ಹುಟ್ಟುಹಬ್ಬದಂದು ಸಂಚಲನಾತ್ಮಕ ಪೋಸ್ಟ್ ಮಾಡಿದ ಸಮಂತಾ, ವೈರಲ್ ಆದ ಪೋಸ್ಟ್…..!

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಭಾರಿ ಕ್ರೇಜ್ ಹೊಂದಿರುವ ನಟಿಯರಲ್ಲಿ ಸಮಂತಾ ಟಾಪ್ ಸ್ಥಾನದಲ್ಲಿರುತ್ತಾರೆ. ಅನೇಕ ಸೂಪರ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಸಮಂತಾ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಆಕೆ ಇಂದಿಗೆ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ ಅನೇಕ ಸಿನೆಮಾ ಸೆಲೆಬ್ರೆಟಿಗಳ ಜೊತೆಗೆ ಅಭಿಮಾನಿಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಹುಟ್ಟುಹಬ್ಬದ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಕೆಲವೊಂದು ಶುಭಾಷಯಗಳನ್ನು ಸಮಂತಾ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಸ್ಟಾರ್‍ ನಟಿ ಸಮಂತಾ ಕೆಲವು ತಿಂಗಳುಗಳ ಹಿಂದೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದರು. ಸುಮಾರು ತಿಂಗಳುಗಳ ಕಾಲ ಆಕೆ ಅಜ್ಞಾತದಲ್ಲೇ ಇದ್ದರು. ಬಳಿಕ ಯಶೋಧ ಸಿನೆಮಾದ ಸಮಯದಲ್ಲಿ ಆಕೆ ತನ್ನ ಕಾಯಿಲೆಯ ಬಗ್ಗೆ ಹೊರಹಾಕಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳೂ ಸೇರಿದಂತೆ ಅನೇಕ ಸೆಲೆಬ್ರೆಟಿಗಳೂ ಸಹ ಆಕೆಗೆ ಧೈರ್ಯ ತುಂಬಿ ಶೀಘ್ರ ಗುಣಮುಖರಾಗುವಂತೆ ಕೋರಿದ್ದರು. ಸದ್ಯ ಆಕೆ ಮಯೋಸೈಟೀಸ್ ವ್ಯಾಧಿಯಿಂದ ಹೊರಬಂದು ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದಾರೆ. ಕಳೆದ 1987 ರಲ್ಲಿ ಏಪ್ರಿಲ್ 28 ರಂದು ಜನಿಸಿದ್ದರು. ಇಂದು ಆಕೆಯ ಹುಟ್ಟುಹಬ್ಬವಾಗಿದ್ದು ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಇದರ ಜೊತೆಗೆ ಸಮಂತಾ ಸಹ ಸೆಲ್ಫಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ.

ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಸೆಲ್ಫಿ ಪೊಟೋ ಹಂಚಿಕೊಂಡು ಅದಕ್ಕೆ ಇಟ್ಸ್ ಗೋಯಿಂಗ್ ಟು ಬಿ ಎ ಗುಡ್ ಇಯರ್‍ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಸಮಂತಾ ಕಳೆದೆರಡು ದಿನಗಳ ಹಿಂದೆಯಷ್ಟೆ ಆಕ್ಸಿಜೆನ್ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಈ ಪೋಸ್ಟ್ ಕಂಡ ಅನೇಕ ಅಭಿಮಾನಿಗಳು ಆಕೆಗೆ ಮತ್ತೆ ಏನಾಯ್ತು ಎಂಬ ಆತಂಕಕ್ಕೆ ಗುರಿಯಾಗಿದ್ದರು. ಬಳಿಕ ಆಕೆ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಹೈಪರ್‍ ಥೆರಿಫಿಕ್ ಗಾಗಿ ಆಕೆ ಆಕ್ಸಿಜೆನ್ ಮಾಸ್ಕ್ ಧರಿಸಿದ್ದಾಗಿ ಅದರ ಪ್ರಯೋಜನಗಳ ಬಗ್ಗೆ ಸಹ ಹೇಳಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದಾರೆ.

ಇನ್ನೂ ಸಮಂತಾ ಕೊನೆಯದಾಗಿ ಶಾಕುಂತಲಂ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫಿಸ್ ನಲ್ಲಿ ಮಕಾಡೆ ಮಲಗಿದೆ. ಆಕೆಯ ಕೆರಿಯರ್‍ ನಲ್ಲಿ ಆ ಸಿನೆಮಾ ಡಿಜಾಸ್ಟರ್‍ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಖುಷಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ಖುಷಿ ಸಿನೆಮಾ ಸೆ.1 ರಂದು ರಿಲೀಸ್ ಆಗಲಿದೆ.