ನಡು ರಾತ್ರಿ ಸಮಂತಾ ಹಾಗೂ ವಿಜಯ್ ದೇವರಕೊಂಡ ವಿಡಿಯೋ ಕಾಲ್ ಸಂಭಾಷಣೆ, ಚೀಪ್ ಪಬ್ಲಿಸಿಟಿ ಎಂದು ಟ್ರೋಲ್…..!

Follow Us :

ಮಹಾನಟಿ ಬಳಿಕ ಸಮಂತಾ ಹಾಗೂ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಸಿನೆಮಾ ಇದೇ ಸೆ.1 ರಂದು ಬಿಡುಗಡೆಯಾಗಲಿದ್ದು, ಸಿನಮಾ ಈಗಾಗಲೇ ಒಳ್ಳೆಯ ಬಜ್ ಸ್ವಂತ ಮಾಡಿಕೊಂಡಿದೆ. ಸಿನೆಮಾದ ಪ್ರಮೋಷನ್ ನಲ್ಲಿ ಸಮಂತಾ ಭಾಗಿಯಾಗುತ್ತಿಲ್ಲ. ಅಕ್ಕೆ ಕಾರಣ ಆಕೆ ತನ್ನ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ದೂರವುಳಿದು ಅಮೇರಿಕಾದಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಇದೀಗ ಸಮಂತಾ ಹಾಗೂ ವಿಜಯ್ ದೇವರಕೊಂಡ ವಿಡಿಯೋ ಕಾಲ್ ನಲ್ಲಿ ಸಂಭಾಷಣೆ ಮಾಡಿದ್ದು, ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಸಮಂತಾ ಅನಾರೋಗ್ಯದ ಕಾರಣದಿಂದ ಸಿನೆಮಾಗಳಿಂದ ಒಂದು ವರ್ಷ ಬ್ರೇಕ್ ಪಡೆದುಕೊಂಡಿದ್ದಾರೆ. ಈ ಸಂಬಂಧ ಆಕೆ ವಿದೇಶಕ್ಕೆ ಅಂದರೇ ಅಮೇರಿಕಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದರು. ಆ ಕಾರಣದಿಂದ ಆಕೆ ಸುಮಾರು ತಿಂಗಳುಗಳ ಕಾಲ ನಿಗೂಡವಾಗಿಯೇ ಇದ್ದರು. ಬಳಿಕ ಕೊಂಚ ಚೇತರಿಸಿಕೊಂಡು ಮತ್ತೆ ಸಿನೆಮಾಗಳಲ್ಲಿ ನಟಿಸಿದರು. ಮಯೋಸೈಟಿಸ್ ಬಳಿಕ ಆಕೆ ಯಶೋಧ ಹಾಗೂ ಶಾಕುಂತಲಂ ಸಿನೆಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾಗಳ ಬಳಿಕ ಆಕೆ ಖುಷಿ ಹಾಗೂ ಸಿಟಾಡೆಲ್ ಎಂಬ ವೆಬ್ ಸಿರೀಸ್ ಗಳ ಶೂಟಿಂಗ್ ಮುಗಿಸಿ ಆಕೆ ಒಂದು ವರ್ಷದ ಕಾಲ ಸಿನೆಮಾಗಳಿಂದ ವಿರಾಮ ಪಡೆದುಕೊಂಡು ಅಮೇರಿಕಾದಲ್ಲಿ ಸಹಜಸಿದ್ದವಾದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನೂ ಸಮಂತಾ ನ್ಯೂಯಾರ್ಕ್‌ನಲ್ಲಿರುವ ಕಾರಣ ಖುಷಿ ಸಿನೆಮಾದ ಪ್ರಮೋಷನ್ ನಲ್ಲಿ ಭಾಗಿಯಾಗಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಖುಷಿ ಪ್ರಮೋಷನ್ ಜವಾಬ್ದಾರಿ ವಿಜಯ್ ದೇವರಕೊಂಡ ಮೇಲಿದೆ. ಆದರೂ ಸಹ ಆದಷ್ಟು ಸಮಂತಾ ರವರನ್ನು ಪ್ರಮೋಷನ್ ನಲ್ಲಿ ಭಾಗಿಯಾಗುವಂತೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ವಿಜಯ್ ದೇವರಕೊಂಡ ಸಮಂತಾ ಗೆ ಅರ್ಧರಾತ್ರಿ ವಿಡಿಯೋ ಕಾಲ್ ಮಾಡಿದ್ದಾನೆ. ಈ ಕಾಲ್ ನಲ್ಲಿ ಸಮಂತಾ ಹಾಗೂ ವಿಜಯ್ ತುಂಬಾ ಸಂತೋಷದಿಂದ ಮಾತನಾಡಿಕೊಳ್ಳುತ್ತಾರೆ. ಸಮಂತಾ ಗಾಗಿ ವಿಜಯ್ ದೇವರಕೊಂಡ ಖುಷಿ ಸಿನೆಮಾದಲ್ಲಿನ ನಾ ರೋಜಾ ನುವ್ವೆ ಎಂಬ ಹಾಡನ್ನು ಸಹ ಹಾಡುತ್ತಾನೆ. ಅದಕ್ಕೆ ಸಮಂತಾ ಮೊಗದಲ್ಲಿ ಕಿರುನಡೆ ಮೂಡುತ್ತದೆ. ಇನ್ನೂ ನೆಟ್ಟಿಗರು ಈ ವಿಡಿಯೋ ಕ್ರಿಯೇಟೆಡ್ ವಿಡಿಯೋ ಎಂದು ಹೇಳುತ್ತಿದ್ದಾರೆ. ಒಂದು ಸೆಟಪ್ ಮಾಡಿ ರೆಕಾರ್ಡ್ ಮಾಡಿದ ವಿಡಿಯೋ ಎಂದು ಸಮಂತಾ ಅಮೇರಿಕಾದಲ್ಲಿದ್ದಾರೆ. ವಿಡಿಯೋ ಕಾಲ್ ಎಂದು ಹೇಳಿದರೇ ಒಳ್ಳೆಯ ಪಬ್ಲಿಸಿಟಿ ಬರುತ್ತದೆ ಎಂದು ಮೇಕರ್ಸ್ ಪ್ಲಾನ್ ಮಾಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಸಿನೆಮಾ ಪ್ರಮೋಷನ್ ಗಾಗಿ ಅಷ್ಟೊಂದು ಚೀಪ್ ಪಬ್ಲಿಸಿಟಿ ಬೇಕಾಗಿತ್ತಾ ಎಂದು ನೆಟ್ಟಿಗರೂ ಸಕತ್ ಟ್ರೋಲ್ ಮಾಡುತ್ತಿದ್ದಾರೆ. ನಿನ್ನು ವಿಡಿಯೋ ಕಾಲ್ ಗಾಗಿ ಯಾರಾದರೂ ಗಾಗುಲ್ಸ್ ಹಾಕಿಕೊಂಡು ರೆಡಿಯಾಗಿ ಇರುತ್ತಾರಾ ಎಂದು ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಇನ್ನೂ ಈ ಸಿನೆಮಾದ ಪ್ರಮೋಷನ್ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ಸಮಂತಾ ಹಾಗೂ ವಿಜಯ್ ಬೋಲ್ಡ್ ಆಗಿ ನೃತ್ಯ ಮಾಡಿದ್ದು ಸಹ ಅನೇಕರು ಟ್ರೋಲ್ ಮಾಡಿದ್ದರು.