ಆ ಸ್ಟಾರ್ ಹಿರೋ ಜೊತೆಗೆ ನಟಿಸಬೇಡ ಎಂದು ಜಾನ್ವಿ ಕಪೂರ್ ಗೆ ಆಕೆಯ ತಂದೆ ಕಂಡಿಷನ್ ಹಾಕಿದ್ದಾರಂತೆ? ಆ ಹಿರೋ ಯಾರು?

Follow Us :

ಬಾಲಿವುಡ್ ಸ್ಟಾರ್‍ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ಈಗಾಗಲೇ ಸಿನೆಮಾಗಳಲ್ಲಿ ನಟಿಸುತ್ತಾ ಸ್ವಂತ ಪ್ರತಿಭೆಯಿಂದ ಸಕ್ಸಸ್ ಕಾಣಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈಗಾಲೇ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಆದರೆ ಆಕೆಗೆ ಇನ್ನೂ ಬ್ರೇಕ್ ಸಿಗುವಂತಹ ಸಿನೆಮಾ ಸಿಕ್ಕಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಇದೀಗ ಜಾನ್ವಿ ಕಪೂರ್‍ ತಂದೆ ಬೋನಿ ಕಪೂರ್‍ ಆ ಹಿರೋ ಜೊತೆಗೆ ನಟಿಸಬೇಡ ಎಂದು ಹೇಳಿದ್ದಾರಂತೆ. ಅಷ್ಟಕ್ಕೂ ಆ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸಿನಿರಂಗದ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ಸಿನೆಮಾಗಳಲ್ಲಿ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಂತೂ ಸ್ಟಾರ್‍ ನಟಿಯರಿಗಿಂತಲೂ ಹೆಚ್ಚಿನ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈಕೆಯ ಅಪ್ಡೇಟ್ಸ್ ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ತಾಯಿಯನ್ನು ಸಹ ಮೀರಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಗ್ಲಾಮರ್‍ ಗೆ ತುಂಬಾನೆ ಪ್ರಾಧಾನ್ಯತೆ ಇದೆ. ಈ ಕಾರಣದಿಂದಲೇ ಆಕೆ ಸದಾ ಗ್ಲಾಮರಸ್ ಪೋಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಜಾನ್ವಿ ಸೌತ್ ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟಿದ್ದಾರೆ. ಗ್ಲೋಬಲ್ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ರವರ ಜೊತೆಗೆ ದೇವರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಇದರ ಜೊತೆಗೆ ಕಾಲಿವುಡ್ ನಲ್ಲಿ ಸಹ ಆಕೆ ಸಿನೆಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ದೇವರ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್‍ ಕಾಲಿವುಡ್ ಸಿನೆಮಾಗಳಲ್ಲೂ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜಾನ್ವಿ ತಂದೆ ಬೋನಿ ಕಪೂರ್‍ ಗೆ ಕಾಲಿವುಡ್ ಸ್ಟಾರ್‍ ಹಿರೋಗಳಾದ ವಿಜಯ್ ಅಥವಾ ಅಜಿತ್ ಸಿನೆಮಾಗಳ ಮೂಲಕ ಎಂಟ್ರಿ ಕೊಡಬೇಕೆಂಬುದು ಅವರ ಕೋರಿಕೆಯಂತೆ. ಈ ಕಾರಣದಿಂದ ಕಾಲಿವುಡ್ ಎಂಟ್ರಿ ಬಗ್ಗೆ ಬೋನಿ ಕಪೂರ್‍ ತನ್ನ ಮಗಳಿಗೆ ಕಂಡಿಷನ್ ಒಂದನ್ನು ಹಾಕಿದ್ದಾರಂತೆ. ಕಾಲಿವುಡ್ ನಲ್ಲಿ ಯಾವ ಹಿರೋ ಜೊತೆಗೆ ಬೇಕಾದರು ನಟಿಸಿದರೂ ನನಗೆ ಸಮಸ್ಯೆಯಿಲ್ಲ ಆದರೆ ಒರ್ವ ನಟನೊಂದಿಗೆ ಮಾತ್ರ ನಟಿಸಬೇಡ ಎಂದು ಮಗಳಿಗೆ ಕಂಡಿಷನ್ ಹಾಕಿದ್ದಾರಂತೆ.

ಕಾಲಿವುಡ್ ಸಿನಿರಂಗದಲ್ಲಿ ಭಾರಿ ಫೇಂ ಪಡೆದುಕೊಂಡಂತಹ ಸ್ಟಾರ್‍ ಹಿರೋ ಧನುಷ್ ಜೊತೆಗೆ ಮಾತ್ರ ಜಾನ್ವಿ ಕಪೂರ್‍ ನಟಿಸಬಾರದೆಂದು ಬೋನಿ ಕಪೂರ್‍ ಕಂಡಿಷನ್ ಹಾಕಿದ್ದಾರಂತೆ. ಅಷ್ಟಕ್ಕೂ ಸ್ಟಾರ್‍ ನಟ ಅದರಲ್ಲೂ ಸಕ್ಸಸ್ ಪುಲ್ ನಟನ ಜೊತೆಗೆ ನಟಿಸಬೇಡ ಎಂದು ಬೋನಿ ಕಪೂರ್‍ ಹೇಳಲು ಕಾರಣವಾದರು ಏನು ಎಂಬ ಚರ್ಚೆ ಇದೀಗ ಚರ್ಚೆಗೆ ಕಾರಣವಾಗಿದೆ. ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂಬುದನ್ನು ಪಕ್ಕಕ್ಕಿಟ್ಟರೇ ಸುದ್ದಿ ಮಾತ್ರ ಭಾರಿ ವೈರಲ್ ಆಗುತ್ತಿದೆ.