Film News

ಒಂಟಿತನ ನಿಮ್ಮನ್ನು ಮತಷ್ಟು ಬಲಪಡಿಸುತ್ತೆ ಎಂದ ಸ್ಟಾರ್ ನಟಿ ಸಮಂತಾ, ವೈರಲ್ ಆದ ಪೋಸ್ಟ್…..!

ದೇಶದ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನದ ಬಳಿಕ ಆಕೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಇದೀಗ ಆಕೆ ಒಂಟಿತನ ನಿಮ್ಮನ್ನು ಮತಷ್ಟು ಬಲಪಡಿಸುತ್ತೆ ಎಂಬ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಏಮಾಯಾ ಚೇಸ್ಯಾವೇ ಎಂಬ ಸಿನೆಮಾದ ಮೂಲಕ ತೆಲಗು ಪ್ರೇಕ್ಷಕರಿಗೆ ಪರಿಚಯವಾದರು. ಅತೀ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿಗೆ ಸಮಂತಾ ಸೇರಿಕೊಂಡರು. ಬಳಿಕ ನಾಗಚೈತನ್ಯ ಜೊತೆಗೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಪಡೆದುಕೊಂಡಾಗಿನಿಂತ ಸಮಂತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಆಕೆಯ ವೈಯುಕ್ತಿಕ ಜೀವನದ ಬಗ್ಗೆ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇನ್ನೂ ಕೆಲವು ತಿಂಗಳುಗಳ ಹಿಂದೆ ಆಕೆ ಮಯೋಸೈಟೀಸ್ ಎಂಬ ಭಯಂಕರ ವ್ಯಾಧಿಗೆ ಗುರಿಯಾದರು. ಸುಮಾರು ತಿಂಗಳುಗಳ ಕಾಲ ಆಕೆ ಅಜ್ಞಾತದಲ್ಲೇ ಇದ್ದರು. ಬಳಿಕ ಆಕೆ ಯಶೋಧ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಕೊನೆಯದಾಗಿ ಆಕೆ ಶಾಕುಂತಲಂ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾ ಡಿಜಾಸ್ಟರ್‍ ಆಗಿದೆ.

ಸದ್ಯ ಆಕೆ ವಿಜಯ್ ದೇವರಕೊಂಡ ಹಾಗೂ ನಿರ್ದೇಕ ಶಿವಾ ನಿರ್ವಾಣ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಖುಷಿ ಸಿನೆಮಾದಲ್ಲಿ ಸಮಂತಾ ನಟಿಸಿದ್ದಾರೆ. ಸಮಂತಾ ಮಯೋಸೈಟೀಸ್ ಕಾರಣದಿಂದ ಈ ಸಿನೆಮಾದ ಶೂಟಿಂಗ್ ನಿಂತಿದ್ದು, ಇದೀಗ ಸಿನೆಮಾದ ಶೂಟಿಂಗ್ ಪುನಃ ಆರಂಭವಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದಿಂದ ನಾ ರೋಜಾ ನುವ್ವೆ ಎಂಬ ಹಾಡು ಸಹ ಬಿಡುಗಡೆಯಾಗಿದ್ದು ಅನೇಕರನ್ನು ರಂಜಿಸಿದೆ. ಇದೀಗ ಸಮಂತಾ ಮತ್ತೊಂದು ಮೊಟಿವೇಷನಲ್ ಕೋಟ್ ಶೇರ್‍ ಮಾಡಿದ್ದಾರೆ. ಖುಷಿ ಸಿನೆಮಾದಲ್ಲಿನ ತನ್ನ ಲುಕ್ ಪೊಟೋ ಶೇರ್‍ ಮಾಡಿ ಇಂಟ್ರಸ್ಟಿಂಗ್ ಕೋಟ್ ಶೇರ್‍ ಮಾಡಿದ್ದಾರೆ. ನಿಶ್ಯಬ್ದವಾಗಿ ಇರುವುದು, ಒಂಟಿಯಾಗಿ ಜೀವನ ಅನುಭವಿಸುವುದರಿಂದ ನಿಮ್ಮ ಜೀವನದಲ್ಲಿ ನೀವು ಮತಷ್ಟು ಬಲಶಾಲಿಯಾಗುತ್ತೀರಿ, ಸಣ್ಣ ಪುಟ್ಟ ನೋವುಗಳು ನಿಮ್ಮನ್ನು ಏನು ಮಾಡಲು ಆಗುವುದಿಲ್ಲ ಎಂದು ಕೋಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇನ್ನೂ ಆಕೆ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಸಮಂತಾ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ ಸಿನೆಮಾದ ಜೊತೆಗೆ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಈ ಸಿರೀಸ್ ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ.

Most Popular

To Top