ಗರ್ಭಿಣಿ ಎಂಬುದು ಸುಳ್ಳು ಎಂದವರಿಗಾಗಿ ಬೇಬಿ ಬಂಪ್ ಶೋ ಮಾಡಿದ ಇಲಿಯಾನಾ, ವೈರಲ್ ಆದ ಪೊಟೋ….!

ಗೋವಾ ಬ್ಯೂಟಿ ಇಲಿಯಾನಾ ಇತ್ತೀಚಿಗೆ ತಾನು ಗರ್ಭಿಣಿಯೆಂಬ ಸುದ್ದಿಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆ ಗರ್ಭಕ್ಕೆ ತಂದೆ ಯಾರು ಎಂಬುದನ್ನು ತಿಳಿಸಿದೇ ಆಕೆ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ…

ಗೋವಾ ಬ್ಯೂಟಿ ಇಲಿಯಾನಾ ಇತ್ತೀಚಿಗೆ ತಾನು ಗರ್ಭಿಣಿಯೆಂಬ ಸುದ್ದಿಯ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆ ಗರ್ಭಕ್ಕೆ ತಂದೆ ಯಾರು ಎಂಬುದನ್ನು ತಿಳಿಸಿದೇ ಆಕೆ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದರು. ಬಳಿಕ ಆಕೆ ಗರ್ಭಿಣಿಯೆಂಬುದಾಗಿ ಅನೇಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದರು. ಆದರೆ ಅದನ್ನು ಕೆಲವರು ನಂಬದ ಕಾರಣ ಇದೀಗ ಬೇಬಿ ಬಂಪ್ ಪೊಟೋ ಹಂಚಿಕೊಂಡು ತಾನು ಗರ್ಭಿಣಿ ಎಂಬುದನ್ನು ತಿಳಿಸಿದ್ದಾರೆ. ಇದೀಗ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ನಟಿ ಇಲಿಯಾನಾ ಕೆಲವು ದಿನಗಳ ಹಿಂದೆಯಷ್ಟೆ ತಾನು ಗರ್ಭಿಣಿ ಎಂಬ ವಿಚಾರವನ್ನು ತನ್ನ ಇನ್ಸ್ಟಾ ಖಾತೆಯ ಮೂಲಕ ರಿವೀಲ್ ಮಾಡಿದ್ದರು. ಈ ಸುದ್ದಿ ತಿಳಿದ ಕೂಡಲೇ ಅನೇಕರು ಶಾಕ್ ಆಗಿದ್ದರು. ಅದಕ್ಕೆ ಕಾರಣ ಇಲಿಯಾನಾಗೆ ಇನ್ನೂ ಮದುವೆಯಾಗಿಲ್ಲ. ಜೊತೆಗೆ ಅಧಿಕೃತವಾಗಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸಹ ಸುದ್ದಿಯಿಲ್ಲ. ಅಂತಹುದರಲ್ಲಿ ಆಕೆ ಧಿಡೀರ್‍ ನೇ ತಾನು ಗರ್ಭಿಣಿ ಎಂದು ಘೋಷಣೆ ಮಾಡಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಅಂದನಿಂದ ಆಕೆ ತನ್ನ ಗರ್ಭದಲ್ಲಿರುವ ಮಗುವಿನ ಬಗ್ಗೆ ಸದಾ ಒಂದಲ್ಲ ಒಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ಇದನ್ನು ನಂಬುತ್ತಿರಲಿಲ್ಲ. ಅಂತಹವರಿಗಾಗಿ ಇಲಿಯಾನಾ ಇದೀಗ ತನ್ನ ಬೇಬಿಬ ಬಂಪ್ ಪೊಟೋ ಶೇರ್‍ ಮಾಡಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಬೇಬಿಬಂಪ್ ಶೋ ಮಾಡಿದ್ದು, ಪೊಟೋಗಳು ವೈರಲ್ ಆಗಿದೆ.

ಇನ್ನೂ ನಟಿ ಇಲಿಯಾನಾ ತನ್ನ ಬೇಬಿಬಂಪ್ ಪೊಟೋಗಳನ್ನು ಇನ್ಸ್ಟಾಖಾತೆಯ ಮೂಲಕ ಶೇರ್‍ ಮಾಡಿದ್ದಾರೆ. ಈ ಪೊಟೋಗಳಿಗೆ ಆಕೆ ಬಂಪ್ ಅಲರ್ಟ್ ಎಂಬ ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಇಲಿಯಾನಾ ಈ ಪೊಟೋಗಳಲ್ಲಿ ಕೊಂಚ ದಪ್ಪ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯೂಟ್ ಆಗಿ ಲುಕ್ಸ್ ಕೊಟ್ಟಿದ್ದಾರೆ. ಜೊತೆಗೆ ಬ್ಲಾಕ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಸಹ ಕಾಣಿಸಿಕೊಂಡಿದ್ದಾರೆ. ಹಾಟ್ ಆಗಿ ಹಾಗೂ ಕ್ಯೂಟ್ ಆಗಿ ಸಹ ಇಲಿಯಾನಾ ಅಭಿಮಾನಿಗಳನ್ನು ರಂಜಿಸಿದ್ದಾರೆ.  ಇನ್ನೂ ಇಲಿಯಾನಾ ಈ ಬೇಬಿ ಬಂಪ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನೆಟ್ಟಿಗರ ಜೊತೆಗೆ ಅನೇಕ ಸೆಲೆಬ್ರೆಟಿಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮನ್ನಾ, ಅಥಿಯಾ ಶೆಟ್ಟಿ ಸೇರಿದಂತೆ ಹಲವರು ಶುಭಾಷಯಗಳನ್ನು ಕೋರಿದ್ದಾರೆ.

ಇನ್ನೂ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಶುಭಾಷಯಗಳನ್ನು ಕೋರುತ್ತಿದ್ದರೇ, ಕೆಲವರು ಎಲ್ಲಾ ಒಕೆ ತಂದೆ ಯಾರೂ ಎಂಬುದನ್ನು ತಿಳಿಸದೇ ಇರುವುದು ಯಾಕೆ ಎಂದು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಇಲಿಯಾನಾ ಹಾಟ್ ಡೋಸ್ ಗೆ ಫಿದಾ ಆದ ಅನೇಕರು ಗ್ಲಾಮರಸ್ ಬ್ಯೂಟಿ, ಸೂಪರ್‍ ಹಾಟ್ ಬೇಬಿ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಆಕೆ ಧರಿಸಿದ ಗರ್ಭಕ್ಕೆ ಯಾರು ತಂದೆ ಎಂಬುದನ್ನು ಇಲಿಯಾನಾ ಇನ್ನೂ ನಿಗೂಡವಾಗಿಯೇ ಇಟ್ಟಿದ್ದಾರೆ.