ವಿಚ್ಚೇದನದ ಬಳಿಕ ಮೊದಲ ಬಾರಿಗೆ ಸಮಂತಾ ಜೊತೆಗಿದ್ದ ಪೊಟೋ ಶೇರ್ ಮಾಡಿದ ಚೈತು, ಸಮಂತಾ ಶೇರ್ ಮಾಡಿದ ಪೊಟೋದಲ್ಲಿ ಚೈತು ಇಲ್ಲ….!

Follow Us :

ಟಾಲಿವುಡ್ ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮಿನನ್ ಸಾರಥ್ಯದಲ್ಲಿ ಯೂತ್ ಪುಲ್ ಲವ್ ಸ್ಟೋರಿಯಾಗಿ ತೆರೆಕಂಡ ಏ ಮಾಯ ಚೇಸಾವೇ ಸಿನೆಮಾ ಬಿಡುಗಡೆಯಾಗಿ 13 ವರ್ಷಗಳು ಪೂರ್ಣಗೊಂಡಿದೆ. ಈ ಸಿನೆಮಾ ಭಾರಿ ಸಕ್ಸಸ್ ಕಾಣಿಸಿಕೊಂಡಿದ್ದು, ಸೂಪರ್‍ ಹಿಟ್ ಆಗಿದೆ.  ಈ ಸಿನೆಮಾದಲ್ಲಿ ನಾಗಚೈತನ್ಯ ಹಾಗೂ ಸಮಂತಾ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾದ ಮೂಲಕವೇ ನಾಗಚೈತನ್ಯ ಭಾರಿ ಹಿಟ್ ಪಡೆದುಕೊಂಡರು. ಇದೀಗ ಈ ಸಿನೆಮಾ ಬಿಡುಗಡೆಯಾಗಿ 13 ವರ್ಷ ಪೂರ್ಣಗೊಂಡಿದ್ದು, ಈ ಸಂಬಂಧ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಪೋಸ್ಟ್ ಗಳನ್ನು ಮಾಡಿದ್ದಾರೆ.

ಏ ಮಾಯ ಚೇಸಾವೇ ಎಂಬ ಸಿನೆಮಾದ ಮೂಲಕವೇ ಸಮಂತಾ ಸಹ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕವೇ ಸಮಂತಾ ಸಹ ಒಳ್ಳೆಯ ಹೆಸರು ಗಳಿಸಿಕೊಂಡು. ಈ ಸಿನೆಮಾ 2010 ರಲ್ಲಿ ಬಿಡುಗಡೆಯಾಗಿದ್ದು, ಯುವಕರನ್ನು ತುಂಬಾನೆ ಆಕರ್ಷಣೆ ಮಾಡಿತ್ತು. ಈ ಸಿನೆಮಾದಲ್ಲಿ ಚೈತು ಹಾಗೂ ಸ್ಯಾಮ್ ನಡುವೆ ಕೆಮಿಸ್ಟ್ರಿ ಸಹ ಚೆನ್ನಾಗಿತ್ತು ಎಂದೂ ಸಹ ಹೇಳಲಾಗಿದೆ. ಇನ್ನೂ ಈ ಸಿನೆಮಾ 13 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಸಮಂತಾ ಹಾಗೂ ನಾಗಚೈತನ್ಯ ಸಹ ಸಿನೆಮಾದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಾಗಚೈತನ್ಯ ಸಮಂತಾ ಜೊತೆಯಿರುವ ಪೋಸ್ಟ್ ಮಾಡಿದ್ದು, ಸಮಂತಾ ಮಾತ್ರ ನಾಗಚೈತನ್ಯ ಇಲ್ಲದೇ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ನಾಗಚೈತನ್ಯ ಏ ಮಾಯ ಚೇಸಾವು ಸಿನೆಮಾದಲ್ಲಿನ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೊಟೋದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಇದ್ದಾರೆ. ವಿಚ್ಚೇದನದ ಬಳಿಕ ಮೊದಲ ಬಾರಿಗೆ ಚೈತನ್ಯ ಸಮಂತಾ ಜೊತೆಗಿನ ಪೊಟೋ ಹಂಚಿಕೊಂಡಿದ್ದಾರೆ. ಆದರೆ ಸಮಂತಾ ಮಾತ್ರ ಭಿನ್ನವಾಗಿ ಪೋಸ್ಟ್ ಮಾಡಿದ್ದಾರೆ. ತಾನಿರುವಂತಹ ಪೊಟೋಗಳನ್ನು ಮಾತ್ರ ಹಂಚಿಕೊಂಡು 13 ಇಯರ್ಸ್ ಆಫ್ ಜೆಸ್ಸಿ.. ಏ ಮಾಯ ಚೇಸಾವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಈಗಾಗಲೇ ಈ ಜೋಡಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಆದರೆ ಅವರ ಪೋಸ್ಟ್ ಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಈ ಸಿನೆಮಾದ ಬಳಿಕವೇ ಸಮಂತಾ ಹಾಗೂ ನಾಗಚೈತನ್ಯ ನಡುವೆ ಪ್ರೀತಿ ಹುಟ್ಟಿದೆ ಎನ್ನಲಾಗಿದೆ. ಬಳಿಕ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ತಿಳಿಸಿ ಕಳೆದ 2017 ರಲ್ಲಿ ವಿವಾಹವಾದರು. ಆದರೆ 2021 ರಲ್ಲಿ ವಿಚ್ಚೇದನ ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ವಿಚ್ಚೇದನದ ಬಳಿಕ ಸಮಂತಾ ಭಾರಿ ಸಿನೆಮಾಗಳಲ್ಲಿ ನಟಿಸುತ್ತಾ ಸೌತ್ ಅಂಡ್ ನಾರ್ತ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.