ಎಲ್ಲರ ಮೆಚ್ಚುಗೆಗೆ ಪಾತ್ರರಾದ ರೌಡಿ ಹಿರೋ ವಿಜಯ್ ದೇವರಕೊಂಡ, ಪುಟಾಣಿಗೆ ಆರ್ಥಿಕ ಸಹಾಯ ನೀಡಿದ ನಟ…!

Follow Us :

ಟಾಲಿವುಡ್ ಸಿನಿರಂಗದಲ್ಲಿ ತಮ್ಮ ನಟನೆಯ ಮೂಲಕ ಭಾರಿ ಫೇಂ ಪಡೆದುಕೊಂಡ ನಟ ವಿಜಯ್ ದೇವರಕೊಂಡ ಖುಷಿ ಸಿನೆಮಾದ ಸಕ್ಸಸ್ ನಲ್ಲಿ ತೇಲಾಡುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಗಾಗ ಕೆಲವೊಂದು ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಅವಕಾಶ ಸಿಕ್ಕಾಗಲೆಲ್ಲಾ ಅನೇಕ ಬಡವರಿಗೆ ಸಹಾಯ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ಪುಟಾಣಿ ಬಾಲಕಿಯೊಬ್ಬರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಖುಷಿ ಸಿನೆಮಾದ ಸಕ್ಸಸ್ ಈವೆಂಟ್ ನಲ್ಲಿ ಕೋಟಿ ರೂಪಾಯಿಯನ್ನು ನೂರು ಮಂದಿ ರೈತರಿಗೆ ನೀಡಲು ತೀರ್ಮಾನಿಸಿ ಅದರಂತೆ ನೀಡಿದ್ದರು. ಇದೀಗ ಪುಟಾಣಿಯೊಬ್ಬರಿಗೆ ಆರ್ಥಿಕ ಸಹಾಯ ನೀಡಿದ್ದಾರೆ.  ಶ್ರೀಕಾಕುಳಂ ಜಿಲ್ಲೆಯ ಕೋಟಬೊಮ್ಮಾಳಿ ವ್ಯಾಪ್ತಿಯ ಕುರುಡು ಎಂಬ ಗ್ರಾಮದ ಅಪ್ಪನಾಯುಡು ಕೃಷ್ಣವೇಣಿ ದಂಪತಿಯ ಪುತ್ರಿ ಷರ್ಮಿಲಾ ಶ್ರೀ ಎಂಬ ಪುಟಾಣಿಗೆ ಆರ್ಥಿಯ ಸಹಾಯ ದೊರೆತಿದೆ. ಕಳೆದ ಆಗಸ್ಟ್ ಮಾಹೆಯಲ್ಲಿ ಷರ್ಮಿಳಾ ಗೆ ಆಟೋ ಡಿಕ್ಕಿ ಹೊಡೆದ ಕಾರಣದಿಂದ ಕಾಲಿಗೆ ದೊಡ್ಡ ಗಾಯವಾಗಿತ್ತು. ಇದರಿಂದಾಗಿ ಪುಟಾಣಿಯ ಬಲಗಾಲನ್ನು ತೆಗೆಯಬೇಕಾಯಿತು. ಬಡತನದ ಕಾರಣದಿಂದ ವೈದ್ಯಕೀಯ ಖರ್ಚುಗಳಿಗಾಗಿ ಈ ದಂಪತಿ ತುಂಬಾನೆ ಕಷ್ಟಪಡಬೇಕಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ವಿಜಯ್ ದೇವರಕೊಂಡ ಪುಟಾಣಿಗೆ ಆರ್ಥಿಕ ಸಹಾಯ ನೀಡಿದ್ದಾರೆ.

ಇತ್ತೀಚಿಗೆ ವಿಜಯ್ ದೇವರಕೊಂಡ ಅಭಿಮಾನಿಗಳು ಪುಟಾಣಿಯ ಕುಟಂಬವನ್ನು ಭೇಟಿಯಾಗಿ ಲಕ್ಷ ರೂಪಾಯಿ ಚೆಕ್ ಅನ್ನು ನೀಡಿದ್ದರು. ವಿಜಯ್ ಅಭಿಮಾನಿಯಾದ ಅಲ್ಲು ತಾರಕ್ ಸಮ್ಮುಖದಲ್ಲಿ ಆರ್ಥಿಕ ಸಹಾಯ ಮಾಡಿದ್ದಾರೆ. ಆರ್ಥಿಕ ಸಹಾಯ ಮಾಡಿದಂತಹ ವಿಜಯ್ ದೇವರಕೊಂಡ ರವರಿಗೆ ಪುಟಾಣಿ ಹಾಗೂ ಆಕೆಯ ಕುಟುಂಬ ಸದಸ್ಯರು ಮನಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಈ ಹಿಂದೆ ಸಹ ಕೋವಿಡ್ ಸಮಯದಲ್ಲಿ ಬಡವರಿಗೆ ತನ್ನ ಕೈಲ್ಲಾದ ಸಹಾಯ ಮಾಡಿದ್ದಾರೆ. ಲೈಗರ್‍ ಸಿನೆಮಾದ ಮೂಲಕ ದೊಡ್ಡ ಸೋಲನ್ನು ಕಂಡ ವಿಜಯ್ ದೇವರಕೊಂಡಗೆ ಖುಷಿ ಸಿನೆಮಾ ಒಳ್ಳೆಯ ಸಕ್ಸಸ್ ಕೊಟ್ಟಿದೆ. ಇದೀಗ ಆಕೆ ಫ್ಯಾಮಿಲಿ ಸ್ಟಾರ್‍, VD12 ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.