದ ಎದುರಾದ ವಿವಾದಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ಅಂಡ್ ನಾರ್ತ್ ಸಿನಿರಂಗದ ಬೇಡಿಕಯುಳ್ಳ ನಟಿಯಾಗಿದ್ದಾರೆ. ಆಕೆ ಅನೇಕ ಸ್ಟಾರ್‍ ಗಳ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಏನೇ ಮಾಡಿದರು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಇನ್ನೂ ಆಕೆಯ ಬಗ್ಗೆ ಅನೇಕ ವಿವಾದಗಳು ಹುಟ್ಟಿಕೊಂಡವು. ಆಕೆಯನ್ನು ಸೋಷಿಯಲ್ ಮಿಡಿಯಾದಲ್ಲಿ ಅನೇಕ ಕನ್ನಡಿಗರು ತರಾಟೆಗೆ ತೆಗೆದುಕೊಂಡರು. ಆಕೆಗೆ ಸಿನಿಮಾ ಲೈಫ್ ನೀಡಿದ ಕಿರಿಕ್ ಪಾರ್ಟಿ ಸಿನೆಮಾದ ಪ್ರೊಡಕ್ಷನ್ ಹೆಸರು ಹೇಳಲು ಸಹ ಆಕೆ ಹಿಂದೇಟು ಹಾಕಿದ್ದಾರೆ. ಜೀವನ ಕೊಟ್ಟ ಸಂಸ್ಥೆಯ ಬಗ್ಗೆ ಆಕೆ ಆ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಅದೇ ರೀತಿ ಕನ್ನಡ ಕಾಂತಾರ ಸಿನೆಮಾವನ್ನು ಅನೇಕ ಭಾಷೆಗಳ ಸ್ಟಾರ್‍ ನಟರೂ ಸಹ ಮೆಚ್ಚಿದ್ದರು. ಆದರೆ ಆಕೆ ನಾನು ಸಿನೆಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಆಗಿದ್ದರು. ಇದೀಗ ಆಕೆಯ ವಿರುದ್ದ ಕೇಳಿಬಂದ ಆರೋಪಗಳ ಬಗ್ಗೆ ಮೌನ ಮುರಿದಿದ್ದಾರೆ.

ಇತ್ತೀಚಿಗೆ ಆಕೆಗೆ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ನ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾವು ಕಲಾವಿದರಾಗಿದ್ದ ಮಾತ್ರಕ್ಕೆ ಜನ ನಮ್ಮನ್ನು ಮಾತ್ರ ಇಷ್ಟಪಡಬೇಕು ಎಂಬುದನ್ನು ನಿರೀಕ್ಷೆ ಮಾಡಬಾರದು ಎಂಬುದನ್ನು ತಿಳಿದುಕೊಂಡಿದ್ದೇನೆ. ದ್ವೇಷ ಹಾಗೂ ಪ್ರೀತಿ ಎಲ್ಲವೂ ಇರುತ್ತದೆ. ಆದರೂ ಸಹ ಜನರು ನಿಮ್ಮ ಬಗ್ಗೆ ಮಾತನಾಡುತ್ತಾರೆ. ನಾವು ಸಾರ್ವಜನಿಕ ವ್ಯಕ್ತಿಗಳು,  ಸಾರ್ವಜನಿಕರ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ. ಜೊತೆಗೆ ಸನ್ನೆ ಮಾಡಿದ ಬಗ್ಗೆ ಸಹ ಪ್ರತಿಕ್ರಿಯೆ ನೀಡಿದ್ದು, ಕೆಲವರಿಗೆ ನಾನು ಮಾತನಾಡುವ ಮಾದರಿ ಹಾಗೂ ಕೈ ಸನ್ನೇಗಳನ್ನು ಮಾಡುವುದು ಇಷ್ಟವಾಗದೇ ಇರಬಹುದು. ಆದರೆ ನನ್ನ ಮೇಲೆ ತುಂಬಾ ಪ್ರೀತಿ ಇದೆ ಅದಕ್ಕಾಗಿ ನಾನು ಸದಾ ಕೃತಜ್ಞಳಾಗಿರುತ್ತೇನೆ ಎಂದು ರಿಯಾಕ್ಟ್ ಆಗಿದ್ದಾರೆ.

ನಟಿ ರಶ್ಮಿಕಾ ತಮಿಳಿನ ಸ್ಟಾರ್‍ ನಟ ವಿಶಾಲ್ ಜೊತೆಗೆ ವಾರಿಸು ಸಿನೆಮಾದಲ್ಲಿ ನಟಿಸಿದ್ದು ಕೆಲವೇ ದಿನಗಳಲ್ಲಿ ಈ ಸಿನೆಮಾ ತೆರೆಗೆ ಬರಲಿದೆ. ಹಾಗೂ ಪ್ಯಾನ್ ಇಂಡಿಯಾ ಪುಷ್ಪಾ-2 ಸಿನೆಮಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಮಿಷನ್ ಮಜ್ನು ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಜೊತೆಗೆ ಮತಷ್ಟು ಸಿನೆಮಾಗಳು ಆಕೆಯ ಕೈಯಲ್ಲಿವೆ.