Film News

ಪ್ರಿನ್ಸ್ ಮಹೇಶ್ ಬಾಬು ಟ್ರಿಪ್ ಕಂಪ್ಲೀಟ್, ನಮ್ರತಾ ಹಂಚಿಕೊಂಡ ಪೊಟೋಸ್ ವೈರಲ್…!

ತೆಲುಗು ಸಿನಿರಂಗದಲ್ಲಿ ಪಕ್ಕಾ ಫ್ಯಾಮಿಲಿಮೆನ್ ನಟರ ಸಾಲಿನಲ್ಲಿ ಸ್ಟಾರ್‍ ನಟ ಪ್ರಿನ್ಸ್ ಮಹೇಶ್ ಬಾಬು ಸಹ ಸೇರುತ್ತಾರೆ. ನಟ ಮಹೇಶ್ ಬಾಬು ತನ್ನ ಕುಟುಂಬದೊಂದಿಗೆ ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆಚರಣೆಗಾಗಿ ವಿದೇಶಕ್ಕೆ ಹಾರಿದ್ದರು. ಮಹೇಶ್ ಬಾಬು ತನ್ನ ಕುಟುಂಬ ಸ್ವಿಟ್ಜರ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಮಹೇಶ್ ಬಾಬು ಆತನ ಪತ್ನಿ ನಮ್ರತಾ ಶಿರೋಡ್ಕರ್‍, ಮಗ ಗೌತಮ್ ಹಾಗೂ ಮಗಳು ಸಿತಾರಾ ಸಹ ಈ ಪ್ರವಾಸವನ್ನು ಎಂಜಾಯ್ ಮಾಡಿ ಇದೀಗ ವಾಪಸ್ಸಾಗಿದ್ದಾರೆ. ಇನ್ನೂ ಈ ಟ್ರಿಪ್ ಪೂರ್ಣಗೊಂಡ ಬಗ್ಗೆ ನಮ್ರತಾ ಇಂಟ್ರಸ್ಟಿಂಗ್ ಅಪ್ಡೇಟ್ ನೀಡಿದ್ದಾರೆ.

ನಟ ಮಹೇಶ್ ಬಾಬು ಸಿನೆಮಾಗಳ ಶೂಟಿಂಗ್ ನಿಂದ ಬಿಡುವು ಸಿಕ್ಕರೇ ಸಾಕು ಕುಟುಂಬದೊಂದಿಗೆ ವಿದೇಶಗಳಿಗೆ ಹಾರುತ್ತಿರುತ್ತಾರೆ. ತನ್ನ ಕುಟುಂಬಕ್ಕೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಿರುತ್ತಾರೆ ಮಹೇಶ್ ಬಾಬು. ವರ್ಷಕ್ಕೆ ಅವರು ಐದಾರು ಬಾರಿ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಇದೀಗ ಅವರು ಸ್ವಿಟ್ಜರ್ಲೆಂಡ್ ಪ್ರವಾಸ ಮುಗಿಸಿ ಬಂದಿದ್ದಾರೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷವನ್ನು ತುಂಬಾನೆ ಸಂತೋಷದಿಂದ ಸಂಭ್ರಮಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‍ 24 ರಂದು ಮಹೇಶ್ ಬಾಬು ತನ್ನ ಕುಟುಂಬದೊಂದಿಗೆ ತಮ್ಮ ಇಷ್ಟವಾದ ಸ್ವಿಟ್ಜರ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಂದ ಅವರು ಲಂಡನ್ ಗೆ ಹೋದರು. ಅಲ್ಲಿ ಸುಮಾರು ಹತ್ತು ದಿನಗಳ ಕಾಲ ಲಂಡನ್ ನಲ್ಲೇ ಕಳೆದರು. ಇದೀಗ ಮಹೇಶ್ ಪತ್ನಿ ನಮ್ರತಾ ತಮ್ಮ ಟ್ರಿಪ್ ಪೂರ್ಣಗೊಳಿಸಿ ವಾಪಸ್ಸು ಆಗಿರುವ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

ಇನ್ನೂ ಈ ಸಂತಸದ ಟ್ರಿಪ್ ಪೂರ್ಣಗೊಳಿಸಿದ ಬಗ್ಗೆ ನಮ್ರತಾ ಸೋಷಿಯಲ್ ಮಿಡಿಯಾದಲ್ಲಿ ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಎಲ್ಲರೂ ಸೇರಿ ಡಿನ್ನರ್‍ ಮಾಡುತ್ತಿರುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಲಂಡನ್ ಪಬ್ ನಲ್ಲಿ ಲಂಚ್ ಗಳು, ಮಿಚೆಲಿನ್ ಡಿನ್ನರ್‍ ಗಳು, ಟಾವೆರ್ನ್ ಸಂದರ್ಭಗಳು, ದೊಡ್ಡ ಜ್ಞಾಪಕಗಳು ಹಾಗೇ ಉಳಿಯುತ್ತವೆ ಎಂದು ಪೊಟೋಗಳಿಗೆ ಕ್ಯಾಪ್ಷನ್ ಸಹ ನೀಡಿದ್ದಾರೆ. ಸದ್ಯ ನಮ್ರತಾ ಹಂಚಿಕೊಂಡ ಪೊಟೋಗಲು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಇನ್ನೂ ಕಳೆದ ವರ್ಷ ಮಹೇಶ್ ರವರು ತಮ್ಮ ಅಣ್ಣ, ತಾಯಿ ಹಾಗೂ ತಂದೆಯನ್ನು ಸಹ ಕಳೆದುಕೊಂಡರು. ಈ ದುಃಖದಲ್ಲಿ ಹಂತ ಹಂತವಾಗಿ ಮಹೇಶ್ ಬಾಬು ಹೊರಬರುತ್ತಿದ್ದಾರೆ.

ಸದ್ಯ ಮಹೇಶ್ ಬಾಬು ವೆಕೇಷನ್ ಮುಗಿಸಿಕೊಂಡು ಹೈದರಾಬಾದ್ ಗೆ ವಾಪಸ್ಸು ಆಗಿದ್ದಾರೆ. ಇನ್ನೂ ಬಂದ ಬಳಿಕ ಕೂಡಲೇ SSMB28 ಶೂಟಿಂಗ್ ನಲ್ಲೂ ಸಹ ಭಾಗಿಯಾಗಲಿದ್ದಾರೆ ಎನ್ನಲಾಗಿದೆ, ಮಾಹಿತಿಯ ಪ್ರಕಾರ ಮುಂದಿನ ವಾರದಿಂದಲೇ ಈ ಶೂಟಿಂಗ್ ಕೆಲಸಗಳು ಸಹ ಪ್ರಾರಂಭವಾಗಲಿದೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಮಹೇಶ್ ಬಾಬು ಗೆ ಜೋಡಿಯಾಗಿ ಪೂಜಾ ಹೆಗ್ಡೆ ಬಣ್ಣ ಹಚ್ಚಲಿದ್ದಾರೆ.

Most Popular

To Top