ಸಿನಿರಂಗದಲ್ಲಿ ಅನೇಕ ನಟ-ನಟಿಯರು ಕೆಲವೊಂದು ಸಮಯದಲ್ಲಿ ನೀಡುವಂತಹ ಹೇಳಿಕೆಗಳಿಂದಾಗಿ ತುಂಬಾನೆ ವಿಮರ್ಶೆಗಳಿಗೆ ಗುರಿಯಾಗುತ್ತಿರುತ್ತಾರೆ. ಅದರಲ್ಲೂ ಬಾಲಿವುಡ್ ರಂಗದಲ್ಲಿ ಇಂತಹ ಸನ್ನಿವೇಶಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಈ ಹಾದಿಯಲ್ಲೇ ಕಳೆದ ವರ್ಷ ಬಾಲಿವುಡ್ ಸ್ಟಾರ್ ಹಿರೋ ರಣಬೀರ್ ಕಪೂರ್ ಪಾಕಿಸ್ತಾನದ ಸಿನೆಮಾಗಳಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು. ಬಳಿಕ ಆತನನ್ನು ತುಂಬಾನೆ ಟ್ರೋಲ್ ಮಾಡಿದ್ದರು. ಇದೀಗ ಈ ವಿಚಾರದ ಬಗ್ಗೆ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಕಳೆದ ವರ್ಷ ಡಿಸೆಂಬರ್ ಮಾಹೆಯಲ್ಲಿ ರೆಡ್ ಸಿ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಹಾಜರಾಗಿದ್ದರು. ಈ ವೇಳೆ ಪಾಕಿಸ್ತಾನಿ ಮೂಲದ ನಿರ್ಮಾಪಕರೊಬ್ಬರು ಪಾಕಿಸ್ತಾನದ ಸಿನೆಮಾಗಳಲ್ಲಿ ನಟಿಸುವ ಅವಕಾಶ ಬಂದರೇ ನಟಿಸುತ್ತೀರಾ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಖಂಡಿತವಾಗಿ ನಟಿಸುತ್ತೇನೆ. ಕಲಾವಿದರಿಗೆ ಹಾಗೂ ಕಲೆಗೆ ಯಾವುದೇ ಲಿಮಿಟ್ಸ್ ಇರುವುದಿಲ್ಲ ಎಂದು ನನ್ನ ನಂಬಿಕೆ ಎಂದು ಹೇಳಿದ್ದರು. ಈ ಹೇಳಿಕೆಗಳನ್ನು ನೀಡಿದ ರಣಬೀರ್ ವಿರುದ್ದ ದೇಶವ್ಯಾಪಿ ವಿಮರ್ಶೆಗಳು ಶುರುವಾದವು. ವಿವಾದಗಳೂ ಸಹ ಸೃಷ್ಟಿಯಾಗಿತ್ತು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ರಣಬೀರ್ ವಿರುದ್ದ ಸಖತ್ ಟ್ರೋಲ್ ಮಾಡಿದ್ದರು. ಪಾಕಿಸ್ತಾನದ ಸಿನೆಮಾಗಳಲ್ಲಿ ನಟಿಸುತ್ತೇನೆ ಎಂದು ಯಾವ ರೀತಿಯಲ್ಲಿ ಹೇಳುತ್ತೀರಾ ಎಂದು ರಣಬೀರ್ ವಿರುದ್ದ ಫೈರ್ ಸಹ ಆಗಿದ್ದರು.
ಕಳೆದ ವರ್ಷ ನೀಡಿದ ಹೇಳಿಕೆಯ ಬಗ್ಗೆ ಹೊಸದಾಗಿ ಕ್ಲಾರಿಟಿ ಕೊಟ್ಟಿದ್ದಾರೆ. ರಣಬೀರ್ ಅಭಿನಯದ ತು ಝಾತಿ ಮೈನ್ ಮಕ್ಕಾರ್ ಎಂಬ ಸಿನೆಮಾದ ಮೂಲಕ ತೆರೆಯ ಮೇಲೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಪ್ರಮೋಷನ್ ಭಾಗಿವಾಗಿಯೇ ನಡೆದ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಹಳೇಯ ಘಟನೆಯ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಸುದ್ದಿಗೋಷ್ಟಿಯಲ್ಲಿ ರಣಬೀರ್ ಗೆ ಹಳೇದ ವಿವಾದ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ರಣಬೀರ್ ನಾನು ಮಾತನಾಡಿದ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಪಾಕಿಸ್ತಾನ ಸಿನಿರಂಗದ ಅನೇಕರು ಭಾಗಿಯಾಗಿದ್ದರು. ಆ ಸಮಯದಲ್ಲಿ ಈ ಪ್ರಶ್ನೆ ಎದುರಾಗಿತ್ತು. ಅಲ್ಲಿ ವಿವಾದ ಸೃಷ್ಟಿಯಾಗಬಾರದು ಎಂದು ಆ ರೀತಿ ಮಾತನಾಡಿದ್ದೆ. ನನಗೆ ಸಿನೆಮಾಗಳೇ ಮುಖ್ಯ. ಭಾರತದ ಸಿನಿರಂಗದಲ್ಲಿ ಅನೇಕ ಪಾಕಿಸ್ತಾನದ ಕಲಾವಿದರು ನಟಿಸುತ್ತಿದ್ದಾರೆ. ಕಲೆಗೆ ಯಾವುದೇ ಲಿಮಿಟ್ಸ್ ಇರುವುದಿಲ್ಲ ಎಂದಿದ್ದಾರೆ.
ಅಷ್ಟೇಅಲ್ಲದೇ ಕಲೆಗಿಂತ ದೇಶ ದೊಡ್ಡದು. ಅಂದತಹ ಸಮಯದಲ್ಲಿ ನನ್ನ ಮೊದಲ ಆದ್ಯತೆ ದೇಶಕ್ಕೆ ಪ್ರಾಧಾನ್ಯತೆ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ರಣಬೀರ್ ಹಳೆಯ ವಿವಾದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಇನ್ನೂ ಈ ವಿಮರ್ಶೆಗಳು ಕೊನೆಯಾಗುತ್ತಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆ ಭೀಪ್ ತಿನ್ನುತ್ತೇನೆ ಎಂದು ಹೇಳಿದ್ದ ರಣಬೀರ್ ಬ್ರಹ್ಮಾಸ್ತ್ರ ಸಿನೆಮಾದ ಸಮಯದಲ್ಲಿ ತುಂಬಾನೆ ಸಮಸ್ಯೆಗೆ ಸಿಲುಕಿದ್ದರು.
