Film News

ಅನೇಕ ಕತ್ತಲೆಯ ದಿನಗಳಲ್ಲಿ ನರಳಿದ್ದೇನೆ ಎಂದ ಸ್ಯಾಮ್, ಅಭಿಮಾನಿಗಳ ಮನ ಕಲಕುವ ವಿಷಯ ತಿಳಿಸಿದ ಸಮಂತಾ…!

ಸ್ಟಾರ್‍ ನಟಿ ಸಮಂತಾ ಇಂದು ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಏಕಾಂಗಿ ಹೋರಾಟ ಮಾಡುತ್ತಾ, ಬಲಶಾಲಿಯಾಗಿ ಮುಂದೆ ಸಾಗುತ್ತಿದ್ದಾರೆ. ವಿಚ್ಚೇದನ, ಮಯೋಸೈಟಿಸ್ ಕಾರಣದಿಂದಾಗಿ ಆಕೆ ತುಂಬಾ ಕುಗ್ಗಿದ್ದರು. ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಸಮಂತಾ ಗೆ ಅಷ್ಟೊಂದು ಕಷ್ಟಗಳು ಬರಬಾರದಿತ್ತು ಎಂದು ಹೇಳುತ್ತಾರೆ. ಓರ್ವ ಮಹಿಳೆಗೆ ವಿಚ್ಚೇದನ ಎಂಬುದು ಅತ್ಯಂತ ದುಃಖಕರವಾದ ವಿಚಾರ. ಅದನ್ನು ಧೈರ್ಯವಾಗಿ ಎದುರಿಸಿದ್ದಾರೆ ಸಮಂತಾ. ಅದರಿಂದ ಹೊರಬರುವಷ್ಟರಲ್ಲೇ ಮಯೋಸೈಟಿಸ್ ವ್ಯಾಧಿಗೆ ಗುರಿಯಾದರು. ಅದರ ವಿರುದ್ದ ಸಹ ಹೋರಾಟ ಮಾಡಿ ದೃಢ ಸಂಕಲ್ಪದೊಂದಿಗೆ ಇದೀಗ ಮರಳಿ ಯತಾಸ್ಥಿತಿಗೆ ಬಂದಿದ್ದಾರೆ.

ಮಯೋಸೈಟಿಸ್ ವಿರುದ್ದ ತಿಂಗಳುಗಳ ಕಾಲ ಹೋರಾಟ ನಡೆಸಿದ ಇದೀಗ ಮೊದಲಿನ ಸ್ಥಿತಿಗೆ ತಲುಪಿದ್ದಾರೆ. ರೆಗ್ಯುಲರ್‍ ಆಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ, ಮಾನಸಿಕ ಹಾಗೂ ಶಾರೀರಿಕವಾಗಿಯೂ ದೃಢವಾಗಿದ್ದಾರೆ. ಇನ್ನೇನು ಸಮಂತಾ ಈಸ್ ಬ್ಯಾಕ್ ಎಲ್ಲವನ್ನೂ ಮರೆತು ಆಕೆ ಸಾಮಾನ್ಯ ಜೀವನ ಸಾಗಿಸುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಇನ್ನೂ ಆಕೆ ಹಳೆಯ ನೆನಪುಗಳನ್ನು ಮರೆತಿಲ್ಲ. ಇನ್ನೂ ವಿಚ್ಚೇದನದ ಘಟನೆ ತನ್ನನ್ನು ಕಾಡುತ್ತಿದೆ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಮಂತಾ ಹೇಳಿದ್ದಾರೆ. ವಿಚ್ಚೇದನದ ಬಳಿಕ ಆಕೆಯ ಜೀವನದಲ್ಲಿ ಎದುರಾದ ಅನೇಕ ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ.

ಇನ್ನೂ ಸಮಂತಾ ಸಂದರ್ಶನದಲ್ಲಿ ಮಾತನಾಡುತ್ತಾ ನನಗೆ ಅಂದಿನ ಕತ್ತಲೆಯ ದಿನಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಸ್ವತಂತ್ರ ಮಹಿಳೆ, ಬಲವಾದ ಮಹಿಳೆ ಎಂದು ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ನಾನು ಮಾತ್ರ ಆ ರೀತಿಯಾಗಿ ಭಾವಿಸುತ್ತಿಲ್ಲ. ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ತುಂಬಾ ಕಣ್ಣಿರು, ಕಷ್ಟಗಳು, ನೋವುಗಳು ನೋಡಿದ್ದೇನೆ. ನನಗೆ ಒಳ್ಳೆಯದು ಆಗುತ್ತಾ ಎಂದು ತಾಯಿ ಕೇಳುತ್ತಾ ಇದ್ದರು. ತುಂಬಾ ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ಎದುರಾದ ಕತ್ತಲೆಯ ದಿನಗಳನ್ನು ನೋಡಿದ್ದೇನೆ. ಆ ಸಮಯದಲ್ಲಿ ಹುಚ್ಚು ಹುಚ್ಚು ಆಲೋಚನೆಗಳು ಬರುತ್ತಿತ್ತು. ಆ ಯೋಚನೆಗಳು ನನ್ನನ್ನು ನಾಶ ಮಾಡಬಾರದು ಎಂದು ನಿರ್ಣಯ ತೆಗೆದುಕೊಂಡೆ ಮುಂದೆ ಹೆಜ್ಜೆ ಹಾಕಿದೆ. ಕುಟುಂಬ್ಥರು, ಸ್ನೇಹಿತರು ನನ್ನೊಂದಿಗೆ ಇದ್ದಾರೆ ಎಂದು ಭಾವಿಸಿದೆ. ಅವರಿಂದಲೇ ಈಗ ನಾನು ಇಲ್ಲಿದ್ದೇನೆ. ಆ ಸಮಯದಲ್ಲಿ ನನ್ನ ಮನಸಿಗೆ ಅನ್ನಿಸಿದ್ದನು ಮಾಡಿದ್ದೆ, ಏನು ಮಾಡುತ್ತಿದ್ದೇನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಂತಹ ಕಷ್ಟಕರವಾದ ಸಮಯದಲ್ಲಿ ನನಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಇನ್ನೂ ಸಮಂತಾ ಹೇಳಿಕೆಗಳು ಅವರ ಅಭಿಮಾನಿಗಳ ಮನ ಕದಡುವಂತೆ ಮಾಡಿದೆ. ವಿಚ್ಚೇದನ ಕಹಿ ಸನ್ನಿವೇಶಗಳನ್ನು ಆಕೆ ಇನ್ನೂ ಮರೆಯದೆ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅದರಲ್ಲೂ ಮಯೋಸೈಟಿಸ್ ಸಮಯದಲ್ಲಿ ತುಂಬಾ ದುಃಖ ಭಯ ಪಟ್ಟಿದ್ದರಂತೆ ಆದರೆ ಆ ವ್ಯಾಧಿಯನ್ನು ಎದುರಿಸಲು ಅಷ್ಟೊಂದು ಧೈರ್ಯ ಹೇಗೆ ಬಂತು ಎಂಬುದು ಮಾತ್ರ ಅರ್ಥವಾಗಿಲ್ಲ ಎಂದಿದ್ದಾರೆ. ಇನ್ನೂ ಸಮಂತಾ ಶಾಕುತಲಂ ಎಂಬ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾ ಏ.14 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಸಹ ಭರದಿಂದ ಸಾಗುತ್ತಿದೆ.

Most Popular

To Top