Film News

ಅಭಿಮಾನದ ಪಾರಕಾಷ್ಟೆ ಅಂದರೇ ಇದೇನಾ, ತಮಿಳು ನಟಿಯ ಪೊಟೋಗೆ ಪೂಜೆ ಮಾಡಿದ ಅಭಿಮಾನಿ…!

ಸಿನೆಮಾ ಸೆಲಬ್ರೆಟಿಗಳಿಗೆ ಹುಚ್ಚು ಅಭಿಮಾನಿಗಳು ತುಂಬಾನೆ ಇರುತ್ತಾರೆ. ಅದರಲ್ಲೂ ಕೆಲವರಂತೂ ಪ್ರಾಣ ಕೊಡುವ ಮಟ್ಟಕ್ಕೂ ಇರುತ್ತಾರೆ. ಇನ್ನೂ ಕಾಲಿವುಡ್ ನ ಕೆಲ ನಟಿಯರಿಗೆ ದೇಗುಲ ನಿರ್ಮಾಣ ಮಾಡಿದ ಉದಾಹರಣೆಗಳೂ ಸಹ ಇದೆ. ಈ ಹಾದಿಯಲ್ಲೇ ತಮಿಳಿನ ನಟಿಯೊಬ್ಬರಿಗೆ ಅಭಿಮಾನಿಗಳು ಪೂಜೆಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಪೊಟೋಗಳು, ವಿಡಿಯೋಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆ ನಟಿಯಾರು ಎಂಬ ವಿಚಾರಕ್ಕೆ ಬಂದರೇ,

ಸಿನೆಮಾ ಸೆಲೆಬ್ರೆಟಿಗಳಿಗೆ ಅನೇಕ ಅಭಿಮಾನಿಗಳು, ವೀರಾಭಿಮಾನಿಗಳು, ಹುಚ್ಚು ಅಭಿಮಾನಿಗಳು ಇರುತ್ತಾರೆ. ಅಭಿಮಾನ ಎಂಬುದು ಮಿತಿ ಮೀರಿದರೇ ಅದನ್ನು ವಿವಿಧ ರೀತಿಯಲ್ಲಿ ಕರೆಯಲಾಗುತ್ತದೆ. ತೆರೆ ಮೇಲೆ ಕಾಣಿಸುವಂತಹ ಅನೇಕ ನಟಿ-ನಟಿಯರಿಗೆ ಡೈಹಾರ್ಡ್ ಫ್ಯಾನ್ಸ್ ಇರುತ್ತಾರೆ. ಅದರಲ್ಲೂ ಹಿರೋಯಿನ್ ಗಳ ಮೇಲಂತೂ ಹುಚ್ಚು ಅಭಿಮಾನಿವನ್ನೇ ತೋರಿಸುತ್ತಾರೆ. ಅದರಲ್ಲೂ ಕೆಲವರು ಮೈಮೇಲೆ ಟ್ಯಾಟುಗಳನ್ನು ಸಹ ಹಾಕಿಸಿಕೊಳ್ಳುತ್ತಾರೆ, ಮತ್ತೆ ಕೆಲವರು ಫ್ಲೆಕ್ಸಿಗಳನ್ನು ಹಾಕುವುದು, ನಟಿಯರ ಹೆಸರುಗಳ ಮೇಲೆ ವಿವಿಧ ರೀತಿಯ ಕೆಲಸಗಳನ್ನು ಮಾಡುವುದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ತಮಿಳುನಾಡಿನಲ್ಲಿ ಆಪಲ್ ಬ್ಯೂಟಿ ಹನ್ಸಿಕಾ, ನಮಿತಾ ರವರಿಗೆ ದೇಗುಲ ನಿರ್ಮಾಣ ಮಾಡಿ ತಮ್ಮ ಅಭಿಮಾನವನ್ನು ಸಾರುತ್ತಿದ್ದಾರೆ.

ಈ ಹಾದಿಯಲ್ಲೇ ತಮಿಳಿನ ಯಂಗ್ ಬ್ಯೂಟಿ ಯಶಿಕಾ ಆನಂದ್ ಅಭಿಮಾನಿಗಳು ವಿಭಿನ್ನವಾಗಿ ತಮ್ಮ ಅಭಿಮಾನ ಪ್ರದರ್ಶನ ಮಾಡುತ್ತಿದ್ದಾರೆ. ಆಕೆಯ ಅಭಿಮಾನಿಗಳು ಆಕೆಯ ಪೊಟೋಗಳಿಗೆ ಪೂಜೆ ಮಾಡುತ್ತಾ, ಹಾರತಿ ಮಾಡುತ್ತಾ ದೇವತೆಯಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ಡಿವೋಟಿ ಆಫ್ ಯಶಿಕಾ ಎಂಬ ಫ್ಯಾನ್ ಪೇಜ್ ಒಂದು ಇದೆ. ಈ ಪೇಜ್ ನಲ್ಲಿ ಸುಮಾರು ಮಂದಿ ಅಭಿಮಾನಿಗಳಿದ್ದಾರೆ. ಈ ಪೇಜ್ ನಲ್ಲಿ ಯಶಿಕಾ ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಸಹ ಇರುತ್ತಾರೆ. ಅಷ್ಟೇಅಲ್ಲದೇ ಅಭಿಮಾನಿಗಳು ಹಾಕುವಂತಹ ಪೋಸ್ಟ್ ಗಳಿಗೆ ಲೈಕ್ ನೀಡುವುದು ಕಾಮೆಂಟ್ ಮಾಡುವುದು ಸಹ ಮಾಡುತ್ತಿರುತ್ತಾರೆ. ಇದೇ ಹಾದಿಯಲ್ಲಿ ಆಕೆಯ ಪೊಟೋಗಳಿಗೆ ಪೂಜೆ ಮಾಡುವಂತಹ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಯಶಿಕಾ ಪೊಟೋಗಳಿಗೆ ಪೂಜೆ ಮಾಡುತ್ತಾ, ನಮಸ್ಕಾರ ಮಾಡುತಾ, ಹಾರತಿಗಳನ್ನು ಸಹ ಮಾಡುತ್ತಿದ್ದಾರೆ. ಈ ಹಾದಿಯಲ್ಲಿ ದೇವತೆಯಂತೆ ಪೂಜೆ ಮಾಡುವುದು ಶುರು ಮಾಡಿದ್ದು, ಇದಕ್ಕೆ ಯಶಿಕಾ ರಿಯಾಕ್ಟ್ ಆಗಿದ್ದಾರೆ. ನಾನು ಸಹ ಸಾಮಾನ್ಯ ಮನುಷ್ಯರಂತೆ. ನನ್ನನ್ನು ದೇವತೆಯಾಗಿ ಮಾಡಬೇಡಿ. ದೇವರಿಗೆ ಮಾತ್ರ ಪೂಜೆ ಮಾಡಬೇಕು ವಿನಃ ನನಗಲ್ಲ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅದು ಏನೇ ಇರಲಿ ಯಶಿಕಾ ಗೆ ಪೂಜೆ ಮಾಡುವಂತಹ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top