ತಮನ್ನಾ ರನ್ನೇ ಶಾಕ್ ಆಗುವಂತೆ ಕಾವಾಲಯ್ಯ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಸೀನಿಯರ್ ನಟಿ ರಮ್ಯಾಕೃಷ್ಣ, ವೈರಲ್ ಆದ ವಿಡಿಯೋ….!

Follow Us :

ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಬಹುನಿರೀಕ್ಷಿತ ಜೈಲರ್‍ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾದ ನುವ್ವು ಕಾವಲಯ್ಯ ಹಾಡು ಮಾತ್ರ ಭಾರಿ ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ತಮನ್ನಾ ಭಾರಿ ಸೆಕ್ಸಿಯಾಗಿ, ಎನರ್ಜಿಟಿಕ್ ಆಗಿ ಸ್ಟೆಪ್ಸ್‌ ಹಾಕಿದ್ದಾರೆ. ಈ ಹಾಡಿಗೆ ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸ್ಟಾರ್ ನಟಿಯರೂ ಸಹ ರೀಲ್ಸ್ ಮಾಡುತ್ತಿದ್ದಾರೆ. ಇದೀಗ ಸೀನಿಯರ್‍ ನಟಿ ರಮ್ಯಾಕೃಷ್ಣ ಸಹ ಯಂಗ್ ನಟರಿಯನ್ನೂ ನಾಚಿಸುವಂತೆ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಜೈಲರ್‍ ಸಿನೆಮಾದಲ್ಲಿ ಹಿರೋ ಆಗಿ ಸೂಪರ್‍ ಸ್ಟಾರ್‍ ರಜನಿಕಾಂತ್, ನಾಯಕಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ನಟಿಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್‍ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದಲ್ಲಿ ಸುನೀಲ್, ರಮ್ಯಾಕೃಷ್ಣ, ಯೋಗಿಬಾಬು, ಜಾಕಿ ಷೆರಾಫ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನೆಮಾದ ಶೂಟಿಂಗ್ ಕೆಲಸಗಳೂ ಸಹ ಮುಗಿದಿದ್ದು, ಈ ಸಿನೆಮಾ ಆಗಸ್ಟ್ 10 ರಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಇನ್ನೂ ಈ ಸಿನೆಮಾದಲ್ಲಿನ ನುವ್ವು ಕಾವಲಯ್ಯ ಎಂಬ ಹಾಡು ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು. ಸದ್ಯ ಈ ಹಾಡು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಎಲ್ಲಿ ನೋಡಿದರೂ ಇದೇ ಹಾಡಿನ ಸದ್ದು ಕೇಳಿಸುತ್ತಿದೆ. ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ದೊಡ್ಡ ಸ್ಟಾರ್‍ ನಟಿಯರೂ ಸಹ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇನ್ನೂ ಈ ಟ್ರೆಂಡಿಂಗ್ ಹಾಡಿಗೆ ಸೀನಿಯರ್‍ ನಟಿ ರಮ್ಯಾಕೃಷ್ಣ ಸಹ ಎನರ್ಜಿಟಿಕ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ತನ್ನ ವ್ಯಾನಿಟಿ ವ್ಯಾನ್ ನಲ್ಲಿ ಮೂವರು ಸಿಬ್ಬಂದಿಯೊಂದಿಗೆ ನುವ್ವು ಕಾವಲಯ್ಯ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ಇನ್ನೂ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 52 ನೇ ವಯಸ್ಸಿನಲ್ಲಿ ರಮ್ಯಾಕೃಷ್ಣ ರವರ ಈ ಎನರ್ಜಿಟಿಕ್ ಸ್ಟೆಪ್ಸ್ ಗಳಿಗೆ ಯಂಗ್ ನಟಿಯರು ಶಾಕ್ ಆಗಿದ್ದಾರೆ ಎನ್ನಲಾಗಿದೆ. ಜೊತೆಗೆ ತಮನ್ನಾ ಸಹ ಆಕೆಯ ಎನರ್ಜಿಯನ್ನು ಮೆಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ವಿಡಿಯೋಗೆ ರಮ್ಯಾಕೃಷ್ಣ ಅಭಿಮಾನಿಗಳೂ ಸೇರಿದಂತೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಹಾಫ್ ಸೆಂಚುರಿ ದಾಟಿದರೂ ಸಹ ಈ ಎನರ್ಜಿ, ಗ್ಲಾಮರ್‍ ಯಂಗ್ ನಟಿಯರಿಗೂ ಮೀರಿಸುವಂತಿದೆ. ನಿಮ್ಮ ನೃತ್ಯಕ್ಕೆ ನಾವೆಲ್ಲರೂ ಫಿದಾ ಆಗಿದ್ದೇವೆ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಮತ್ತೋರ್ವ ಸೀನಿಯರ್‍ ನಟಿ ಸಿಮ್ರಾನ್ ಸಹ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಕನ್ನಡದ ಕಿರುತೆರೆ ನಟಿ ವೈಷ್ಣವಿ ಗೌಡ ಸಹ ಎನರ್ಜಿಟಿಕ್ ಆಗಿ ನೃತ್ಯ ಮಾಡಿದ್ದರು. ಇನ್ನೂ ಈ ಸಿನೆಮಾ ಇದೇ ಆ.10 ರಂದು ಬಿಡುಗಡೆಯಾಗಲಿದ್ದು, ಸ್ಯಾಂಡಲ್ ವುಡ್ ಸ್ಟಾರ್‍ ನಟ ಶಿವರಾಜ್ ಕುಮಾರ್‍ ಸಹ ಈ ಸಿನೆಮಾದಲ್ಲಿ ಪ್ರಮುಖ ಪಾತ್ರ ಪೋಷಣೆ ಮಾಡಿದ್ದಾರೆ.