Film News

ಹಳೇಯ ಫ್ರೆಂಡ್ ಬಗ್ಗೆ ಟ್ವೀಟ್ ಮಾಡಿದ ಸ್ಟಾರ್ ನಟಿ ಸಮಂತಾ, ಕಾಮೆಂಟ್ ಜೊತೆಗೆ ಕಿಸ್ ಸಿಂಬಲ್, ವೈರಲ್ ಆದ ಕಾಮೆಂಟ್…!

ಬಹುಬೇಡಿಕೆ ನಟಿ ಸಮಂತಾ ಇತ್ತೀಚಿಗೆ ಮಯೋಸೈಟೀಸ್ ಎಂಬ ಕಾಯಿಲೆಗೆ ತುತ್ತಾಗಿದ್ದು, ಇದೀಗ ಆಕೆ ಈ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಈ ಹಾದಿಯಲ್ಲೇ ಆಕೆ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸಮಂತಾ ತನ್ನ ಆರೋಗ್ಯ ಸಮಸ್ಯೆಯಿಂದ ಗುಣಮುಖರಾಗಿ ಸಿನೆಮಾಗಳ ಶೂಟಿಂಗ್ ಗಳ ಜೊತೆಗೆ ಬೇರೆ ಕಾರ್ಯಕ್ರಮಗಳಲ್ಲೂ ಸಹ ಬ್ಯುಸಿಯಾಗುತ್ತಿದ್ದಾರೆ. ಇದೀಗ ತನ್ನ ಹಳೇಯ ಫ್ರೆಂಡ್ ಕುರಿತು ಟ್ವೀಟ್ ಒಂದನ್ನು ಮಾಡಿದ್ದು, ಟ್ವೀಟ್ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಆ ಫ್ರೆಂಡ್ ಯಾರು ಎಂಬ ವಿಚಾರಕ್ಕೆ ಬಂದರೇ,

ಸಮಂತಾ ವಿಚ್ಚೇದನದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾದರು. ಅದರಲ್ಲೂ ಪುಷ್ಪಾ ಸಿನೆಮಾದ ಬಳಿಕ ಆಕೆ ಸಿಕ್ಕಾಪಟ್ಟೆ ಕ್ರೇಜ್ ಪಡೆದುಕೊಂಡರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ಸಮಯದಲ್ಲೇ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾದರು. ಈ ವ್ಯಾದಿ ಬಂದ ಬಳಿಕ ಆಕೆ ಸುಮಾರು ದಿನಗಳ ಕಾಲ ಅಜ್ಞಾತದಲ್ಲೇ ಇದ್ದರು. ಯಶೋಧ ಸಿನೆಮಾದ ಪ್ರಮೋಷನ್ ವೇಳೆ ಆಕೆ ಪ್ರತ್ಯಕ್ಷರಾದರು. ಇದೀಗ ಸಮಂತಾ ಅಭಿನಯದ ಪೌರಾಣಿಕ ಚಿತ್ರ ಶಾಕುಂತಲಂ ಸಹ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನೆಮಾ ಪ್ರಮೋಷನ್ ಸಹ ಸಮಂತಾ ಶುರು ಮಾಡಿದ್ದಾರೆ.  ಈ ಹಿಂದೆ ಸಮಂತಾ ಫ್ಯಾಮಿಲಿ ಮ್ಯಾನ್-2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಇದೀಗ ಮತ್ತೊಂದು ಸಿರೀಸ್ ನಲ್ಲಿ ನಟಿಸಲಿದ್ದಾರೆ. ಹಾಲಿವುಡ್ ನ ರುಸ್ಸೋ ಬ್ರದರ್ಸ್ ತೆರೆಗೆ ತಂದ ಸಿಡಾಟೆಲ್ ಸಿರೀಸ್ ಅನ್ನು ಹಿಂದಿಯಲ್ಲಿ ರಾಜ್ ಅಂಡ್ ಡಿಕೆ ಎಂಬುವವರು ತೆರೆಗೆ ತರಲಿದ್ದಾರೆ.

ಇನ್ನೂ ಸಮಂತಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ರಾಜ್ ಅಂಡ್ ಡಿಕೆ ಆಕೆಗೆ ಸ್ವಾಗತಿಸುತ್ತಾ ಟ್ವೀಟ್ ಮಾಡಿದ್ದಾರೆ. ರುಸ್ಸೋ ಬ್ರದರ್ಸ್ ಸಹ ಆಕೆಗೆ ಸ್ವಾಗತ ತಿಳಿಸಿದ್ದಾರೆ. ಈ ಹಾದಿಯಲ್ಲೇ ಯಂಗ್ ಡೈರೆಕ್ಟರ್‍ ರಾಹುಲ್ ರವಿಂದ್ರನ್ ಸಹ ಸಮಂತಾ ಕುರಿತು ಟ್ವೀಟ್ ಮಾಡುತ್ತಾ, ಒಂದು ಕಾಲದಲ್ಲಿ ಸಮಂತ ತನ್ನ ಪ್ರಯಾಣ ಹೇಗೆ ಪ್ರಾರಂಭಿಸಿದರು ನನಗೆ ತಿಳಿದಿದೆ, ಇದೀಗ ರುಸ್ಸೋ ಬ್ರದರ್ಸ್ ಆಕೆಯನ್ನು ಆಹ್ವಾನಿಸಿರುವುದು ತುಂಬಾ ಶ್ಲಾಘನೀಯ ಎಂದು ಟ್ವೀಟ್ ಮಾಡಿದ್ದಾರೆ.  ಇನ್ನೂ ಈ ಟ್ವೀಟ್ ಗೆ ರಾಹುಲ್ ಪತ್ನಿ ಸಿಂಗರ್‍ ಚಿನ್ಮಯಿ ಸಹ ಸಮಂತಾ ಕ್ವೀನ್ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಮಂತಾ ಸಹ ನಾನು ಮಾತ್ರ ಅಲ್ಲ ನೀನು ಸಹ ಕ್ವೀನ್ ಎಂದು ರಿಟ್ವೀಟ್ ಮಾಡಿದ್ದಾರೆ. ಜೊತೆಗೆ ಕಿಸ್ ಎಮೋಜಿಯನ್ನು ಸಹ ಹಾಕಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸುಮಾರು ದಿನಗಳ ಬಳಿಕ ಸಮಂತಾ ಹಾಗೂ ಚಿನ್ಮಯಿ ಮಾತನಾಡಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಇನ್ನೂ ಸಮಂತಾ ರವರ ಅನೇಕ ಸಿನೆಮಾಗಳಿಗೆ ಚಿನ್ಮಯಿ ರವರೇ ಡಬ್ಬಿಂಗ್ ನೀಡಿದ್ದಾರೆ. ಆದರೆ ಸಮಂತಾ ಅವರ ಸಿನೆಮಾಗಳಿಗೆ ಅವರೇ ಡಬ್ಬಿಂಗ್ ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಚಿನ್ಮಯಿ ಹಾಗೂ ಸಮಂತಾ ನಡುವೆ ವಿಬೇದಗಳು ಸೃಷ್ಟಿಯಾಗಿದೆ ಎಂದು ಪ್ರಚಾರಗಳು ಸಹ ನಡೆಯಿತು. ಇದೀಗ ಅವರಿಬ್ಬರ ಸಂಭಾಷನೆ ಎಲ್ಲಾ ಪ್ರಚಾರಗಳಿಗೂ ತೆರೆ ಬಿದ್ದಂತಾಗಿದೆ. ಇನ್ನೂ ಸಮಂತಾ ಇದೀಗ ಸಿಡಾಟೆಲ್ ಸಿರೀಸ್ ನಲ್ಲಿ ಬ್ಯುಸಿಯಾಗಲಿದ್ದು, ಈ ಸಿರೀಸ್ ನಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಮಂತಾ ಗುಣಮುಖರಾದ ಬಳಿಕ ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ.

Most Popular

To Top