ಪ್ರಶಾಂತ್ ಸಂಬರಗಿಯನ್ನು ತರಾಟೆಗೆ ತೆಗೆದುಕೊಂಡ ದಿವ್ಯ ಉರುಡುಗ !

Follow Us :

ಬಿಗ್ ಬಾಸ್ ಮನೆಯಲ್ಲಿ 6 ನೇ ವಾರದ ಕ್ಯಾಪ್ಟನ್ಸಿ ಟಾಸ್ಕ್ ಆರಂಭವಾದಾಗ ಕ್ಯಾಪ್ಟನ್ ಅವರನ್ನು ಹೊರತು ಪಡಿಸಿ ಮನೆಯಲ್ಲಿ ಎರಡು ತಂಡಗಳನ್ನು ಮಾಡಲಾಗಿತ್ತು, ಶುಭಾ ಪೂಂಜಾ ನೇತೃತ್ವದ ತಂಡಕ್ಕೆ ಜಾತ್ರೆ ಗ್ಯಾಂಗ್ ಹಾಗೂ ದಿವ್ಯ ಉರುಡುಗ ತಂಡಕ್ಕೆ ಅನುಬಂಧ ಎಂದು ಹೆಸರಿಡಲಾಗಿತ್ತು. ಬಿಗ್ ಬಾಸ್ ನೀಡುವ ಸವಾಲುಗಳನ್ನು ಎದುರಿಸಿ ಜಯಶಾಲಿಯಾದ ತಂಡಕ್ಕೆ ಹಸಿರು ಬಣ್ಣದ ಇಟ್ಟಿಗೆಗಳನ್ನು ನೀಡಲಾಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಕಳೆದ 2 ದಿನಗಳಿಂದ ನಡೆಯುತ್ತಿದ್ದ ಗಡಿ ಗೋಪುರ ಟಾಸ್ಕ್ ಬಹಳ ರೋಚಕವಾಗಿಸಾಗಿತ್ತು. ಈ ನಡುವೆ ಬಿಗ್ ಬಾಸ್ ಕಡೆಯದಾಗಿ ನೀಡಿದಂತಹ ಅವಕಾಶದಲ್ಲಿ ಜಾತ್ರೆ ತಂಡದ ಸದಸ್ಯರು ಮತ್ತು ಅನುಬಂಧ ತಂಡದ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಗಿತ್ತು. ಬಿಗ್ ಬಿಸ್ ಕೊಟ್ಟ ಟಾಸ್ಕ್ ಅಂಗವಾಗಿ ಇಟ್ಟಿಗೆ ಓಡಿಯುವ ಸ್ಪರ್ಧಿಯಲ್ಲಿ ಎರಡು ತಂಡಗಳ ನಡುವೆ ಬಾರಿ ಪೈಪೋಟಿ ನಡೆಯಿತು. ಈ ಸಂಧರ್ಭದಲ್ಲಿ ದಿವ್ಯ ಉರುಡುಗ ಕೈಯಲ್ಲಿದ ಇಟ್ಟಿಗೆಯನ್ನು ಪ್ರಶಾಂತ್ ಸಂಬರ್ಗಿ ಎಳೆದುಕೊಂಡು ಒಡೆದು ಹಾಕಿದರು ಇದ್ದನ್ನು ಗಮನಿಸಿದಅರವಿಂದ್ ಇದು ಫೌಲ್ ಎಂದು ಪ್ರಶಾಂತ್ ವಿರುಧ್ಧ ಸಿಟ್ಟಿಗಿಳಿದರು.

ಇದರಿಂದ ಕೆರಳಿದ ಪ್ರಶಾಂತ್ ರವರು “ನಿನಗೆ ನಿನ್ನ ಗರ್ಲ್ ಫ್ರೆಂಡ್ ಕೈ ಹಿಡಿದಿದ್ರಿಂದ ಬೇಜಾರ್ ಅಗಿದ್ದು ಅಲ್ವಾ ” ಎಂದು ಪ್ರಶ್ನಿಸಿದರು.
ಪ್ರಶಾಂತ್ ಅವರ ಹೇಳಿಕೆಗಳಿಂದ ಕೆರಳಿದ ದಿವ್ಯಾ ಉರುಡುಗ ಪ್ರಶಾಂತ್ ಸಾಂಬರ್ಗಿ ಕಡೆ ತಿರುಗಿ, ಅರವಿಂದ್ ಅವರೊಂದಿಗೆ ವಾದ ಮಾಡುವಾಗ ತನ್ನ ಹೆಸರನ್ನು ಸೇರಿಸಿದ್ದಕ್ಕಾಗಿ ವಿವರಣೆಯನ್ನು ಕೋರಿದರು. ಪ್ರಶಾಂತ್ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ದಿವ್ಯಾ ಅವರ ಸಮರ್ಥನೆಯನ್ನು ಕೇಳಲು ಪ್ರಯತ್ನಿಸಿದರು. ಮತ್ತೊಂದೆಡೆ, ವಾದದ ಸಮಯದಲ್ಲಿ ಹುಡುಗಿಯ ಹೆಸರನ್ನು ಲಿಂಕ್ ಮಾಡದಂತೆ ರಾಜೀವ್ ಮತ್ತು ಮಂಜು ಪಾವಗಡ ಸಹ ಪ್ರಶಾಂತ್ ಸಾಂಬರ್ಗಿಯನ್ನು ಕೇಳಿದರು. ಪ್ರಶಾಂತ್ ಗೆ ದಿವ್ಯ ಹಾಕಿದ ಪ್ರಶ್ನೆಗಳು ಪ್ರಶಾಂತ್ ಸಂಬರಗಿಗೆ ಚಾಟಿ ಏಟು ಬೀಸಿದ ಹಾಗಿತ್ತು.