ಪ್ರಿಯಕರನೊಂದಿಗೆ ಸೇರಿ ಗಂಡನನ್ನೆ ಕೊಂದ ಪಾಪಿ ಪತ್ನಿ, ಪ್ರೀತಿಗೆ ಅಡ್ಡ ಅಂತ ಗಂಡನನ್ನು ಪರಲೋಕಕ್ಕೆ ಕಳುಹಿಸಿಬಿಟ್ಲು….!

Follow Us :

ಸಮಾಜದಲ್ಲಿ ಅನೈತಿಕ ಸಂಬಂಧಗಳ ಕಾರಣದಿಂದ ಅನೇಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ತಮ್ಮ ಪ್ರೀತಿಗೆ ಗಂಡ ಅಡ್ಡಿ ಎಂದು ಪ್ರಿಯಕರನೊಂದಿಗೆ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ಚಿಕ್ಕಮಗಳೂರಿನ ಕಡೂರು ತಾಲೂಕಿನ ಹನುಮನಹಳ್ಳಿ ಎಂಬಲ್ಲಿ ನಡೆದಿದೆ. ಮೃತ ದುದೈರ್ವಿಯನ್ನು ನವೀನ್ (28) ಎಂದು ಗುರ್ತಿಸಲಾಗಿದೆ.

ಚಿಕ್ಕಮಗಳೂರಿನ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿಯ ನಿವಾಸಿ ನವೀನ್ ಹಾಗೂ ಪಾವನ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಮೂರು ವರ್ಷದ ಮಗು ಸಹ ಇದೆ. ನವೀನ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದವರಾಗಿದ್ದಾರೆ. ಮೃತ ನವೀನ್ ಪತ್ನಿ ಪಾವನ ಆಕೆಯ ಬಾಲ್ಯ ಸ್ನೇಹಿತ ಸಂಜಯ್ ಎಂಬಾತನನ್ನು ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಗೆ ಪತಿ ಅಡ್ಡಿ ಎಂದು ನವೀನ್ ನನ್ನು ಕೊಲೆ ಮಾಡಲು ಪ್ಲಾನ್ ಮಾಡುತ್ತಾರೆ. ಅದರಂತೆ ಪಾವನ ನವೀನ್ ಸೇವಿಸುವ ಆಹಾದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಲೆ ಮಾಡುತ್ತಾರೆ. ಅದರ ಜೊತೆಗೆ ಕೊಲೆಯನ್ನು ಸಹಜ ಮರಣ ಎಂದು ಬಿಂಬಿಸಲು ನಾಟಕ ಸಹ ಮಾಡುತ್ತಾರೆ. ಆದರೆ ಮೃತ ನವೀನ್ ತಂದೆಯ ಅನುಮಾನದಿಂದ ಕೊಲೆ ಮಾಡಿರುವ ಸತ್ಯ ಹೊರಬಂದಿದೆ ಎನ್ನಲಾಗಿದೆ.

ಇನ್ನೂ ಆಹಾರದಲ್ಲಿ ನಿದ್ದೆ ಮಾತ್ರ ಹಾಕುವುದಕ್ಕೂ ಮುಂಚೆ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಲು ಸಹ ಪ್ಲಾನ್ ಮಾಡಿದ್ದಳಂತೆ. ಏನಾದರೂ ಮಾಡಿ ನವೀನ್ ನನ್ನು ಕೊಲೆ ಮಾಡಬೇಕೆಂದು ಚಪಾತಿಯಲ್ಲಿ ನಿದ್ದೆ ಮಾತ್ರೆ ಬೆರಸಿ ಆತನಿಗೆ ಉಣಿಸಿದ್ದಾಳೆ. ಇದನ್ನು ತಿಂದ ನವೀನ್ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪತಿಯನ್ನು ಕೂರಿಸಿಕೊಂಡು ಅವರಿದ್ದ ಸ್ಥಳದಿಂದ ಮೂರು ಕಿ.ಮೀ ದೂರದಲ್ಲಿರುವ ಕೆರೆಗೆ ಎಸೆದು ಬಂದಿದ್ದಾರೆ. ಮರುದಿನ ಬೆಳಿಗ್ಗೆ ಗಂಡ ಮೀನು ಹಿಡಿಯಲು ಕೆರೆಗೆ ಹೋಗಿ ಇನ್ನೂ ಬಂದಿಲ್ಲ ಎಂದು ಊರಿನ ಜನರಿಗೆ ನಂಬಿಸಲು ಯತ್ನಿಸಿದ್ದಾರೆ. ಬಳಿಕ ಊರಿನ ಜನತೆ ಕೆರೆಯ ಬಳಿ ಹೋಗಿ ನೋಡಿದರೇ ಅಲ್ಲಿ ನವೀನ್ ಮೃತದೇಹ ಪತ್ತೆಯಾಗಿರುತ್ತದೆ.

ಈ ಸಂಬಂಧ ಮೊದಲಿಗೆ ಅಸಹಜ ಸಾವು ಎಂದು ಪ್ರಕರಣ ಸಹ ದಾಖಲಾಗುತ್ತದೆ. ಆದರೆ ನವೀನ್ ತಂದೆ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಪಾವನ ಳನ್ನು ಠಾಣೆಗೆ ಕೆರೆಸಿ ವಿಚಾರಣೆ ನಡೆಸಿದಾಗ ನಡೆದ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರೋಣೋತ್ತರ ಪರೀಕ್ಷೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.