Film News

ಪತ್ನಿಯ ಎಚ್ಚರಿಕೆಗೂ ಡೋಂಟ್ ಕೇರ್ ಎಂದು ನನ್ನ ದಿನ ಹತ್ತಿರವಾಗಿದೆ ಎಂದ ರವಿಂದರ್, ವೈರಲ್ ಆದ ಪೋಸ್ಟ್…..!

ಕಾಲಿವುಡ್ ನಿರ್ಮಾಫಕ ರವೀಂದರ್‍ ಚಂದ್ರಶೇಖರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಮದುವೆಯಾಗಿ ಭಾರಿ ಸುದ್ದಿಯಾಗಿದ್ದರು. ಸುರಸುಂದರಿಯಾದ ಮಹಾಲಕ್ಷ್ಮೀ ದಡೂತಿ ದೇಹವನ್ನು ಹೊಂದಿರುವ ರವಿಂದ್ರ ಚಂದ್ರಶೇಖರ್‍ ರವರನ್ನು ಮದುವೆಯಾಗಿದ್ದು, ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇದ್ದರು. ಆದರೆ ಇತ್ತೀಚಿಗೆ ರವಿಂದರ್‍ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದು, ಅವರ ನಡುವೆ ವಿಬೇದಗಳು ಉಂಟಾಗಿದೆಯೇ ಎಂಬ ಅನುಮಾನಗಳು ಮೂಡಿದೆ. ಇದೀಗ ರವಿಂದರ್‍ ಹಂಚಿಕೊಂಡ ಮತ್ತೊಂದು ಪೋಸ್ಟ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.

ನಿರ್ಮಾಪಕ ರವೀಂದರ್‍ ಇತ್ತೀಚಿಗೆ ಕೆಲವೊಂದು ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ವಂಚನೆ ಪ್ರಕರಣವೊಂದರಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಜೈಲಿಗೆ ಹೋಗಿ ಬಂದಿದ್ದರು. ಈ ನಡುವೆ ಅವರಿಗೆ ಆರೋಗ್ಯ ಸಮಸ್ಯೆ ಸಹ ಇದೆ ಎನ್ನಲಾಗಿತ್ತು. ಜೊತೆಗೆ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದರು. ಅಂತಹ ಪೋಸ್ಟ್ ಗಳನ್ನು ಹಂಚಿಕೊಳ್ಳದಂತೆ ಮಹಾಲಕ್ಷ್ಮೀ ಎಚ್ಚರಿಕೆ ಸಹ ನೀಡಿದ್ದರು. ಆದರೂ ಸಹ ರವೀಂದರ್‍ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ರವೀಂದರ್‍ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ಈ ಪೋಸ್ಟ್ ನೋಡಿದರೇ ಆತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರೇ ಎಂಬ ಅನುಮಾನಗಳು ಕಾಡತೊಡಗಿದೆ. ಅಷ್ಟಕ್ಕೂ ಅವರು ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ನಿರ್ಮಾಪಕರ ರವೀಂದರ್‍ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿರುವಂತೆ, ಕೆಟ್ಟ ಭಾವನೆ ಎನ್ನುವುದು ಒಂದು ಸಂದರ್ಭ, ಕೆಟ್ಟ ವಾತಾವರಣ ಎನ್ನುವುದು ಋಣಾತ್ಮಕ ಶಕ್ತಿ. ಪ್ರತಿ ದಿನ ಕೆಟ್ಟ ದಿನವಾಗಿರಲ್ಲ. ನನ್ನ ದಿನಗಳು ಹತ್ತಿರವಾಗುತ್ತಿವೆ. ಆದರೆ ನಾನು ಲಕ್ಷಾಂತರ ಬಾರಿ ಒಳ್ಳೆಯತನ, ಕೆಟ್ಟದರಿಂದ ಪರೀಕ್ಷೆಗೆ ಒಳಪಡುತ್ತಿದ್ದೇನೆ ಎಂದು ಅವರು ತಮ್ಮ ಇನ್ಸ್ಟಾಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಗೆ ಮಹಾಲಕ್ಷ್ಮೀ ಸಹ ಲೈಕ್ ಮಾಡಿದ್ದಾರೆ. ಆದರೆ ಈ ಪೋಸ್ಟ್ ಗೆ ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.  ಪೋಸ್ಟ್ ನಲ್ಲಿ ರವೀಂದರ್‍ಬ್ಲಾಕ್ ಕಲರ್‍ ಚೆಕ್ಸ್ ಶರ್ಟ್ ಧರಿಸಿದ್ದಾರೆ. ಗಡ್ಡ ಮೀಸೆ ಬಿಟ್ಟು ಕಾಣಿಸಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತಿದೆ.

ಇನ್ನೂ ರವೀಂದರ್‍ ಹಂಚಿಕೊಂಡ ಪೋಸ್ಟ್ ನಿಂದಾಗಿ ಅವರಿಗೆ ಏನಾಗಿದೆ, ಆರೋಗ್ಯ ಸಮಸ್ಯೆ ಇದೆಯೇ, ದಿನಗಳು ಹತ್ತಿರವಾಗಿದೆ ಎಂದರೇ ಅರ್ಥವಾದರೂ ಏನು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ರವೀಂದರ್‍ ಹಂಚಿಕೊಂಡ ಪೋಸ್ಟ್ ಗೆ ಕಾಮೆಂಟ್ ಬಾಕ್ಸ್ ಆಫ್ ಮಾಡಿರೋದು ಮತಷ್ಟು ಆತಂಕಕ್ಕೆ ಕಾರಣವಾಗಿದೆ.

Most Popular

To Top