ಇಂಟರ್ ನೆಟ್ ಸರ್ವರ್ ಶೇಕ್ ಆಗುವಂತಹ ಸ್ಟನ್ನಿಂಗ್ ಪೋಸ್ ಕೊಟ್ಟ ರಕುಲ್, ಬ್ಲಾಕ್ ಗೌನ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಬ್ಯೂಟಿ….!

Follow Us :

ಪಂಜಾಬಿ ಮೂಲದ ನಟಿ ರಕುಲ್ ಪ್ರೀತ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಗ್ಯಾಪ್ ಇಲ್ಲದೇ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಟಾಲಿವುಡ್ ಸೇರಿದಂತೆ ಸೌತ್ ಅಂಡ್ ನಾರ್ತ್‌ನಲ್ಲಿ ಬಹುಬೇಡಿಕೆ ಹೊಂದಿರುವ ಈಕೆ ಕಳೆದ ವರ್ಷ ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳ ಮೂಲಕ ಸಖತ್ ಸೌಂಡ್ ಮಾಡಿದ್ದರು. ಇದೀಗ ಆಕೆ ಈವೆಂಟ್ ಒಂದರಲ್ಲಿ ಗ್ಲಾಮರ್‍ ಸುನಾಮಿಯನ್ನೇ ಸೃಷ್ಟಿ ಮಾಡಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಸಿನಿರಸಿಕರಿಗೆ ಅಷ್ಟೊಂದು ಪರಿಚಯ ಬೇಡದ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಕಳೆದ ವರ್ಷ ಐದಾರು ಸಿನೆಮಾಗಳಲ್ಲಿ ರಕುಲ್ ಪ್ರೀತ್ ನಟಿಸಿದ್ದರು. ಆದರೆ ಈ ಪೈಕಿ ಯಾವುದೇ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ಮತ್ತೆ ಸೌತ್ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ರಕುಲ್ ತನ್ನ ಪ್ರಿಯಕರ ಜಾಗಿ ಭಗ್ನಾನಿ ಜೊತೆಗೆ ಕೆಲವೊಂದು ಈವೆಂಟ್ ಗಳು, ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಾ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಜೊತೆಗೆ ಆಯಾ ಕಾರ್ಯಕ್ರಮಗಳ ಪೊಟೋಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ರಕುಲ್ GQ most influential young Indian awards ಎಂಬ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸಿನೆಮಾ ತಾರೆಯರು ಭಾಗಿಯಾಗಿದ್ದರು. ಇನ್ನೂ ರಕುಲ್ ಪ್ರೀತ್ ಸಿಂಗ್ ಈ ಕಾರ್ಯಕ್ರಮದಲ್ಲಿ ಬೋಲ್ಡ್ ಲುಕ್ಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದ್ದಾರೆ. ಇನ್ನೂ ಆಕೆ ಮಿತಿಮೀರಿ ಗ್ಲಾಮರ್‍ ಶೋ ಮಾಡಿದ್ದಾರೆ. ಲೇಟೆಸ್ಟ್ ಲುಕ್ಸ್ ನಲ್ಲಿ ರಕುಲ್ ಭಾರಿ ಮಟ್ಟದಲ್ಲೇ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ರಕುಲ್ ಪ್ರೀತ್ ಸಿಂಗ್ ಈ ಗ್ಲಾಮರ್‍ ಟ್ರೀಟ್ ಗೆ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ನೆಕ್ಸ್ಟ್ ಲೆವೆಲ್ ಎಂದೇ ಹೇಳಲಾಗುತ್ತಿದೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಜೊತೆಗೆ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ನಟಿ ರಕುಲ್ ತೆಲುಗು ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆದರೆ ತೆಲುಗಿನಲ್ಲಿ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಆಕೆ ಬಾಲಿವುಡ್ ಗೆ ಹಾರಿದರು. ಸದ್ಯ ರಕುಲ್ ಬಾಲಿವುಡ್ ನಲ್ಲೇ ಸೆಟಲ್ ಆಗಿದ್ದಾರೆ. ಇದೀಗ ಮತ್ತೆ ಟಾಲಿವುಡ್ ನತ್ತ ಮುಖ ಮಾಡುತ್ತಿದ್ದಾರೆ. ತಮಿಳಿನಲ್ಲಿ ಅಯಲಾನ್ ಎಂಬ ಸಿನೆಮಾದಲ್ಲಿ ಶಿವ ಕಾರ್ತಿಕೇಯನ್ ಜೊತೆಗೆ ಹಾಗೂ ಇಂಡಿಯನ್-2 ಸಿನೆಮಾದಲ್ಲಿ ಕಮಲ್ ಹಾಸನ್ ಜೊತೆಗೆ ಆಕೆ ನಟಿಸುತ್ತಿದ್ದಾರೆ. ಮತಷ್ಟು ಸಿನೆಮಾಗಳ ಚರ್ಚೆಯ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ.