ಆ ಇಬ್ಬರೂ ಹಿರೋಗಳು ಡೇಟಿಂಗ್ ಗೆ ಬರುವಂತೆ ಒತ್ತಾಯಿಸಿದರು ಎಂದು ಇಬ್ಬರು ಹಿರೋಗಳ ವಿರುದ್ದ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ ನಟಿ ತಾಪ್ಸಿ ಪನ್ನು………!

Follow Us :

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಬೋಲ್ಡ್ ಕಾಮೆಂಟ್ ಗಳನ್ನು ಮಾಡುವ ಮೂಲಕ ವಿವಾದಗಳನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಇಬ್ಬರು ನಟರ ವಿರುದ್ದ ಆಕೆ ಕಾಸ್ಟಿಂಗ್ ಕೌಚ್ ಆರೋಪಗಳನ್ನು ಮಾಡಿದ್ದಾರೆ.

ಕಳೆದ 2010 ರಲ್ಲಿ ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ತಾಪ್ಸಿ ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡರು. ಆದರೆ ಆಕೆಗೆ ಯಾವುದೇ ಸಿನೆಮಾ ಕಮರ್ಷಿಯಲ್ ಸಕ್ಸಸ್ ತಂದುಕೊಡಲಿಲ್ಲ. ಬಳಿಕ ಆಕೆ ಬಾಲಿವುಡ್ ನಲ್ಲಿ ಛಷ್ಮೆ ಬದ್ದೂರ್‍ ಸಿನೆಮಾದಲ್ಲಿ ನಟಿಸಿದ್ದರು. ಸೌತ್ ನಲ್ಲಿ ನಟಿಸುತ್ತಲೇ, ಹಿಂದಿಯಲ್ಲೂ ಸಹ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಾ ಬಂದರು. ಇನ್ನೂ ತಾಪ್ಸಿ 2016 ರಿಂದ ಬಾಲಿವುಡ್ ನಲ್ಲೇ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಬ್ಯುಸಿಯಾದ ಈಕೆ ಸದಾ ಕಾಂಟ್ರವರ್ಸಿ ಕಾಮೆಂಟ್ ಗಳ ಮೂಲಕ ಸದಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ತಾಪ್ಸಿ ಆಗಾಗ ಕೆಲವೊಂದು ಕಾಮೆಂಟ್ ಗಳನ್ನು ಮಾಡುತ್ತಾ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಬಾಲಿವುಡ್ ಸಿನಿರಂಗದ ಕುರಿತು ಸಹ ಆಕೆ ಕಾಂಟ್ರವರ್ಸಿ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ತಾಪ್ಸಿ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಾಪ್ಸಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸೌತ್ ಗಿಂತಲೂ ಬಾಲಿವುಡ್ ನಲ್ಲಿ ಹೆಚ್ಚು ಕಾಸ್ಟಿಂಗ್ ಕೌಚ್ ಇದೆ ಎಂದು ಬಾಂಬ್ ಸಿಡಿಸಿದ್ದಾರೆ. ಬಾಲಿವುಡ್ ನಲ್ಲಿ ಎಂಟ್ರಿ ಕೊಟ್ಟಾಗ ನನಗೆ ಅನೇಕರು ರಾತ್ರಿ ಸಮಯದಲ್ಲಿ ಕರೆ ಮಾಡಿ ಗೆಸ್ಟ್ ಹೌಸ್ ಗೆ ಬಾ ಎಂದು ಡಿಮ್ಯಾಂಡ್ ಮಾಡುತ್ತಿದ್ದರು. ನಾನು ಬರೊಲ್ಲ ಎಂದರೂ ಅವರು ಕೇಳುತ್ತಿರಲಿಲ್ಲ. ಜೊತೆಗೆ ಇಬ್ಬರು ಹಿರೋಗಳು ನನ್ನೊಂದಿಗೆ ಡೇಟಿಂಗ್ ಮಾಡುವಂತೆ ಸಹ ಒತ್ತಡ ಹೇರುತ್ತಿದ್ದರು. ಒಂದು ವೇಳೆ ಅವರ ಮಾತು ಕೇಳದೇ ಇದ್ದರೇ ಸಿನೆಮಾಗಳಲ್ಲಿ ಅವಕಾಶಗಳು ಬರದಂತೆ ಮಾಡುತ್ತೇವೆ ಎಂದು ಬೆದರಿಕೆ ಸಹ ಹಾಕಿದ್ದರು ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನೂ ಸೌತ್ ನಿಂದ ನಾರ್ತ್‌ಗೆ ಹಾರಿದ ತಾಪ್ಸಿ ಪನ್ನು ಇದೀಗ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಕಾಂಟ್ರವರ್ಸಿ ಕಾಮೆಂಟ್ ಗಳ ಮೂಲಕ ಆಕೆ ಫೇಮ್ ಪಡೆದುಕೊಂಡರು. ಸದ್ಯ ಆಕೆ ಲೇಡಿ ಓರಿಯೆಂಟೆಂಡ್ ಸಿನೆಮಾಗಳು, ಬಯೋಪಿಕ್ ಸಿನೆಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ.