News

ತಿಮ್ಮಪ್ಪನ ಹುಂಡಿ, ಅಕ್ಟೋಬರ್ ಮಾಹೆಯಲ್ಲೂ ದಾಖಲೆ ಆದಾಯ, ವೈಕುಂಠ ದರ್ಶನಕ್ಕೆ 2.25 ಲಕ್ಷ ಟಿಕೆಟ್ ಗಳು…..!

ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಮಲ ತಿಮ್ಮಪ್ಪನ ದೇವಾಲಯವೂ ಸಹ ಒಂದಾಗಿದೆ. ಪ್ರತಿನಿತ್ಯ ಲಕ್ಷಾಂತರ ಮಂದಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಅದರಲ್ಲೂ ಕಳೆದ ಸೆಪ್ಟೆಂಬರ್‍ ಹಾಗೂ ಅಕ್ಟೋಬರ್‍ ಎರಡು ಮಾಹೆಯಲ್ಲಿ ಎರಡು ಬ್ರಹ್ಮೋತ್ಸವಗಳು ಬಂದ ಕಾರಣ ಮತಷ್ಟು ಭಕ್ತರು ವೆಂಕಟೇಶ್ವರನ ದರ್ಶನ ಪಡೆದಿದ್ದು, ಅಕ್ಟೋಬರ್‍ ಮಾಹೆಯಲ್ಲಿ ನೂರು ಕೋಟಿ ಆದಾಯ ಬಂದಿದೆ ಎಂದು ತಿಳಿದುಬಂದಿದ್ದು, ಸುಮಾರು 21.75 ಲಕ್ಷ ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜೊತೆಗೆ 8 ಲಕ್ಷಕ್ಕೂ ಅಧಿಕ ಮಂದಿ ಕೂದಲನ್ನು ಮುಡಿ ಕೊಟ್ಟು ಹರಿಕೆ ತೀರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಮೂಲಗಳ ಪ್ರಕಾರ ಅಕ್ಟೋಬರ್‍ ಮಾಹೆಯಲ್ಲಿ ದೇವರ ಹುಂಡಿಯಲ್ಲಿ ಸುಮಾರು 108.65 ಕೋಟಿ ಸಂಗ್ರಹವಾಗಿದೆ. ಅಕ್ಟೋಬರ್‍ ಮಾಹೆಯಲ್ಲಿ 1.05 ಕೋಟಿ ಲಡ್ಡುಗಳನ್ನು ಭಕ್ತರಿಗೆ ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಮಾರ್ಚ್ ಮಾಹೆಯಿಂದ ತಿರುಮಲದ ಆದಾಯ ನೂರು ಕೋಟಿ ಗಡಿ ತಲುಪುತ್ತಿದೆ. ಕೋವಿಡ್ ಕಾರಣದಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಇದೀಗ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಹಬ್ಬ ಹರಿದಿನಗಳು ಹಾಗೂ ವಾರಾಂತ್ಯದಲ್ಲಿ ಭಕ್ತರ ನೂಕು ನುಗ್ಗಲು ಸಹ ಆಗುತ್ತಿದೆ. ತಿಮ್ಮಪ್ಪನ ದರ್ಶನಕ್ಕೆ ಗಂಟೆ ಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಸಹ ಇದೆ.

ಇನ್ನೂ ಡಿಸೆಂಬರ್‍ 23  ರಿಂದ ಜನವರಿ 1, 2024 ರವರೆಗೂ ತಿಮ್ಮಪ್ಪನ ಆಲಯದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಸುಮಾರು 2.25 ಲಕ್ಷ 300 ರೂಪಾಯಿ ದರ್ಶನದ ಟಿಕೆಟ್ ಗಳನ್ನು ನವೆಂಬರ್‍ 10 ರಂದು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುವುದಾಗಿ ಟಿಟಿಡಿ ತಿಳಿಸಿದೆ. 10 ದಿನಗಳ ಕಾಲ ಭಕ್ತರಿಗೆ ವೈಕುಂಟ ದ್ವಾರ ದರ್ಶನಕ್ಕೆ ಅವಕಾಶ ಇರಲಿದೆಯಂತೆ. ತಿರುಪತಿಯಲ್ಲಿ 9 ಕೇಂದ್ರಗಳಲ್ಲಿ ನೂರು ಕೌಂಟರ್‍ ಗಳಲ್ಲಿ ಡಿ.22 ರಂದು ವೈಕುಂಠ ದ್ವಾರ ದರ್ಶನಕ್ಕೆ, 10 ದಿನಗಳ ಟೈಂ ಸ್ಲಾಟ್ ನಲ್ಲಿ 4.25 ಲಕ್ಷ ಸರ್ವದರ್ಶನ ಟಿಕೆಟ್ ಗಳನ್ನು ನೀಡಲಾಗುತ್ತದೆಯಂತೆ. ಇನ್ನೂ ಡಿ.23 ರಿಂದ ಜ.1 ರವೆರೆಗೂ ಚಿಕ್ಕಮಕ್ಕಳು, ವಿಕಲಚೇತನರು, ವಯೋವೃದ್ದರು ಹಾಗೂ ಎನ್.ಆರ್‍.ಐ ದರ್ಶನಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.

Most Popular

To Top