ವಿಮಾನದಲ್ಲಿ ಧೋನಿ ಮಲಗಿದ್ದಾಗ ಸೆಲ್ಫಿ ತೆಗೆದುಕೊಂಡ ಗಗನಸಖಿ, ವೈರಲ್ ಆದ ಪೊಟೋ….!

Follow Us :

ಸಿನಿರಂಗದ ಸೆಲೆಬ್ರೆಟಿಗಳಂತೆ ಕ್ರಿಕೆಟಿಗರಿಗೂ ಸಹ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇರುತ್ತದೆ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿಗೂ ಸಹ ದೇಶ ಸೇರಿದಂತೆ ವಿಶ್ವದಾಧ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರನ್ನು ಒಮ್ಮೆಯಾದರೂ ಹತ್ತಿರದಿಂದ ನೋಡಬೇಕು, ಅವರೊಂದಿಗೆ ಪೋಟೋ ತೆಗೆಸಿಕೊಳ್ಳಬೇಕು ಎಂಬ ಮಹದಾಸೆಯನ್ನು ಅವರ ಅಭಿಮಾನಿಗಳು ಹೊಂದಿದ್ದಾರೆ. ಜೊತೆಗೆ ಅವರ ಪಂದ್ಯ ನೋಡಲು ಸಾವಿರಾರು ಕಿ.ಮೀ ದೂರ ಸಹ ಹೋಗುತ್ತಿರುತ್ತಾರೆ. ಇದೀಗ ವಿಮಾನದಲ್ಲಿ ಗಗನಸಖಿಯೊಬ್ಬರು ಧೋನಿ ಮಲಗಿದ್ದಾಗ ಸೆಲ್ಫಿ ತೆಗೆದುಕೊಂಡಿದ್ದು, ಪೊಟೋ ಸಖತ್ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಧೋನಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಈ ವೇಳೆ ಧೋನಿ ಪಕ್ಕದಲ್ಲಿ ನಿಂತು ಗಗನಸಖಿಯೊಬ್ಬಳು ಪೊಟೋ ತೆಗೆದುಕೊಂಡಿದ್ದಾರೆ. ಈ ವೇಳೆ ಧೋನಿ ನಿದ್ದೆ ಮಾಡುತ್ತಿದ್ದಾರೆ. ಗಗನ ಸಖಿ ಪೊಟೋ ಕ್ಲಿಕ್ಕಿಸಿಕೊಂಡಿದ್ದು ಧೋನಿಗೆ ತಿಳಿದೇ ಇಲ್ಲ. ಇನ್ನೂ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೊಟೋಗೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ. ಕೆಲವರು ಆಕೆಯ ಈ ಪರಿಯನ್ನು ವಿಮರ್ಶೆ ಮಾಡಿದರೇ ಮತ್ತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪೊಟೋ ಮಾತ್ರ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಈ ಪೊಟೋ ವೈರಲ್ ಆಗುತ್ತಿದ್ದಂತೆ ಓರ್ವ ಅಭಿಮಾನಿ ನಾನು ಧೋನಿಯವರನ್ನು ನೋಡಲು ಬಯಸುತ್ತೇನೆ, ಆದರೆ ಅವರ ಅನುಮತಿಯಲ್ಲದೇ ಅವರ ವೈಯುಕ್ತಿಕ ಸಮಯಕ್ಕೆ ಅಡ್ಡಿಪಡಿಸೊಲ್ಲ ಇನ್ನು ಮುಂದೆ ಆ ರೀತಿಯಾಗಿ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಗಗನಸಖಿಯರು ಗೌಪ್ಯತೆ ಕಾಪಾಡಬೇಕು ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ಗಗನಸಖಿ ಸ್ಥಾನದಲ್ಲಿ ಧೋನಿ ಇದ್ದಿದ್ದರೇ ಇಷ್ಟೊಂತ್ತಿಗೆ ದೊಡ್ಡ ರಾದ್ದಾಂತ ಮಾಡುತ್ತಿದ್ದರು ಎಂದು ರಿಯಾಕ್ಟ್ ಆಗಿದ್ದಾರೆ.

ಇನ್ನೂ ಸ್ಟಾರ್‍ ಕ್ರಿಕೆಟಿಗ ಎಂ.ಎಸ್.ಧೋನಿ ಅನೇಕ ಮ್ಯಾಚ್ ಗಳ ಮೂಲಕ ದೊಡ್ಡ ಫೇಂ ಪಡೆದುಕೊಂಡು ಅನೇಕ ರೆಕಾರ್ಡ್‌ಗಳನ್ನೂ ಸಹ ಸೃಷ್ಟಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಚೆನೈ ಸೂಪರ್‍ ಕಿಂಗ್ಸ್ ಗೆ ಐದು ಬಾರಿ ಚಾಂಪಿಯನ್ ಟ್ರೋಫಿ ತಂದುಕೊಟ್ಟಿದ್ದಾರೆ. ಇನ್ನೂ ಧೋನಿ ಮನರಂಜನಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಧೋನಿ ಎಂಟರ್‍ ಟ್ರೈನ್‌ ಮೆಂಟ್ ಪ್ರವೈಟ್ ಸಂಸ್ಥೆ ಸ್ಥಾಪಿಸಿದ್ದಾರೆ.