ವೇದಿಕೆಯ ಮೇಲೆ ಶರ್ಟ್ ಬಿಚ್ಚಿ ಸಮಂತಾ ಜೊತೆಗೆ ಕ್ರೇಜಿ ಡ್ಯಾನ್ಸ್ ಮಾಡಿದ ವಿಜಯ್ ದೇವರಕೊಂಡ, ಶಿಳ್ಳೇ, ಕೇಕೆಗಳು ಬಲು ಜೋರು….!

Follow Us :

ತೆಲುಗು ಸಿನಿರಂಗದ ಸ್ಟಾರ್‍ ನಟ ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ಸ್ಟಾರ್‍ ನಟಿ ಸಮಂತಾ ಕಾಂಬಿನೇಷನ್ ನಲ್ಲಿ ಲವ್ ರೊಮ್ಯಾಂಟಿಕ್ ಖುಷಿ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಜೊತೆಗೆ ಸಿನೆಮಾದಲ್ಲಿನ ಹಾಡುಗಳೂ ಸಹ ಭಾರಿ ಸದ್ದು ಮಾಡುತ್ತಿವೆ. ಮಿಲಿಯನ್ಸ್ ವೂವ್ಸ್ ಪಡೆದುಕೊಂಡು ಟ್ರೆಂಡ್ ಆಗುತ್ತಿವೆ. ಇದೀಗ ವೇದಿಕೆಯೊಂದರಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ಕ್ರೇಜಿ ಡ್ಯಾನ್ಸ್ ಮಾಡಿದ್ದು, ಕಾರ್ಯಕ್ರಮದಲ್ಲಿ ಕೇಕೇಗಳು ಶಿಳ್ಳೆಗಳು ಅಬ್ಬರಿಸಿದೆ.

ಖುಷಿ ಸಿನೆಮಾ ತಂಡ ಹೈದರಾಬಾದ್ ನಲ್ಲಿ ಸ್ವತಂತ್ರ ದಿನಾಚರಣೆ ಅಂಗವಾಗಿ ಮ್ಯೂಜಿಕ್ ಈವೆಂಟ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಇದರಿಂದ ಇಡೀ ಕಾರ್ಯಕ್ರಮ ಜೋರಾಗಿ ನಡೆದಿತ್ತು. ಈ ವೇಳೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಸ್ಟೇಜ್ ಮೇಲೆ ಏರಿದ್ದಾರೆ. ಅವರಿಬ್ಬರ ಎಂಟ್ರಿಯಿಂದ ಆಡಿಟೋರಿಯಂ ಪುಲ್ ಕೇಕೆಗಳಿಂದ ಬದಲಾಯ್ತು. ಇಬ್ಬರೂ ಸಹ ಸೂಪರ್‍ ಲುಕ್ಸ್ ನಲ್ಲಿ ಕಂಗೊಳಿಸಿದರು. ಇಬ್ಬರೂ ಇಡೀ ಈವೆಂಟ್ ಗೆ ಹೈಲೈಟ್ ಎಂದೇ ಹೇಳಬಹುದು. ವಿಜಯ್ ವೈಟ್ ಕೋಟ್ ಪ್ಯಾಂಟ್ ನಲ್ಲಿ ಬಂದಿದ್ದರು. ಸಮಂತಾ ಬ್ಲಾಕ್ ಡ್ರೆಸ್ ನಲ್ಲಿ ಟಾಪ್ ಸೌಂದರ್ಯದ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದರು. ಈವೆಂಟ್ ಗೆ ಗ್ಲಾಮರ್‍ ಟಚ್ ಕೊಟ್ಟಿದ್ದಾರೆ ಎಂದೇ ಹೇಳಬಹುದು.

ಈ ವೇದಿಕೆ ಮೇಲೆ ವಿಜಯ್ ಸಮಂತಾ ಎಂಟ್ರಿ ಕೊಟ್ಟಿದ್ದೇ ವಿಭಿನ್ನವಾಗಿತ್ತು ಎಂದು ಹೇಳಬಹುದಾಗಿದೆ. ಅದರಲ್ಲೂ ಇಬ್ಬರೂ ಕ್ರೇಜಿ ಡ್ಯಾನ್ಸ್ ಮಾಡಿದ್ದು ಮತಷ್ಟು ಹೈಲೈಟ್ ಆಗಿತ್ತು. ಇಬ್ಬರೂ ಭರ್ಜರಿಯಾಗಿ ಸ್ಟೆಪ್ಸ್ ಸಹ ಹಾಕಿದ್ದಾರೆ. ಅದರಲ್ಲೂ ಸಮಂತಾ ಜೊತೆಗೆ ಬಂದ ವಿಜಯ್ ದೇವರಕೊಂಡ ತಾನು ಧರಿಸಿದ್ದ ಕೋಟ್ ಬಿಚ್ಚಿ ಸಮಂತಾ ಜೊತೆಗೆ ಭಾರಿ ಸ್ಟೆಪ್ಸ್ ಹಾಕಿದ್ದು, ಮತಷ್ಟು ಹೈಲೈಟ್ ಎನ್ನಬಹುದಾಗಿದೆ.  ಒಂದು ಕೈಯಲ್ಲಿ ಆಕೆಯನ್ನು ಎತ್ತಿಕೊಂಡು ಮಾಡಿದ ಡ್ಯಾನ್ಸ್ ಮೈಂಡ್ ಬ್ಲೋಯಿಂಗ್ ಎಂದೇ ಹೇಳಲಾಗುತ್ತಿದೆ. ಮತ್ತೊಂದು ಕಡೆ ರೊಮ್ಯಾಂಟಿಕ್ ಲುಕ್ಸ್ ನೊಂದಿಗೆ ಅವರು ಹಾಕಿದಂತಹ ಸ್ಟೆಪ್ಸ್ ನೆಕ್ಸ್ಟ್ ಲೆವೆಲ್ ಎಂದೇ ಹೇಳಲಾಗಿದೆ. ಜೊತೆಗೆ ಒನ್ ಆಫ್ ದಿ ಬೆಸ್ಟ್ ಎಂಟ್ರಿ ಎಂದೇ ಹೇಳಲಾಗುತ್ತಿದೆ. ಹತ್ತು ನಿಮಿಷಗಳ ಕಾಲ ಇಡೀ ಆಡಿಟೋರಿಯಂ ಕೇಕೆಗಳು, ಶಿಳ್ಳೆಗಳಿಂದ ತುಂಬಿತ್ತು ಎಂದು ಹೇಳಲಾಗುತ್ತಿದೆ

ಇದೇ ಸಮಯದಲ್ಲಿ ಮ್ಯೂಜಿಕ್ ಡೈರೆಕ್ಟರ್‍ ವಾಹಾಬ್ ಪ್ರೇಕ್ಷಕರ ಜೊತೆಗೆ ಹಾಡನ್ನು ಹಾಡಿಸಿದ್ದಾರೆ. ಇದರಿಂದ ಮತ್ತೊಮ್ಮೆ ಈ ಕಾರ್ಯಕ್ರಮ ಜೋರು ಪಡೆದುಕೊಂಡಿತ್ತು. ಈವೆಂಟ್ ನಲ್ಲಿ ವಿಜಯ್ ಹಾಗೂ ಸಮಮತಾ ಜೊತೆಗೆ ನಿರ್ದೇಶಕ ಶಿವ ನಿರ್ವಾಣ, ನಿರ್ಮಾಪಕರು, ವಿಜಯ್ ದೇವರಕೊಂಡ ಕುಟುಂಬ, ಮ್ಯೂಜಿಕ್ ಡೈರೆಕ್ಟರ್‍ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಒಟ್ಟಿನಲ್ಲಿ ಸಮಂತಾ ಹಾಗೂ ವಿಜಯ್ ಕ್ರೇಜಿ ಡ್ಯಾನ್ಸ್ ವಿಡಿಯೋ ಕ್ಲಿಪ್ ಗಳು, ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.