News

ಭವಿಷ್ಯ ನುಡಿದ ಯತ್ನಾಳ್, ಲೋಕಸಭಾ ಚುನಾವಣೆ ಮುನ್ನಾ ಅಥವಾ ನಂತರ ರಾಜ್ಯ ರಾಜಕಾರಣದಲ್ಲಿ ಅನಾಹುತ ಆಗಲಿದೆಯಂತೆ?

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಡೇರ್‍ ಅಂಡ್ ಡ್ಯಾಷಿಂಗ್ ರಾಜಕಾರಣಿ ಎಂದು ಹೇಳಬಹುದಾಗಿದೆ.ಇದೀಗ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದರಂತೆ ಲೋಕಸಭಾ ಚುನಾವಣೆ ಮುನ್ನಾ ಅಥವಾ ನಂತರ ರಾಜ್ಯ ರಾಜಕಾರಣದಲ್ಲಿ ಏನೋ ಒಂದು ಅನಾಹುತ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯತ್ನಾಳ್ ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಅನಾಹುತ ಆಗಲಿದೆ. ಕಾಂಗ್ರೇಸ್ ಗೆ ಇದು ಭಯತರಿಸಿದೆ. ಕಾಂಗ್ರೇಸ್ ಶಾಸಕರ 135 ಶಾಸಕರ ಮೇಲೆ ಕಾಂಗ್ರೇಸ್ ಪಕ್ಷಕ್ಕೆ ನಂಬಿಕೆಯಿಲ್ಲ. ಬಿಜೆಪಿಯವರು ಬಂದರೇ ಮಾತ್ರ ಕಾಂಗ್ರೇಸ್ ಗೆಲ್ಲುತ್ತೆ ಎಂಬ ನಂಬಿಕೆ. ಬಿಜೆಪಿ ಕರ್ನಾಟಕದಲ್ಲಿ ಕಳೆದು ಹೋಗುತ್ತಿದೆ ಎಂಬ ಕಾರಣದಿಂದ ವಿನಾಕಾರಣ ಇಲ್ಲ ಸಲ್ಲದ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೇಸ್ ಗೆ ಸೇರ್ತಾರೆ ಅನ್ನೋದು ಕಾಂಗ್ರೇಸ್ ಪಕ್ಷ ಮಾಡುತ್ತಿರುವ ಸೃಷ್ಟಿಯಷ್ಟೆ. ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಅನುಭವಿಗಳಿದ್ದಾರೆ. ಮೋದಿಯವರ ಕಾಲದಲ್ಲಿ ಯಾರೂ ಬಿಜೆಪಿ ಬಿಟ್ಟು ಹೋಗೊದಿಲ್ಲ. ಮೋದಿಯವರ ಕಾಲದಲ್ಲಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದೆ. ಕೆಲವೊಂದು ಸಮೀಕ್ಷೆಗಳ ಪ್ರಕಾರ ಮೋದಿಯವರೆ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದರು.

ಇನ್ನೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುವು ವಾತವಾರಣ ಸೃಷ್ಟಿಯಾಗಿರುವ ಕಾರಣದಿಂದಲೇ ಕಾಂಗ್ರೆಸ್ ರವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಈವರೆಗೆ ಯಾರೂ ಕಾಂಗ್ರೇಸ್ ಗೆ ಸೇರಿದ್ದಾರೆ ಹೇಳಿ. ಅಭಿವೃದ್ದಿ ಕಾರಣದಿಂದ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುತ್ತಾರೆ. ಅದರಲ್ಲಿ ತಪ್ಪೇನಿದೆ. ನಾನು ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇ ಅಷ್ಟು ಮಾತ್ರಕ್ಕೆ ಕಾಂಗ್ರೇಸ್ ಸೇರುತ್ತಾರೆ ಎಂದು ಅರ್ಥವಲ್ಲ. ಇದೇ ವೇಳ ರೇಣುಕಾಚಾರ್ಯ ಬಗ್ಗೆ ಸಹ ಮಾತನಾಡಿ, ಅವರು ಹಾಗೆ ಅಡ್ಡಾಡ್ಡಿಕೊಂಡು ಇರ್ತಾರೆ ಬಿಡಿ ಎಂದು ಹಾಸ್ಯ ಮಾಡಿದರು. ಒಟ್ಟಿನಲ್ಲಿ ಲೋಕಸಭಾ ಬಳಿಕ ರಾಜ್ಯ ಸರ್ಕಾರದಲ್ಲಿ ಅನಾಹುತ ನಡೆಯಲಿದೆ ಎಂದು ಹೇಳುವ ಭವಿಷ್ಯ ನುಡಿದಿದ್ದಾರೆ.

 

Most Popular

To Top