Film News

ಆಂಟಿ ಎಂಬುದು ಡರ್ಟಿ ಪದ ಎಂದ ಸೀನಿಯರ್ ನಟಿ ಕಸ್ತೂರಿ, ವೈರಲ್ ಆದ ಕಾಮೆಂಟ್ಸ್….!

ತೆಲುಗು ಸಿನಿರಂಗದಲ್ಲಿ ತೆರೆಕಂಡ ಅನ್ನಮಯ್ಯ ಸಿನೆಮಾ ಸೂಪರ್‍ ಡೂಪರ್‍ ಹಿಟ್ ಹೊಡೆದಿತ್ತು. ಈ ಸಿನೆಮಾದಲ್ಲಿ ಅಕ್ಕಿನೇನಿ ನಾಗಾರ್ಜುನ್ ನಾಯಕನಾಗಿ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ನಟಿಸಿದ್ದ ಕಸ್ತೂರಿ ಹೆಸರು ತಿಳಿದೇ ಇದೆ. ಅನ್ನಮಯ್ಯ, ಭಾರತೀಯಡು ಮೊದಲಾದ ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡ ಕಸ್ತೂರಿ ತೆಲುಗು ಹಾಗೂ ತಮಿಳಿನ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ್ದು, ಕ್ಯಾರೆಕ್ಟರ್‍ ರೋಲ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಸಹ ತುಂಬಾನೆ ಕ್ರೇಜ್ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡ ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಸೋಷಿಯಲ್ ಮಿಡಿಯಾದಲ್ಲಂತೂ ಕಸ್ತೂರಿ ಸಖತ್ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಹಾಟ್ ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವಂತಹ ನಟಿ ಕಸ್ತೂರಿ ನೇರವಾಗಿ ಮಾತನಾಡುವ ವ್ಯಕ್ತಿತ್ವ ಹೊಂದಿದ್ದಾರೆ. ಇದೀಗ ಕಸ್ತೂರಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಸಹ ಆಗುತ್ತಿವೆ.

ನಟಿ ಅನಸೂಯ ಬಗ್ಗೆ ಇತ್ತೀಚಿಗೆ ಆಂಟಿ ಎಂದು ಟ್ರೋಲ್ ಮಾಡಿದ್ದು, ಈ ಬಗ್ಗೆ ಅನಸೂಯ ರಿಯಾಕ್ಟ್ ಆಗಿದ್ದು, ಒಬ್ಬರ ಮೇಲೆ ಕೇಸ್ ದಾಖಲಿಸಿದ್ದರು. ನಟಿ ಅನಸೂಯ ಕುರಿತಂತೆ ಆಂಟಿ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ದೊಡ್ಡ ರಾದ್ದಾಂತವೇ ನಡೆದಿತ್ತು. ಈ ಬಗ್ಗೆ ಇದೀಗ ಕಸ್ತೂರಿ ಸಹ ರಿಯಾಕ್ಟ್ ಆಗಿದ್ದಾರೆ. ಸಂದರ್ಶನದಲ್ಲಿ ಕಸ್ತೂರಿಯವರಿಗೆ ನಿಮಗೆ ಯಾರಾದರೂ ಆಂಟಿ ಎಂದರೇ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಿರಿ ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ಕಸ್ತೂರಿ ಚಿಕ್ಕ ಮಕ್ಕಳು ಆಂಟಿ ಎನ್ನುವುದಕ್ಕೂ, ದೊಡ್ಡವರು ಆಂಟಿ ಎನ್ನುವುದಕ್ಕೂ ಬೇರೆಯದ್ದೇ ಅರ್ಥವಿದೆ. ಒಬ್ಬಸೀನಿಯರ್‍ ನಟನನ್ನು ಆಂಕಲ್ ಎಂದು ಕರೆಯಬಲ್ಲೀರಾ ಎಂದು ಕಸ್ತೂರಿ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಆಂಟಿ ಎಂಬ ಪದಕ್ಕೆ ಕೆಟ್ಟ ಅರ್ಥ ಬಂದಿದೆ ಎಂದು ಉತ್ತರ ನೀಡಿದ್ದಾರೆ.

ನಟಿ ಅನಸೂಯ ಗಿಂತ ಹೆಚ್ಚು ವಯಸ್ಸಿನಲ್ಲಿರುವ ಅನೇಕ ನಟರು ಇದ್ದಾರೆ. ಅವರನ್ನು ಅಂಕಲ್ ಅಂತ ಕರೆಯಿರಿ, ಆಂಟಿ ಎಂದು ಕರೆಯಲು ಎರಡೇ ಕಾರಣಗಳಿದೆ ಒಂದು ಅವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಅಥವಾ ಆಕೆಯನ್ನು ಅವಮಾನಿಸಲು ಮಾತ್ರ ಕಾರಣ ಎಂದು ಕಸ್ತೂರಿ ಹೇಳಿದ್ದು, ಈ ವಿಚಾರದಲ್ಲಿ ನಾನು ಅನಸೂಯ ನಡೆಯನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. ಇನ್ನೂ ಕಸ್ತೂರಿ ಸಿನೆಮಾಗಳಿಂದ ದೂರವಾದ ಬಳಿಕ ಸೀರಿಯಲ್ ಗಳಲ್ಲಿ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Most Popular

To Top