ಸಲಾರ್ ಬೈಕ್ ನಿಮಗೆ ಬೇಕೆ, ಆದರೆ ಹೊಂಬಾಳೆ ಫಿಲಂಸ್ ನೀಡಿದೆ ಭರ್ಜರಿ ಆಫರ್, ಮತ್ಯಾಕೆ ತಡ ನೀವು ಟ್ರೈ ಮಾಡಿ….!

Follow Us :

ಭಾರಿ ನೀರಿಕ್ಷೆ ಮೂಡಿಸಿದ ಸಿನೆಮಾಗಳಲ್ಲಿ ಪ್ರಶಾಂತ್ ನೀಲ್ ಹಾಗೂ ಬಾಹುಬಲಿ ಪ್ರಭಾಸ್ ರವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಸಲಾರ್‍ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿದೆ. ಕನ್ನಡ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಸಿನೆಮಾವನ್ನು ನಿರ್ಮಾಣ ಮಾಡಿದೆ. ಈ ಸಿನೆಮಾದಲ್ಲಿ ನಟ ಪ್ರಭಾಸ್ ಬಳಕೆ ಮಾಡಿದಂತಹ ಬೈಕ್ ಅನೇಕ ಬೈಕ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಇದೀಗ ಆ ಬೈಕ್ ಸ್ವಂತ ಮಾಡಿಕೊಳ್ಳುವ ಅವಕಾಶವನ್ನು ಸಲಾರ್‍ ಟೀಂ ನೀಡಿದೆ. ಈ ಬೈಕ್ ಹೇಗೆ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದೆ.

ಹೈವೋಲ್ಟೇಜ್ ಸಿನೆಮಾ ಎಂದೇ ಕರೆಯಲಾಗುವ ಸಲಾರ್‍ ನಲ್ಲಿ ನಟ ಪ್ರಭಾಸ್ ಅನೇಕ ದೃಶ್ಯಗಳಲ್ಲಿ ಬೈಕ್ ಓಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಈ ಬೈಕ್ ಮೇಲೆ ಪ್ರಭಾಸ್ ಫ್ಯಾನ್ಸ್ ಮಾತ್ರವಲ್ಲದೇ ಅನೇಕ ಬೈಕ್ ಲವರ್ಸ್‌ಗೂ ಕಣ್ಣು ಬಿದ್ದಿದೆ. ಈ ಬೈಕ್ ಸ್ವಂತ ಮಾಡಿಕೊಳ್ಳಬೇಕೆಂಬ ಆಸೆ ಅನೇಕರಿಗಿದೆ. ಇದೀಗ ಆ ಬೈಕ್ ಸ್ವಂತ ಮಾಡಿಕೊಳ್ಳುವಂತಹ ಅವಕಾಶವನ್ನು ಹೊಂಬಾಳೆ ಫಿಲಂಸ್ ನೀಡಿದೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಗಿವ್ ಅವೇ ಅನ್ನು ಅನೌನ್ಸ್ ಮಾಡಿದೆ. ಪ್ರಭಾಸ್ ಬೈಕ್ ಓಡಿಸುತ್ತಿರುವ ಪೋಸ್ಟರ್‍ ಅನ್ನು ಶೇರ್‍ ಮಾಡಿ ಗಿವ್ ಅವೇ ಅನೌನ್ಸ್ ಮಾಡಿದ್ದಾರೆ. ಪ್ರಭಾಸ್ ಓಡಿಸಿದ ಬೈಕ್ ಅನ್ನು ಯಾವ ರೀತಿ ಸ್ವಂತ ಮಾಡಿಕೊಳ್ಳಬೇಕು. ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

ಇನ್ನೂ ಹೊಂಬಾಳೆ ಫಿಲಂಸ್ ಹಂಚಿಕೊಂಡ ಈ ಪೋಸ್ಟ್ ನಲ್ಲಿ SalaarCeaseFire ನಲ್ಲಿ ರೆಬೆಲ್ ಸ್ಟಾರ್‍ ಪ್ರಭಾಸ್ ಓಡಿಸಿದ ಐಕಾನಿಕ್ ಬೈಕ್ ಗೆದ್ದುಕೊಳ್ಳಲು ನಿಮಗೆ ದೊಡ್ಡ ಆಫರ್‍. ನೀವು ಮಾಡಬೇಕಾಗಿದ್ದು ಇಷ್ಟೆ ಏಪ್ರಿಲ್ 21 ರಂದು ಸಂಜೆ 5.30 ರಿಂದ 8 ಗಂಟೆಯವರೆಗೂ ಸ್ಟಾರ್‍ ಮಾ ಚಾನಲ್ ನಲ್ಲಿ ಸಲಾರ್‍ ಸಿನೆಮಾ ಪ್ರಸಾರವಾಗುತ್ತದೆ. ಈ ಸಮಯದಲ್ಲಿ ಸ್ಕ್ರೀನ್ ಎಡಭಾಗದಲ್ಲಿ ಬೈಕ್ ಇಮೇಜ್ ಎಷ್ಟು ಭಾರಿ ಕಾಣಿಸುತ್ತದೆ ಎಂಬುದನ್ನು ಲೆಕ್ಕ ಮಾಡಬೇಕು. SMS ಲೈನ್ ಓಪೆನ್ ಆದಾಗ SALAAR <space> <ಸ್ಕ್ರೀನ್ ಮೇಲೆ ಬೈಕ್ ಕಾಣಿಸಿದ ಸಂಖ್ಯೆ> 9222211199కి SMS ಕಳುಹಿಸಿ. 2024 ಏಪ್ರಿಲ್ 8 ಗಂಟೆಯಿಂದ SMS ಲೈನ್ ಒಪೆನ್ ಆಗುತ್ತದೆ. ನಿಯಮ ನಿಬಂಧನೆಗಳು ಅನ್ವಯಿಸುತ್ತವೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

ಇನ್ನೂ ಸಲಾರ್‍ ಸೀಜ್ ಫೈರ್‍ ಸೌತ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಆದರೆ ಫಸ್ಟ್ ವೀಕೆಂಡ್ ಆದ ಕೂಡಲೇ ಕಲೆಕ್ಷನ್ ಡ್ರಾಪ್ ಆಗಿದೆ. ಆದರೂ ಸಹ ಸಲಾರ್‍ ಒಳ್ಳೆಯ ಕಲೆಕ್ಷನ್ ಮಾಡಿ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ ಎನ್ನಬಹುದಾಗಿದೆ. ಇದೀಗ ಸಲಾರ್‍ 2 ಸಿನೆಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.