Film News

ಪುಷ್ಪಾ ಸಿನೆಮಾ ಸ್ಟೈಲ್ ನಲ್ಲಿ ರಕ್ತಚಂದನ ಸಾಗಾಣೆ, ಅಪಘಾತದಿಂದ ಸಿಕ್ಕಿಬಿದ್ದ ದಂದೆಕೋರರು

ದೇಶದಾದ್ಯಂತ ಭಾರಿ ಸದ್ದು ಮಾಡಿದ ಪುಷ್ಪಾ ಸಿನೆಮಾದಲ್ಲಿ ರಕ್ತಚಂದನ ಕಳ್ಳ ಸಾಗಾಣಿಕೆ ಮಾಡಿದಂತೆ ಕೊಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಣೆ ಮಾಡುತ್ತಿರುವ ಕಾರು ಅಪಘಾತವಾಗಿರುವ ಘಟನೆ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 44 ಸಾದಲಿ ಕ್ರಾಸ್ ಬಳಿ ನಡೆದಿದೆ.

ತೆಲುಗಿನ ಪುಷ್ಪಾ ಸಿನೆಮಾದಲ್ಲಿ ರಕ್ತಚಂದನವನ್ನು ವಿವಿಧ ರೀತಿಯಲ್ಲಿ ಸಾಗಿಸುತ್ತಾರೆ. ಅದೇ ಮಾದರಿಯಲ್ಲಿ ಆಂಧ್ರಪ್ರದೇಶದ ಕಡಪ ಮೂಲದ ಮೂವರು ವ್ಯಕ್ತಿಗಳು ಆಂಧ್ರದ ಕಡಪ ದಿಂದ ಬೆಂಗಳೂರು ಕಡೆಗೆ ರಕ್ತ ಚಂದನದ ತುಂಡುಗಳನ್ನು ಸಾಗಿಸುತ್ತಿದ್ದರು. ಇನೋವಾ ಕಾರಿನಲ್ಲಿ ರಕ್ತಚಂದನ ಸಾಗಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ವೇಳೆ ರಕ್ತಚಂದನದ ತುಂಡುಗಳು ಹೊರ ಬಂದಿದೆ. ಈ ವೇಳೆ ಅಕ್ರಮವಾಗಿ ರಕ್ತ ಚಂದನದ ತುಂಡುಗಳನ್ನು ಸಾಗಾಣೆ ಮಾಡುತ್ತಿರುವುದು ತಿಳಿದುಬಂದಿದೆ.

ಇನ್ನೂ ಅಪಘಾತಗೊಂಡ ಇನೋವಾ ಕಾರು ಸಂಪೂರ್ಣವಾಗಿ ನುಜ್ಜು ನುಜ್ಜಾಗಿದೆ. ಕಾರಿನಲ್ಲಿರುವ ಮೂವರು ದಂದೆಕೋರರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಂದ್ರಪ್ರದೇಶ ಮೂಲದ ನಾಗೇಂದ್ರ, ಶ್ರೀನಿವಾಸಲು ಹಾಗೂ ನಾಗರಾಜು ಎಂದು ಗುರ್ತಿಸಲಾಗಿದೆ. ಇನ್ನೂ ಸಂಪೂರ್ಣವಾಗಿ ಜಖಂಗೊಂಡ ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪೇರೆಸಂದ್ರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Most Popular

To Top