ಮತ್ತೆ ಪ್ರೀತಿಗೆ ಬಿದ್ರಾ ಸಮಂತಾ, ವೈರಲ್ ಆದ ಲೇಟೆಸ್ಟ್ ಇನ್ಸ್ಟಾ ಸ್ಟೋರಿ…..!

ದೇಶದ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನದ ಬಳಿಕ ಆಕೆ ಸದಾ ಸುದ್ದಿಯಲ್ಲೇ ಇರುತ್ತಾರೆ. ಸದ್ಯ ಒಂಟಿಯಾಗಿರುವ ಸಮಂತಾ ಮತ್ತೊಮ್ಮೆ ಪ್ರೀತಿಗೆ ಬಿದ್ದಿದ್ದಾರೆ ಎಂಬ ಅನುಮಾನ ಮೂಡುವಂತಿದೆ. ಅದಕ್ಕೆ ಆಕೆ ಹಂಚಿಕೊಂಡ ಈ ಲೇಟೆಸ್ಟ್ ಪೋಸ್ಟ್ ಮತಷ್ಟು ಬಲ ತಂದುಕೊಡುತ್ತಿದೆ.

ಸ್ಟಾರ್‍ ನಟಿ ಸಮಂತಾ ಏಮಾಯಾ ಚೇಸ್ಯಾವೇ ಎಂಬ ಸಿನೆಮಾದ ಮೂಲಕ ತೆಲಗು ಪ್ರೇಕ್ಷಕರಿಗೆ ಪರಿಚಯವಾದರು. ಅತೀ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿಗೆ ಸಮಂತಾ ಸೇರಿಕೊಂಡರು. ಬಳಿಕ ನಾಗಚೈತನ್ಯ ಜೊತೆಗೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಪಡೆದುಕೊಂಡಾಗಿನಿಂತ ಸಮಂತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಆಕೆಯ ವೈಯುಕ್ತಿಕ ಜೀವನದ ಬಗ್ಗೆ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇನ್ನೂ ಕೆಲವು ತಿಂಗಳುಗಳ ಹಿಂದೆ ಆಕೆ ಮಯೋಸೈಟೀಸ್ ಎಂಬ ಭಯಂಕರ ವ್ಯಾಧಿಗೆ ಗುರಿಯಾದರು. ಬಳಿಕ ಸಿನೆಮಾಗಳಿಗೆ ಮತ್ತೆ ಎಂಟ್ರಿ ಕೊಟ್ಟರು. ಇದೀಗ ಮತ್ತೆ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಜೊತೆಗೆ ವೇಕೇಷನ್ ಸಹ ಎಂಜಾಯ್ ಮಾಡುತ್ತಿದ್ದಾರೆ.

ನಟಿ ಸಮಂತಾ ಮಯೋಸೈಟೀಸ್ ವ್ಯಾದಿಯಿಂದ ಸಂಪೂರ್ಣವಾಗಿ ಚಿಕಿತ್ಸೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಿನೆಮಾಗಳಿಗೆ ಬ್ರೇಕ್ ಪಡೆದುಕೊಂಡಿದ್ದಾರೆ. ಇನ್ನೂ ಇತ್ತೀಚಿಗೆ ಸಮಂತಾ ತನ್ನ ಇನ್ಸ್ಟಾ ಸ್ಟೋರಿಸ್ ನಲ್ಲಿ ಬ್ಯಾಖ್ ಟು ಬ್ಯಾಕ್ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಹೆಚ್ಚು ದ್ವೇಷಿಸುವ ಮನುಷ್ಯರು, ಮಾತುಗಳು ನೋಡಿರುತ್ತೇವೆ ವಿನಃ, ನಾವು ಊಹೆ ಮಾಡದಷ್ಟು ಪ್ರೀತಿ ಸಹ ಇರುತ್ತೆ ಎಂದು ಕೊಟೇಷನ್ ಪಿಕ್ ಶೇರ್‍ ಮಾಡಿದ್ದಾರೆ. ಇನ್ನೂ ಸಮಂತಾ ಅಂತಹ ಕೊಟೇಷನ್ ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಸಮಂತಾ ಮತ್ತೆ ಪ್ರೀತಿಗೆ ಬಿದ್ದರೇ ಎಂಬ ಅನುಮಾನಗಳನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ಸಮಂತಾ ಪ್ರೀತಿಗೆ ಬಿದಿದ್ದರೇ ಆ ವ್ಯಕ್ತಿ ಯಾರು ಎಂಬ ಚರ್ಚೆ ಸಹ ಶುರುವಾಗಿದೆ. ಇನ್ನೂ ಈ ಬಗ್ಗೆ ಸಮಂತಾ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಸಮಂತಾ ಮಯೋಸೈಟೀಸ್ ಬಳಿಕ ಯಶೋಧ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಕೊಂಚ ಬೆಟರ್‍ ಆಗಿ ಪ್ರದರ್ಶನಗೊಂಡಿತ್ತು. ಆಕೆ ಕೊನೆಯದಾಗಿ ಶಾಕುಂತಲಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಸದ್ಯ ಸಮಂತಾ ಸಿಟಾಡೆಲ್ ವೆಬ್ ಸಿರೀಸ್ ಹಾಗೂ ಖುಷಿ ಸಿನೆಮಾದಲ್ಲಿ ನಟಿಸಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ.