Film News

ಪುಷ್ಪಾ-2 ಸಿನೆಮಾದ ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಟ್ಟ ಜೂನಿಯರ್ ಎನ್.ಟಿ.ಆರ್, ಕಾರಣವೇನು?

ತೆಲುಗು ಸಿನಿರಂಗದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಸಿನೆಮಾಗಳಲ್ಲಿ ಪುಷ್ಪಾ ಸಹ ಒಂದಾಗಿದೆ. ಖ್ಯಾತ ನಿರ್ದೇಶಕ ಸುಕುಮಾರ್‍ ಹಾಗೂ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಈ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ಇದೀಗ ಪುಷ್ಪಾ ಸಿನೆಮಾದ ಸೀಕ್ವೆಲ್ ಪುಷ್ಪಾ-2 ಸಿನೆಮಾಗಾಗಿ ಕೇವಲ ದೇಶ ಮಾತ್ರವಲ್ಲದೇ ವಿಶ್ವವೇ ಕಾಯುತ್ತಿದೆ ಎನ್ನಲಾಗುತ್ತಿದೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಇದೀಗ ಶೂಟಿಂಗ್ ಸೆಟ್ ಗೆ ಗ್ಲೊಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ಎಂಟ್ರಿ ಕೊಟ್ಟಿದ್ದಾರೆ. ಈ ಸಂಬಂಧ ಪೊಟೊ ಒಂದು ಸಖತ್ ವೈರಲ್ ಆಗುತ್ತಿದೆ.

ಪುಷ್ಪಾ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ತೆರೆಗೆ ಬಂದಿದ್ದು, ಕೇವಲ ತೆಲುಗಿನಲ್ಲಿ ಮಾತ್ರವಲ್ಲದೇ ಎಲ್ಲಾ ಭಾಷೆಗಳಲ್ಲೂ ಭಾರಿ ಹಿಟ್ ಪಡೆದುಕೊಂಡಿತ್ತು. ಇದೀಗ ಪುಷ್ಪಾ-2 ಸಿನೆಮಾದ ಮೇಲೆ ಎಲ್ಲರ ಕಣ್ಣಿದೆ. ಎಲ್ಲರೂ ಪುಷ್ಪಾ-2 ಗಾಗಿ ಈಗರ್‍ ಆಗಿ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಅಲ್ಲು ಅರ್ಜುನ್ ಹುಟ್ಟುಹಬ್ಬದ ಅಂಗವಾಗಿ ಪುಷ್ಪಾ-2 ಸಿನೆಮಾದ ಕೆಲ ಅಪ್ಡೇಟ್ ಗಳನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಆ ವಿಡಿಯೋ ಹಾಗೂ ಫಸ್ಟ್ ಲುಕ್ ಪೋಸ್ಟರ್‍ ಗಳು ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಸದ್ಯ ಈ ಸಿನೆಮಾದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದೆ.

ಈ ಸಿನೆಮಾದ ಕೆಲವೊಂದು ಆಸಕ್ತಿಕರವಾದ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ. ಇನ್ನೂ ಸಿನೆಮಾದ ಶೂಟಿಂಗ್ ವೇಳೆ ಸೆಟ್ ನೊಳಗೆ ಏ.26 ರಂದು ಜೂನಿಯರ್‍ ಎನ್.ಟಿ.ಆರ್‍ ಸರ್ಪ್ರೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಈ ಸಂಬಂಧ ಪೊಟೊ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೊಟೋದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಫಾರ್ಮಲ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಪುಷ್ಪಾ-2 ಸೆಟ್ ಗೆ ಏಕೆ ಎಂಟ್ರಿ ಕೊಟ್ಟರು ಎಂಬ ಬಗ್ಗೆ ಇದೀಗ ಹಾಟ್ ಟಾಪಿಕ್ ಆಗಿದೆ. ಜೂನಿಯರ್‍ ಎನ್.ಟಿ.ಆರ್‍ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್‌ಡೇ ಬಾವ ಎಂದು ಟ್ವೀಟ್ ಮಾಡಿದ್ದು, ಅದಕ್ಕೆ ಬಾವಾ ಹಗ್ ಎಂದು ರಿಪ್ಲೆ ಮಾಡಿದ್ದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಜೂನಿಯರ್‍ ಎನ್.ಟಿ.ಆರ್‍ ಪುಷ್ಪಾ-2 ಸಿನೆಮಾ ಶೂಟಿಂಗ್ ಸೆಟ್ ಗೆ ಎಂಟ್ರಿ ಕೊಟ್ಟಿದ್ದು ಏಕೆ ಎಂಬುದು ಹಾಟ್ ಟಾಪಿಕ್ ಆಗಿದೆ.

ಇನ್ನೂ ಜೂನಿಯರ್‍ ಎನ್.ಟಿ.ಆರ್‍ ರವರಿಗೆ ಅಲ್ಲು ಅರ್ಜುನ್ ಪಾರ್ಟಿ ಕೊಡಿಸಲು ಪುಷ್ಪಾ-2 ಸೆಟ್ ಗೆ ಆಹ್ವಾನಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ಸಹ ಕೊರಟಾಲ ಶಿವಾ ನಿದೇರ್ಶನದಲ್ಲಿ NTR30 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.

Most Popular

To Top