ಸದ್ಯಕ್ಕೆ ಸಹಜೀವನ ಮಾತ್ರ, ಮದುವೆಯ ಬಗ್ಗೆ ಯೋಚನೆಯಿಲ್ಲವಂತೆ, ರಿಲೇಷನ್ ಶಿಪ್ ಬಗ್ಗೆ ಒಪೆನ್ ಆದ್ರಾ ಸಿದ್ದಾರ್ಥ್ ಅಧಿತಿ..!

ಸಾಮಾನ್ಯವಾಗಿ ಸಿನೆಮಾದ ಸೆಲೆಬ್ರೆಟಿಗಳ ಬಗ್ಗೆ ಅನೇಕ ರೂಮರ್‍ ಗಳು ಹುಟ್ಟಿಕೊಳ್ಳುತ್ತಿರುತ್ತವೆ. ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ ಜೊತೆಗೆ ಎಲ್ಲರಿಗೂ ಸೆಲೆಬ್ರೆಟಿಗಳ ಖಾಸಗಿ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಸಹ ತುಂಬಾನೆ ಕ್ಯೂರಿಯಾಸಿಟಿ ಇರುತ್ತದೆ. ಈ ಕಾರಣದಿಂದಲೇ ಅನೇಕರು ಅವರ ವೈಯುಕ್ತಿಕ ವಿಚಾರಗಳಿಗಾಗಿ ಇಂಟರ್‍ ನೆಟ್ ನಲ್ಲಿ ಹುಡುಕುತ್ತಿರುತ್ತಾರೆ. ಈ ಹಾದಿಯಲ್ಲೇ ಸುಮಾರು ದಿನಗಳಿಂದ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಬಗ್ಗೆ ಅನೇಕ ರೂಮರ್‍ ಗಳು ಹರಿದಾಡುತ್ತಿದ್ದು, ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ.

ನಟ ಸಿದ್ದಾರ್ಥ್ ಸಿನಿರಂಗದಲ್ಲಿ ಲವರ್‍ ಬಾಯ್ ಆಗಿ ಸೆನ್ಷೇಷನ್ ಕ್ರಿಯೇಟ್ ಮಾಡಿದ ನಟನಾಗಿದ್ದಾನೆ. ಅನೇಕ ನಟಿಯರೊಂದಿಗೆ ರಿಲೇಷನ್ ಶಿಪ್ ನಡೆಸಿದ್ದರು ಎಂಬ ಮಾತುಗಳೂ ಸಹ ಇದೆ. ಸೋಹಾ ಅಲಿ ಖಾನ್, ಸಮಂತಾ, ಹನ್ಸಿಕಾ, ಶೃತಿ ಹಾಸನ್ ಮೊದಲಾದ ನಟಿಯರೊಂದಿಗೆ ಪ್ರೇಮಪಯಣ ಮಾಡಿ, ಬಳಿಕ ಬ್ರೇಕಪ್ ಸಹ ಮಾಡಿಕೊಂಡರು ಎಂಬ ಸುದ್ದಿ ಅಂದಿನ ಕಾಲದಲ್ಲಿ ತುಂಬಾನೆ ಜೋರಾಗಿ ಹರಿದಾಡಿತ್ತು.  ಇದೀಗ ಸಿದ್ದಾರ್ಥ್ ಅದಿತಿಯೊಂದಿಗೆ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ಸುದ್ದಿಗಳು ಜೋರಾಗಿಯೇ ಹರಿದಾಡುತ್ತಿದೆ. ಇನ್ನೂ ಇತ್ತೀಚಿಗೆ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭದಲ್ಲಿ ಇಬ್ಬರೂ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ವೈರಲ್ ಆಗುತ್ತಿವೆ. ಇದೀಗ ಈ ಜೋಡಿಯ ಕುರಿತಂತೆ ಮತ್ತೊಂದು ಸುದ್ದಿ ಸೋಷಿಯಲ್ ಮಿಡಿಯಾದ ಹರಿದಾಡುತ್ತಿದೆ.

ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಅನೇಕ ಸಿನೆಮಾ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಎಂಟ್ರಿ ಎನ್ನಬಹುದಾಗಿದೆ. ಇಬ್ಬರೂ ಜೋಡಿಯಾಗಿ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಅವರು ತಮ್ಮ ರಿಲೇಷನ್ ಶಿಪ್ ಗೆ ಬಗ್ಗೆ ಓಪೆನ್ ಆಗಿದ್ದಾರಂತೆ. ಸದ್ಯ ಇಬ್ಬರೂ ಸಹಜೀವನ ನಡೆಸುತ್ತಿದ್ದಾರಂತೆ. ಆದರೆ ಮದುವೆ ಮಾಡಿಕೊಳ್ಳುವ ಉದ್ದೇಶ ಸದ್ಯಕ್ಕೆ ಇಲ್ಲವಂತೆ. ಸದ್ಯ ಅವರಿಬ್ಬರು ಎಷ್ಟು ದಿನಗಳ ಕಾಲ ಸಹಜೀವನ ನಡೆಸುತ್ತಾರೆ, ಯಾವಾಗ ಮದುವೆಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಇಬ್ಬರಿಗೂ ಈ ಹಿಂದೆ ಬೇರೆಯವರೊಂದಿಗೆ ಮದುವೆಯಾಗಿತ್ತು. ಅವರ ಜೀವನದಲ್ಲಿ ವಿಬೇದಗಳ ಕಾರಣದಿಂದಾಗಿ ವಿಚ್ಚೇದನ ಪಡೆದುಕೊಂಡರು. ಇದೀಗ ಸಿದ್ದಾರ್ಥ್ ಹಾಗೂ ಅದಿತಿ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಅವರಿಬ್ಬರೂ ಮಹಾಸಮುದ್ರಂ ಎಂಬ ತೆಲುಗು ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಸಮಯದಲ್ಲೇ ಇಬ್ಬರ ನಡುವೆ ಪ್ರೇಮಾಂಕುರ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.